ಕ್ರಿಶ್ಚಿಯನ್‌ ಶಾಲೆಯಲ್ಲಿ ಹಿಂದೂ ಸಂಸ್ಕ್ರತಿಯ ಯಾವುದೇ ಶೃಂಗಾರ ಕಾಣುವಂತಿಲ್ಲ, ಮಕ್ಕಳ ಮೇಲೆ ಎಗರಿ ಬೀಳುವ ಶಿಕ್ಷಕರು

 | 
Fhu

ಹಿಂದು ಧರ್ಮ ಹಾಗೂ ಶ್ರೀರಾಮನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ನಗರದ ಸಂತ ಜೆರೊಸಾ ಶಾಲೆ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ. ಶಿಕ್ಷಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಪೋಷಕರು ಹಾಗೂ ಹಿಂದು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ, ಶಾಲೆಯ ಆಡಳಿತ ಮಂಡಳಿಯು ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ಅಮಾನತು ಮಾಡಿದೆ.

ಸಂತ ಜೆರೋಸಾ ಶಾಲೆಯ ಶಿಕ್ಷಕಿಯಿಂದ ಹಿಂದು ಧರ್ಮಕ್ಕೆ ಅವಮಾನವಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ನಗರದ ಉರ್ವ ಬಳಿಯಿರುವ ಶಿಕ್ಷಣ ಇಲಾಖೆಯ ಕಚೇರಿ ಮುಂಭಾಗ ವಿಶ್ವ ಹಿಂದು ಪರಿಷತ್‌, ಬಜರಂಗದಳ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಶಾಸಕ ಭರತ್ ಶೆಟ್ಟಿ, ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್‌ ಮತ್ತಿತರರು ಶಿಕ್ಷಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.

ಇನ್ನು ನಾವು ಹಣೆಗೆ ಕುಂಕುಮ ಇಡುವಂತಿಲ್ಲ. ದೇವರ ದಾರ ಧರಿಸುವಂತಿಲ್ಲ. ಮೆಹೆಂದಿ, ಬಳೆ ಬಳಸುವಂತಿಲ್ಲ ಎಲ್ಲವಕ್ಕೂ ಫೈನ್ ಹಾಕುತ್ತಿದ್ದರು. ಈಗ ನಮಗೆ ಸಂತೋಷವಾಗಿದೆ ಎಂದು ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದ್ದಾರೆ. ಏಳನೇ ತರಗತಿ ಶಿಕ್ಷಕಿ ಸಿಸ್ಟರ್ ಪ್ರಭಾ ಅಮಾನತುಗೊಂಡ ವಿಷಯ ತಿಳಿದ ಕೂಡಲೇ ಶಾಲೆಯಿಂದ ಅಮಾನತು ಶಾಲೆಯಿಂದ ಹೊರ ಬಂದ ವಿದ್ಯಾರ್ಥಿಗಳು, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ಈ ವೇಳೆ ಶಿಕ್ಷಕಿ ಪ್ರಭಾ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ, ವಿದ್ಯಾರ್ಥಿಗಳು ಕುಣಿದು ಸಂಭ್ರಮಿಸಿದರು.

ಕಲ್ಲನ್ನು ಅಲಂಕಾರ ಮಾಡಿ ಇವನು ಶ್ರೀ ರಾಮ ಎಂದರೆ ಅವನೇನು ಅಲ್ಲಿ ಬಂದು ಕುಳಿತುಕೊಳ್ಳುತ್ತಾನಾ?  ಹಿಂದು ಧರ್ಮಕ್ಕೆ ಬೇರೆ ದೇಶಗಳಲ್ಲಿ ಅಸ್ತಿತ್ವವೇ ಇಲ್ಲ.. ಹೀಗೆ ಶ್ರೀರಾಮ, ಹಿಂದು ಧರ್ಮ, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿದ್ದ ಕ್ರೈಸ್ತ ಶಿಕ್ಷಕಿ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಕಾಯಕವೇ ಕೈಲಾಸ  ಎಂಬ ವಿಚಾರದಲ್ಲಿ ಮಕ್ಕಳಿಗೆ ಬೋಧನೆ ಮಾಡುತ್ತಿದ್ದ ಶಿಕ್ಷಕಿ ಅದನ್ನು ಬಿಟ್ಟು ಹಿಂದು ದ್ವೇಷವನ್ನು  ಕಾರಿಕೊಂಡಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. 

ಗೋದ್ರಾ ಹತ್ಯೆಯ ಸಮಯದಲ್ಲಿ ಗುಜರಾತಿನಲ್ಲಿ ಮುಖ್ಯಮಂತ್ರಿ ಆಗಿದ್ದವರು ನರೇಂದ್ರ ಮೋದಿ. ದಂಡ ಪಿಂಡಗಳನ್ನು ಕೊಂಡು ಹೋಗಿ ಬಾಂಬ್ ಹಾಕಿದ್ದು ಮೋದಿಯವರು. ಅದರಲ್ಲಿ ಸತ್ತವರು ಮುಸ್ಲಿಮರು. ಒಬ್ಬ ಬಸುರಿ ಮಹಿಳೆಯನ್ನು ಕೊಂದು ಹಾಕಿದ್ದರು. 12 ಜನ ಸೇರಿ ಯುವತಿಯನ್ನು ಅತ್ಯಾಚಾರ ಮಾಡಿದ್ದರು. ಮುಸ್ಲಿಂ ಮಕ್ಕಳನ್ನು ತಲೆಗೆ ಕಲ್ಲು ಹೊಡೆದು ಕೊಂದಿದ್ದಾರೆ, ನೀವು ಹಿಂದುಗಳು ನೀಚರು ಎಂದೆಲ್ಲ ಆಕೆ ಮಕ್ಕಳ ಜತೆ ಮಾತನಾಡುತ್ತಾ ಹೇಳಿದ್ದರೆನ್ನಲಾಗಿದೆ. ಹೀಗಾಗಿ ಶಿಕ್ಷಕಿ ವಿರುದ್ಧ ಶಿಸ್ತು ಕ್ರಮವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.