ಈ ದೇಶದಲ್ಲಿ ಎಷ್ಟು ಕಸರತ್ತು ಮಾಡಿದರೂ ಒಂದೇ ಒಂದು ಮಗು ಹುಟ್ಟುತ್ತಿಲ್ಲ
| Jan 29, 2025, 22:26 IST
ಕಳೆದ 95 ವರ್ಷಗಳಿಂದ ಒಂದೇ ಒಂದು ಮಗುವೂ ಕೂಡ ಈ ದೇಶದಲ್ಲಿ ಜನಿಸಿಲ್ಲ. ಹೌದು. ಕೇಳೋಕೆ ಆಶ್ಚರ್ಯ ಅನಿಸಿದ್ರೂ ಇದು ಸತ್ಯ.ಫೆಬ್ರವರಿ 11, 1929 ರಂದು ಇಟಲಿಯ ರೋಮ್‌ನಲ್ಲಿರುವ ವ್ಯಾಟಿಕನ್ ಸಿಟಿ ದೇಶವನ್ನು ರಚಿಸಲಾಯಿತು.
95 ವರ್ಷಗಳು ಕಳೆದರೂ ಇಲ್ಲಿ ಒಂದೇ ಒಂದು ಮಗು ಜನಿಸದಿರುವುದು ಆಶ್ಚರ್ಯಕರವಾಗಿದೆ. ಇದು ವಿಶ್ವದ ಅತ್ಯಂತ ಚಿಕ್ಕ ದೇಶ ಅನ್ನೋ ಬಿರುದನ್ನು ಕೂಡ ಪಡೆದಿದೆ. ಈ ಚಿಕ್ಕ ದೇಶದಲ್ಲಿ ಸುಮಾರು 800 ಜನರು ವಾಸಿಸುತ್ತಿದ್ದು, ಅದರಲ್ಲಿ ಕೇವಲ 30 ಮಹಿಳೆಯರು ಇದ್ದಾರೆ. ಇನ್ನು ಈ ದೇಶದಲ್ಲಿ ಯಾವುದೇ ಆಸ್ಪತ್ರೆಗಳಿಲ್ಲ.
ಹಾಗಾಗಿ ಎಲ್ಲಾ ರೋಗಿಗಳು ಚಿಕಿತ್ಸೆಗಾಗಿ ರೋಮ್‌ನಲ್ಲಿರುವ ಕ್ಲಿನಿಕ್‌ಗಳು ಮತ್ತು ಆಸ್ಪತ್ರೆಗಳಿಗೆ ಹೋಗಬೇಕು. ಹೆರಿಗೆ ಸಮಯದಲ್ಲಿ ನೋವು ಬಂದಮೇಲೆ ಮಾತ್ರ ಹೊರಡಬೇಕು ಎನ್ನುವ ನಿಯಮ ಇಲ್ಲಿರುವುದರಿಂದ ಇಲ್ಲಿ ಮಕ್ಕಳು ಹುಟ್ಟುವ ಮುನ್ನವೇ ಸಾವಿಗೀಡಾಗುತ್ತಿದ್ದಾರೆ.