ನಾನಂದ್ರೆ ಯಾರಿಗೂ ಇಷ್ಟ ಇಲ್ಲ, ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಮಾತು ಕೇಳಿ ಕಣ್ಣೀರಿಟ್ಟ ಕನ್ನಡಿಗರು
ಹೊಸ ವಾರದ ಮೊದಲ ದಿನ ಭಾವಪೂರ್ಣವಾಗಿತ್ತು. ಮನೆಯ ಸದಸ್ಯರೆಲ್ಲರೂ ಈ ಭಾವದ ಮಳೆಯಲ್ಲಿ ಭರಪೂರ ನೆನೆದಿದ್ದಾರೆ. ಇಂಥದ್ದೊಂದು ಎಮೋಷನಲ್ ಓಪನ್‌ಅಪ್ ಆಗುವ ಅವಕಾಶವನ್ನು ಕಲ್ಪಿಸಿದ್ದು ಬಿಗ್‌ಬಾಸ್. ಬಿಗ್‌ಬಾಸ್, ಮನೆಯ ಪ್ರತಿ ಸದಸ್ಯರನ್ನು ಕನ್ಫೆಷನ್ ರೂಮಿಗೆ ಕರೆದು ಅವರ ಮನದಾಳದ ಮಾತುಗಳಿಗೆ ಕಿವಿಯಾಗಿದ್ದಾರೆ.
ಒಂಟಿಯಾಗಿ ಕನ್‌ಫೆಷನ್ ರೂಮಿನಲ್ಲಿ ಕೂತ ಸ್ಪರ್ಧಿಗಳು ತಮ್ಮ ಮನಸಲ್ಲಿ ಮುಚ್ಚಿಕೊಂಡಿದ್ದ ಹಲವು ಸಂಗತಿಗಳನ್ನು, ಕಾಡುವ ವಿಷಯಗಳನ್ನು, ಗಾಯದ ನೋವುಗಳನ್ನು ಮನಬಿಚ್ಚಿ ಮಾತಾಡಿದ್ದಾರೆ. ಹೊರಜಗತ್ತಿಗೆ ಇದುವರೆಗೆ ಒರಟು, ಸಂಚುಕೋರರು, ಅವಕಾಶವಾದಿ, ಚೇಲಾ, ಡಾಮಿನೆಂಟ್, ಉದ್ಧಟ, ನೆಗೆಟೀವ್, ಕುತಂತ್ರಿ, ಮಾತುಗಾರರು ಹೀಗೆ ಹತ್ತು ಹಲವು ಲೇಬಲ್‌ಗಳನ್ನು ಮನೆಯ ಉಳಿದ ಸದಸ್ಯರಿಂದಲೇ ಪಡೆದುಕೊಂಡು ಓಡಾಡುತ್ತಿದ್ದ ಸ್ಪರ್ಧಿಗಳು, ತಮ್ಮ ಎಲ್ಲ ಲೇಬಲ್‌ಗಳನ್ನೂ ಮರೆತು ಬಿಗ್‌ಬಾಸ್ ಜೊತೆಗೆ ಭಾವುಕವಾಗಿ ಮಾತಾಡಿದ್ದಾರೆ.
ಇದರಿಂದ ಅವರ ವ್ಯಕ್ತಿತ್ವದ ಭಿನ್ನ ಮಗ್ಗಲುಗಳು ತೆರೆದುಕೊಂಡಿವೆ. ಅವು ಹೃದಯಸ್ಪರ್ಶಿಯೂ, ಮನಕರಗುವಂತೆಯೂ ಇದೆ.ಸ್ಕೂಲಲ್ಲಿ ಇರ್ಬೇಕಿದ್ರೆ, ಕಾಲೇಜಲ್ಲಿ ಇರ್ಬೇಕಿದ್ರೆ ನನ್ನ ಕಾರ್ನರ್ ಮಾಡಿದ್ದೇ ಜಾಸ್ತಿ. ಇಲ್ಲೂ ಸೇಮ್ ಸಿಚುವೇಷನ್ ಕ್ರಿಯೇಟ್ ಆಗ್ತಿದೆ ಎಂದು ತಮ್ಮ ಮನದೊಳಗಿನ ನೋವನ್ನು ಸಂಗೀತಾ ಹಂಚಿಕೊಂಡಿದ್ದಾರೆ.
ಇನ್ನು ಡ್ರೋನ್ ಪ್ರತಾಪ್ ಅವರು ನಡೆದುಕೊಳ್ಳುತ್ತಿರುವ ರೀತಿ ಸಂಗೀತಾ ಶೃಂಗೇರಿ ಅವರಿಗೆ ಇಷ್ಟ ಆಗಿದೆ. ಅದನ್ನು ಅವರು ಮನಸಾರೆ ಹೊಗಳಿದ್ದಾರೆ. ನನಗೆ ಪ್ರತಾಪ್ ತುಂಬ ಇಷ್ಟ ಎಂದು ಅವರು ಕನ್ಫೆಷನ್ ರೂಮ್ನಲ್ಲಿ ಹೇಳಿದ್ದಾರೆ. ದಿನದಿಂದ ದಿನಕ್ಕೆ ಅವರಿಬ್ಬರ ನಡುವೆ ಬಾಂಧವ್ಯ ಗಟ್ಟಿ ಆಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಟಾಸ್ಕ್ ಮತ್ತು ನಾಮಿನೇಷನ್ ಬಂದಾಗ ಹೇಗೆ ನಡೆದುಕೊಳ್ಳುತ್ತಾರೆ ಎಂಬುದು ಕೌತುಕದ ವಿಚಾರವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.