ವಿಮಾನಯಾನ ಸಂಸ್ಥೆ ಕಟ್ಟಿದ ಮಾಲೀಕನ ಸ್ಥಿತಿ ಯಾರಿಗೂ ಬೇಡ, ನ್ಯಾಯಾಧೀಶರ ಮುಂದೆ ಕ.ಣ್ಣೀರು

 | 
H

ತಮಗೆ ಜೀವನದಲ್ಲಿ ಯಾವ ಭರವಸೆಯೂ ಇಲ್ಲ. ಆಸ್ಪತ್ರೆಗೆ ಸೇರಿಸಿ ಇನ್ನಷ್ಟು ಕಷ್ಟ ನೀಡುವ ಬದಲು ಜೈಲಿನಲ್ಲಿಯೇ ಸಾಯುವುದು ಒಳಿತು- ಹೀಗೆ ಕೋರ್ಟ್ ಮುಂದೆ ಕಣ್ಣೀರು ಸುರಿಸುತ್ತಾ ಹೇಳಿದ ವ್ಯಕ್ತಿ ಸಾಮಾನ್ಯರಲ್ಲ. ಜೆಟ್ ಏರ್‌ವೇಸ್‌ನಂತಹ ದೊಡ್ಡ ಕಂಪೆನಿಯನ್ನು ಕಟ್ಟಿದ ಉದ್ಯಮಿ ನರೇಶ್ ಗೋಯಲ್.

ಹೌದು ಕೆನರಾ ಬ್ಯಾಂಕ್‌ಗೆ 538 ಕೋಟಿ ರೂ ವಂಚಿಸಿದ ಪ್ರಕರಣದ ಆರೋಪಿ, ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರು ಶನಿವಾರ ಕೋರ್ಟ್‌ನಲ್ಲಿ ಕಣ್ಣೀರಿಟ್ಟಿದ್ದಾರೆ. ತಾವು ಜೀವನದಲ್ಲಿನ ಎಲ್ಲಾ ಭರವಸೆಗಳನ್ನು ಕಳೆದುಕೊಂಡಿದ್ದು, ಪ್ರಸ್ತುತ ಎದುರಿಸುತ್ತಿರುವ ಪರಿಸ್ಥಿತಿಗಿಂತ ಜೈಲಿನಲ್ಲಿಯೇ ಸಾಯುವುದು ಮೇಲು ಎಂದು ಮುಂಬಯಿಯ ವಿಶೇಷ ನ್ಯಾಯಾಲಯದಲ್ಲಿ ಅವರು ಕೈಗಳನ್ನು ಜೊಡಿಸಿ ಭಾವುಕರಾಗಿ ನುಡಿದಿದ್ದಾರೆ.

ಕಣ್ಣಾಲಿಗಳನ್ನು ತುಂಬಿಕೊಂಡು ಕೋರ್ಟ್ ಮುಂದೆ ಹಾಜರಾದ 70ರ ಗೋಯಲ್, ತಮ್ಮ ಪತ್ನಿ ಅನಿತಾ ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದರು. ಹೆಂಡತಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅದು ಅಂತಿಮ ಹಂತದಲ್ಲಿದೆ ಎಂದು ಗದ್ಗದಿತರಾದರು. ಬ್ಯಾಂಕ್ ವಂಚನೆ ಆರೋಪದಡಿ ಕಳೆದ ವರ್ಷ ಸೆ. 1ರಂದು ಜಾರಿ ನಿರ್ದೇಶನಾಲಯವು ನರೇಶ್ ಗೋಯಲ್ ಅವರನ್ನು ಬಂಧಿಸಿತ್ತು. ಅವರು ಪ್ರಸ್ತು ಮುಂಬಯಿಯ ಆರ್ಥರ್ ರಸ್ತೆ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. 

ತಮಗೆ ಜಾಮೀನು ಮಂಜೂರು ಮಾಡುವಂತೆ ಕೋರಿ ಗೋಯಲ್ ಅವರು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂಜಿ ದೇಶಪಾಂಡೆ ಅವರಿಗೆ ಅರ್ಜಿ ಸಲ್ಲಿಸಿದ್ದರು. ತಮಗೀಗ 75 ವರ್ಷವಾಗುತ್ತಿದೆ. ಭವಿಷ್ಯದ ಬಗ್ಗೆ ಯಾವ ಭರವಸೆಯೂ ಇಲ್ಲ. ಪತ್ನಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾಳೆ. ಮಗಳ ಆರೋಗ್ಯವೂ ನೆಟ್ಟಗಿಲ್ಲ. ತಮ್ಮನ್ನು ನೋಡಿಕೊಳ್ಳಲು ಯಾರೂ ಇಲ್ಲ. ಹೀಗಾಗಿ ಜೈಲಿನಲ್ಲಿ ಸಾಯುವುದೇ ಒಳಿತು. ಹಣೆಬರಹವೇ ತಮ್ಮನ್ನು ಕಾಪಾಡಲಿದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ