ಆಂಕರ್ ನಿರಂಜನ್ ತಾಯಿಯ ಪರಿಸ್ಥಿತಿ ಯಾರಿಗೂ ಬೇಡ; 12 ವರ್ಷ ಮನೆ ಬಿಟ್ಟಿದ್ದ ಮುದ್ದಿನ ಮಗ

 | 
ಹಗ

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕ ನಿರಂಜನ್ ದೇಶಪಾಂಡೆ 18ನೆ ವಯಸ್ಸಿಗೆ ಮನೆ ಬಿಟ್ಟು ಬರುತ್ತಾರೆ. ಇದಕ್ಕೆ ಕಾರಣ ನನ್ನ ತಾಯಿನೇ ಎಂದು ಈಗಲೂ ಹೇಳುತ್ತಾರೆ. 18ನೇ ವಯಸ್ಸಿಗೆ ಮನೆಯಿಂದ ಹೊರ ಬಂದಿದ್ದು ಮತ್ತೆ ವಾಪಸ್ ಹೋಗಿದ್ದು 30 ವರ್ಷ ಆದ್ಮೇಲೆ. ಸುಮಾರು 12 ವರ್ಷಗಳ ಕಾಲ ಹಾಯ್ ಬಾಯ್ ಎಂದು ಮಾತನಾಡುತ್ತಿದ್ದೆ. 

ಸಂಬಂಧ ಬಿಟ್ಟಿಲ್ಲ ಆದರೆ ಮನೆಯಿಂದ ಹೊರ ಬರಲು ಅಮ್ಮನೇ ಕಾರಣ. ಸಣ್ಣ ಪುಟ್ಟ ವಿಚಾರಕ್ಕೆ ನಮ್ಮಿಬ್ಬರ ನಡುವೆ ಜಗಳ ಬಂತು. ಆಗ ನನಗೆ ಮೀಸೆ ಚಿಗುರುತ್ತಿತ್ತು. ನೋಡೋ ಮೀಸೆ ಬಂದೋರೆಲ್ಲ ಗಂಡಸರಲ್ಲ ನಿನ್ನ ಕಾಲಿನ ಮೇಲೆ ನೀನು ನಿಂತ್ಕೋ ಅಂದ್ರು. ನನ್ನ ತಾಯಿ ಕೂಡ ಇಂಡಿಪೆಂಡೆಂಟ್‌ ಮಹಿಳೆ ಏಕೆಂದರೆ ಚಿಕ್ಕ ವಯಸ್ಸಿನಲ್ಲಿ ಅವರು ಕೂಡ ಬೇರೆ ಆಗಿದ್ದರು.

ನಾನು ನಿಮ್ಮನ್ನು ಸಾಕುತ್ತಿರುವುದು ದುಡಿಯುತ್ತಿರುವುದು. ಸಮಾಜದಲ್ಲಿ ಒಬ್ಬ ಗಂಡಸು ಮಾಡಬೇಕಾಗಿರುವ ಕೆಲಸವನ್ನು ನಾನು ಮಾಡುತ್ತಿರುವೆ ಹೀಗಾಗಿ ಮೀಸೆ ಬಂದ ತಕ್ಷಣ ಗಂಡ್ಸು ಅಂತ ಹೇಳಬೇಡ. ಇದ್ದು ಬದುಕಿ ತೋರಿಸು ಅಂದ್ರು ಎಂದು ನಿರಂಜನ್ ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಆಗ ವಯಸ್ಸು ಇತ್ತು ಇದ್ದು ಏನಾದರೂ ಮಾಡಬೇಕು ಎಂದು ಹೊರ ಬಂದೆ ಅಲ್ಲಿಂದ ಸೈಕಲ್ ಹೊಡೆದೆ ಸ್ವಿಮ್ಮಿಂಗ್ ಮಾಡಿದೆ. ಮಾಡಿದರ ಕೆಲಸ ಇಲ್ಲ ಅಷ್ಟು ಕಷ್ಟ ಆಗಿತ್ತು. ದಿನಕ್ಕೆ 200 ರೂಪಾಯಿ ಸಿಕ್ಕರೆ ಸಾಕು ಎಂದು ಕೆಲಸ ಮಾಡಿದ್ದೀನಿ. 

ಬೈಕ್‌ ಪೆಟ್ರೋಲ್ ವೇಸ್ಟ್‌ ಆಗುತ್ತದೆ ಎಂದು ಬಸವನಗುಡಿಯಿಂದ ವಸಂತ್‌ ನಗರಕ್ಕೆ ನಡೆದುಕೊಂಡು ಹೋಗಿರುವೆ. ಎಲ್ಲಾದಕ್ಕೂ ಕ್ರೆಡಿಟ್ ಕೊಡುವುದು ನನ್ನ ತಾಯಿಗೆ ಏಕೆಂದರೆ ಅಂದು ಅವರು ಹಾಗೆ ಹೇಳಿರಲಿಲ್ಲ ಅಂದಿದ್ದರೆ ಖಂಡಿತಾ ಇಷ್ಟು ಧೈರ್ಯವಾಗಿ ಇಂಡಿಪೆಂಟ್ ಆಗಿ ಸಮಾಜವನ್ನು ಎದುರಿಸಲು ಆಗುತ್ತಿರಲಿಲ್ಲ. ತಾಯಿಯೇ ನನ್ನ ಮೊದಲು ಮಧ್ಯದ ಕಡೆಯ ಹಾಗೂ ಮುಂದಿನ ದೇವರು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.