ಸರಿಗಮಪ ವೇದಿಕೆಯಲ್ಲಿ ಧೂಳ್ ಎಬ್ಬಿಸಿದ ಉತ್ತರ ಕರ್ನಾಟಕ ಹುಲಿ ಬಾಳು ಬೆಳಗುಂದಿ
Jan 16, 2025, 17:23 IST
|

ಜೀ ಕನ್ನಡದ ಸರಿಗಮಪ ಕಾರ್ಯಕ್ರಮ ಹಲವಾರು ಹಳ್ಳಿ ಹಾಡು ಹಕ್ಕಿಗಳಿಗೆ ವೇದಿಕೆ ಕಲ್ಪಿಸುವಲ್ಲಿ ಯಶಸ್ವಿ ಆಗಿದೆ. ಅನೇಕ ಎಲೆ ಮರೆಯ ಕಾಯಿಯಂತೆ ಇದ್ದವರ ಬದುಕಿಗೆ ಟರ್ನಿಂಗ್ ಪಾಯಿಂಟ್ ನೀಡಿದೆ. ಅದರಂತೆ ಸರಿಗಮಪ ಆಡಿಷನ್‌ನಲ್ಲಿ ಈ ಬಾರಿ ಎಲ್ಲರ ಗಮನ ಸೆಳೆದ ಪ್ರತಿಭೆ ಅಂದ್ರೆ ಅದು ಬಾಲು ಬೆಳಗುಂದಿ. ಯೂಟ್ಯೂಬ್‌ನಲ್ಲಿ ಹನ್ನೆರಡು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಬಾಳು ಬೆಳಗುಂದಿ ಪ್ರತಿಭೆ ಈಗ ಜೀ ಕನ್ನಡ ವಾಹಿನಿಯ ಮಹಾ ಅಡಿಷನ್‌ನಲ್ಲಿ ಮಾತ್ರವಲ್ಲ ಪ್ರತಿ ವಾರದ ಹಾಡಿನಲ್ಲೂ ಎಲ್ಲರ ಗಮನ ಸೆಳೆದಿದ್ದಾರೆ.
ಸ್ನೇಹಿತರೇ ...ಈತನ ದೇಸಿ ಪ್ರತಿಭೆಗೆ ಜಡ್ಜ್‌ಗಳು ಈಗಾಗಲೇ ವಾಹ್ ಎಂದಿದ್ದಾರೆ. ಈ ಜವಾರಿ ಹೈದ ಸ್ವತಃ "ಆಂಕರ್ ಅನುಶ್ರೀ" ಮೇಲೆ ಕವಿತೆಯೊಂದನ್ನು ಕಟ್ಟಿ ವೇದಿಕೆಯ ಮೇಲೆ ಹಾಡಿದ್ದರು. ಸರಿಗಮಪ ಆಡಿಷನ್‌ಗೆ ಬರುವ ಮೊದಲೇ ಇವರು ತನ್ನ ಫ್ಯಾನ್ಸ್‌ಗೆ ಪರಿಚಯ. ಸೋಷಿಯಲ್ ಮೀಡಿಯಾದಲ್ಲಿ ತನ್ನನ್ನು ಫಾಲೋ ಮಾಡುವವರ ಅಚ್ಚುಮೆಚ್ಚಿನ ಗಾಯಕ ಎಂದೇ ಹೇಳಬಹುದು. ಗೂಗಲ್‌ನಲ್ಲಿಯೂ ಇವರನ್ನು ಮತ್ತು ಇವರ ಹಾಡುಗಳನ್ನು ಸಾಕಷ್ಟು ಜನರು "ಬಾಳು ಬೆಳಗುಂದಿ ಜಾನಪದ ಸಾಂಗ್" "ಬಾಳು ಬೆಳಗುಂದಿ ಡಿಜೆ ಸಾಂಗ್" ಎಂದು ಹುಡುಕುತ್ತಾರೆ. ಹಾಗಾಗಿ ಈ ಬಾರಿಯ ಸರಿಗಮಪ ಶೋನಲ್ಲಿ ಬಾಲು ಬೆಳಗುಂದಿಯೇ ಪ್ರಮುಖ ಹೈಲೈಟ್ ಆಗಿದ್ದಾರೆ.
ಸ್ನೇಹಿತರೇ.. ಇನ್ನು ಜೀ ಕನ್ನಡ ವೇದಿಕೆಯಲ್ಲಿ ಬಾಳು ಬೆಳಗುಂದಿ ತನ್ನನ್ನು ಪರಿಚಯಿಸಿಕೊಂಡ ಪರಿಗೆ ಎಲ್ಲರೂ ಫಿದಾ ಆಗಿದ್ದಾರೆ. ಅಷ್ಟಕ್ಕೂ ಅವರು ಈ ವರೆಗೆ ನಾನು 500 ರಿಂದ 600 ಹಾಡುಗಳನ್ನು ಬರೆದು ಹಾಡಿದ್ದೇನೆ. ಯಾವುದಾದರೂ ಜನಪದ ಅಥವಾ ಜನಪ್ರಿಯ ಹಾಡುಗಳಿದ್ದರೆ ಅದಕ್ಕೆ ನನ್ನದೇ ಸ್ಟೈಲ್‌ನಲ್ಲಿ ಹಾಡು ಬರೆದು ಹಾಡುವ ಅಭ್ಯಾಸ ಮಾಡಿಕೊಂಡಿದ್ದೇನೆ. ಕುರಿ ಕಾಯುವ ಕೆಲಸದ ಜತೆಗೆ ಸೋಷಿಯಲ್ ಮೀಡಿಯಾಕ್ಕಾಗಿ ಹಾಡುವೆ ಎಂದು ಹೇಳಿದ್ದರು.ಇದನ್ನೆಲ್ಲ ಕೇಳಿದಾಗ ಸರಿಗಮಪ ವೇದಿಕೆಯಲ್ಲಿ ಅನುಶ್ರೀ ಅವರು ಎಷ್ಟು ಓದಿದ್ದೀಯಾ? ಎಂದು ಕೇಳಿದ್ದಾರೆ. ಅದಕ್ಕೆ ಅವರು ಮೂರನೇ ಕ್ಲಾಸ್ ಎಂದಿದ್ದಾರೆ. ಶಾಲಾ ಶಿಕ್ಷಣ ಕಡಿಮೆ ಪಡೆದರೂ ಅಚ್ಚಕನ್ನಡದ ಸುಂದರ ಹಾಡುಗಳನ್ನು ದೇಸಿ ಸ್ಟೈಲ್‌ನಲ್ಲಿ ಬರೆದು ಹಾಡುವ ಇವರ ಪ್ರತಿಭೆ ಎಲ್ಲರಿಗೂ ಅಚ್ಚರಿ ತಂದಿದೆ.
ಸ್ನೇಹಿತರೇ... ಸರಿಗಮಪ ಬರುದಕ್ಕೂ ಮೊದಲೇ ಸಪರೇಟ್ ಫ್ಯಾನ್ ಬೇಸ್ ಹೊಂದಿರೋ ಇವರ ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ರೀಲ್ಸ್‌ಗಳು, ಹಾಡುಗಳು ಗಮನ ಸೆಳೆಯುತ್ತವೆ. ಇದರೊಂದಿಗೆ ಇವರ ವೈಯಕ್ತಿಕ ಮಾಹಿತಿಗಳೂ ದೊರಕಿವೆ. ಇವರು ಮಾಲಾಶ್ರೀ ಎಂಬ ಗಾಯಕಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಬಾಳು ಬೆಳಗುಂದಿ ಮೂಲತಃ ಹಾವೇರಿಯ ಕತ್ರಿಕೊಪ್ಪ ಎಂಬ ಹಳ್ಳಿಯವರು. ಇವರ ಶಾರ್ಟ್ ವಿಡಿಯೋಗಳು ಮಾತ್ರವಲ್ಲದೆ ಇವರ ಯೂಟ್ಯೂಬ್ ಚಾನೆಲ್‌ಗಳಲ್ಲಿ ನೂರಾರು ಜನಪದ ಶೈಲಿಯ ಹಾಡುಗಳಿವೆ. ಇವು ನಿಮಗೂ ಇಷ್ಟವಾಗಬಹುದು. ಕೆಲವೊಂದು ರಚನೆಗಳು ನಗು ತರಿಸುತ್ತವೆ.
ಸ್ನೇಹಿತರೇ ..ಇವರ ಲಂಗಾ ದಾವನ್ಯಾಗ ಮಸ್ತ್ ಕಾಣತಿ ಲಾವಣ್ಯ ಎಂಬ ಹಾಡು ಯೂಟ್ಯೂಬ್‌ನಲ್ಲಿ ಟಾಪ್‌ನಲ್ಲಿದೆ. ಹೆಚ್ಚು ವೀಕ್ಷಣೆಯಲ್ಲಿ ಇದಕ್ಕೆ ಎರಡನೇ ಸ್ಥಾನವಿದೆ. ಇದನ್ನೂ 11 ಕೋಟಿಗಿಂತ ಹೆಚ್ಚು ಜನರು ವೀಕ್ಷಿಸಿದ್ದಾರೆ. ನಿನ್ನ ಫೋನ್ ನಂಬರ್ ಕೊಟ್ಟರೆ ಬರ್ತೈತೆ ಪುಣ್ಯ ಎಂಬ ಧಾಟಿಯ ಈ ಹಾಡು ಕೇಳೋಕು ಕೂಡ ಮಜವಾಗಿದೆ. ಬಾಳು ಬೆಳಗುಂದಿ ಅವರ ಚಾನೆಲ್‌ನಲ್ಲಿ ಇಂತಹ ನೂರಾರು ಹಾಡುಗಳು ಜನಪ್ರಿಯತೆ ಪಡೆದಿವೆ. ಇವರ ಹಾಡುಗಳಿಗೆ ನೂರಾರು, ಸಾವಿರಾರು ಕಾಮೆಂಟ್‌ಗಳು ಬಂದಿರುವುದು ಇವರ ಜನಪ್ರಿಯತೆಗೆ ಸಾಕ್ಷಿ .
ಸರಿಗಮಪ ಅಲ್ಲಿ ಕಿಚ್ಚ ಸುದೀಪ್ ಅವರಿಂದ ಕೂಡ ಸೈ ಎನಿಸಿಕೊಂಡ ಇವರ ಜತೆಗೆ, ಇವರ ಟೀಮ್ ಕೂಡ ಇವರಿಗೆ ಸಾಥ್ ನೀಡಿದೆ. ಇವರ ಪತ್ನಿ ಮಾಲಾಶ್ರೀ ಕೂಡ ಇವರ ಬಹುತೇಕ ಹಾಡುಗಳಲ್ಲಿ ಮಿಂಚಿದ್ದಾರೆ. ಮುಂದಿನ ದಿನಗಳಲ್ಲಿ ಫ್ಯಾಮಿಲಿ ರೌಂಡ್ ಅಲ್ಲಿ ಅವರು ಕೂಡ ಜೊತೆಯಾಗಿ ಹಾಡಲಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಈಗಾಗಲೇ ಜವಾರಿ ಹಾಡುಗಳ ಮೂಲಕ ಎಲ್ಲೆಡೆ ಫೇಮಸ್ ಆಗಿರುವ ಇವರನ್ನು ಸರಿಗಮಪ ಇನ್ನಷ್ಟು ಫೇಮಸ್ ಮಾಡುವದರಲ್ಲಿ ಎರಡು ಮಾತಿಲ್ಲ ಬಿಡಿ.