ಡಿಸೆಂಬರ್ ನಿಂದ ಸರಿಯಾಗಿ ನಿದ್ದೆ ಮಾಡುವುದಕ್ಕೆ ಬಿಟ್ಟಿಲ್ಲ, ಕ್ರಿಕೆಟರ್ ಪತ್ನಿಯಿಂದ ಗಂಭೀರ ಆ.ರೋಪ
ಭಾರತ ಕ್ರಿಕೆಟ್ ತಂಡದ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್ ಹಾಗೂ ಅವರ ಪತ್ನಿ ಧನಶ್ರೀ ವರ್ಮಾ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯವಾಗಿದ್ದು, ಒಂದಿಲ್ಲಾ ಒಂದು ವಿಚಾರದಲ್ಲಿ ನಿರಂತರವಾಗಿ ಗಮನ ಸೆಳೆಯುತ್ತಲೇ ಬಂದಿದ್ದಾರೆ.
ಸೋಷಿಯಲ್ ಮೀಡಿಯಾ ಸೆನ್ಸೇಷನ್ ಧನಶ್ರೀ ವರ್ಮಾ ತಮ್ಮ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ಬಾರಿ ಆಕೆಯ ಹೊಸ ವಿಡಿಯೋವೊಂದು ವೈರಲ್ ಆಗಿದೆ.ಧನಶ್ರೀ ವರ್ಮಾ ಹಂಚಿಕೊಂಡ ವಿಡಿಯೋದಲ್ಲಿ, ತಾವು ಕಳೆದ ಡಿಸೆಂಬರ್‌ನಿಂದಲೂ ಸರಿಯಾಗಿ ನಿದ್ರೆಯನ್ನೇ ಮಾಡಲಾಗುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಅವರ ಫ್ಯಾನ್ಸ್, ಸೋಷಿಯಲ್ ಮೀಡಿಯಾದಲ್ಲೇ ಆಕೆಯ ಆರೋಗ್ಯ ವಿಚಾರಿಸಿದ್ದಾರೆ.
ಆದರೆ ಧನಶ್ರೀ ಆರೋಗ್ಯದಲ್ಲಿ ಬೇರೆ ಏನೂ ವ್ಯತ್ಯಾಸವಾಗಿಲ್ಲ. ಸದ್ಯ ಧನಶ್ರೀ ವರ್ಮಾ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದಾರೆ. ಈ ಶೋನಲ್ಲಿನ ತಯಾರಿಯಲ್ಲೇ ಹೆಚ್ಚು ಮಗ್ನರಾಗಿದ್ದಾರೆಧನಶ್ರೀ ವರ್ಮಾಗೆ ಖ್ಯಾತ ರಿಯಾಲಿಟಿ ಶೋ ಆಗಿರುವ 'ಝಲಕ್ ದಿಖಲಾಜಾ' ವೈಲ್ಡ್ ಕಾರ್ಡ್ ಎಂಟ್ರಿ ಸಿಕ್ಕಿದೆ. ಆ ಶೋನಲ್ಲಿ ಸ್ವತಃ ಧನಶ್ರೀ ವರ್ಮಾ ತಾವು ಸ್ಟೂಡಿಯೋದಲ್ಲಿದ್ದುಕೊಂಡೇ ಹೆಚ್ಚು ಪ್ರಾಕ್ರೀಸ್ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಧನಶ್ರೀ ವರ್ಮಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿಯೂ ಈ ರಿಯಾಲಿಟಿ ಶೋನ ಹಲವು ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಇನ್ನು ಇದೇ ವೇಳೆ ತಮ್ಮ ಬ್ಯುಸಿ ಶೆಡ್ಯೂಲ್ ಬಗ್ಗೆಯೂ ತುಟಿಬಿಚ್ಚಿದ್ದಾರೆ. ಧನಶ್ರೀ ವರ್ಮಾ ಕೇವಲ ರಿಯಾಲಿಟಿ ಶೋ ಮಾತ್ರವಲ್ಲದೇ ಕೆಲವೊಮ್ಮೆ ವಿವಿಧ ದೇಶಗಳಿಗೆ ಟ್ರಿಪ್‌ಗೆ ಹೋಗಿ ಎಂಜಾಯ್ ಮಾಡುವ ಹಾಟ್ ಫೋಟೋಗಳನ್ನು ಶೇರ್ ಮಾಡಲು ಹಿಂಜರಿಯುವುದಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.