ಸುದೀಪ್ ಅಲ್ಲ ರಮೇಶ್ ಅಲ್ಲ, ಬಿಗ್ಬಾಸ್ ಆ್ಯಂಕರ್ ಆಗಿ ರಿಷಬ್ ಶೆಟ್ಟಿ ಎಂಟ್ರಿ

 | 
He
 ಕನ್ನಡದಲ್ಲಿ ಬಿಗ್ಬಾಸ್ ಅಂದರೆ ಸುದೀಪ್ ಶೋ ಅನ್ನುವಷ್ಟರ ಮಟ್ಟಿಗೆ ಬೆಳೆದಿರುವ ಶೋ ಆಲ್ಲಿ ಇನ್ಮುಂದೆ ಸುದೀಪ್ ಬದಲಿಗೆ ನಿರೂಪಣೆ ಬೇರೆಯವರು ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.ಪ್ರತಿ ಸೀಸನ್‌ನಲ್ಲೂ ನಟ ಕಿಚ್ಚ ಸುದೀಪ್‌ ಈ ರಿಯಾಲಿಟಿ ಶೋ ಅನ್ನು ಅಚ್ಚುಕಟ್ಟಾಗಿ ನಡೆಸಿಕೊಡುತ್ತಿದ್ದರು. ಈ ಒಂದು ಕಾರಣಕ್ಕೂ ಈ ರಿಯಾಲಿಟಿ ಶೋಗೆ ಅಭಿಮಾನಿಗಳ ಸಂಖ್ಯೆ ಸಾಕಷ್ಟಿದೆ.
 ಆದರೆ, ಈ ಸೀಸನ್‌ ಅನ್ನು ಕಿಚ್ಚ ನಡೆಸಿಕೊಡುವುದಿಲ್ಲವಾ ಅನ್ನೋ ಪ್ರಶ್ನೆ ಇದೀಗ ಎಲ್ಲರ ಮುಂದಿದೆ.ಇದಕ್ಕೆ ಕಾರಣವಾಗಿರುವುದು ಖಾಸಗಿ ವಾಹಿನಿ ಕಲರ್ಸ್‌ ಕನ್ನಡ ಹಂಚಿಕೊಂಡಿರುವ ಪ್ರೋಮೋ. ಹೌದು, ಈ ಪ್ರೋಮೋದಲ್ಲಿ ರಿಯಾಲಿಟಿ ಶೋನ ನಿರೂಪಣೆ ಯಾರು ಮಾಡಲಿದ್ದಾರೆ? ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ. ಅಲ್ಲದೆ, ʼಹೊಸ ದಶಕ, ಹೊಸ ಆಟ, ಹೊಸ ಅಧ್ಯಾಯʼ ಎಂದು ಪ್ರೋಮೋದಲ್ಲಿ ಉಲ್ಲೇಖಿಸಲಾಗಿದೆ. 
ಈ ವೇಳೆ ಪ್ರೇಕ್ಷಕರು ಆಂಕರ್‌ ಕೂಡ ಹೊಸಬರಾ? ಎನ್ನುವ ಪ್ರಶ್ನೆ ಮುಂದಿಟ್ಟಿದ್ದಾರೆ. ಇದಕ್ಕೆ ಬಿಗ್‌ಬಾಸ್‌ ಮುಗುಳ್ನಗುತ್ತಾ ಸುಮ್ಮನಾಗಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.ಇತ್ತೀಚೆಗೆ ಈ ರಿಯಾಲಿಟಿ ಶೋಗೆ ನಟ ಕಿಚ್ಚ ಸುದೀಪ್‌ ಬರುತ್ತಿಲ್ಲ, ಬದಲಿಗೆ ಹೊಸ ನಿರೂಪಕರು ಬರಲಿದ್ದಾರೆ ಎನ್ನುವ ರೂಮರ್‌ ಎಲ್ಲೆಡೆ ಹರಿದಾಡಿತ್ತು. 
ಈಗ ಪ್ರೋಮೋ ಕೂಡ ಈ ಮಾತಿಗೆ ಹತ್ತಿರವಾದಂತೆ ಇದೆ. ಪ್ರತಿ ಬಾರಿಯೂ ಪ್ರೋಮೋದಲ್ಲಿ ನಟ ಸುದೀಪ್‌ ಅವರು ಕಾಣಿಸಿಕೊಳ್ಳುತ್ತಿದ್ದರು. ಆದರೆ, ಈ ಪ್ರೋಮೋದಲ್ಲಿ ಅವರ ಕಾಣಿಸಿಕೊಂಡಿಲ್ಲ. ಧ್ವನಿ ಕೂಡ ಬದಲಾದಂತಿದ್ದು, ಬಹುಶಃ ಹೊಸ ನಿರೂಪಕರೇ ಬರಲಿದ್ದಾರೆ ಎಂದು ಜನ ಮಾತನಾಡಲಾರಂಭಿಸಿದ್ದಾರೆ. ಈಗ ಕೇಳುತ್ತಿರುವ ಧ್ವನಿ ರಿಷಭ್ ಶೆಟ್ಟಿ ಅವರ ಧ್ವನಿಗೆ ಮ್ಯಾಚ್ ಆಗೋದು ಮತ್ತಷ್ಟು ಕುತೂಹಲ ಕೆರಳಿಸಿದೆ.ಈ ಎಲ್ಲದರ ಬಗ್ಗೆ ಮುಂದಿನ ದಿನಗಳಲ್ಲಿ ಅಪ್ಡೇಟ್‌ ಸಿಗಲಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.