ಮಿತಿಮೀರಿದ ವಯಸಿನ್ಲೂ ಗೊಂಬೆಯಂತೆ ಮಿಂಚುತ್ತಿದ್ದಾರೆ ಶಿವರಾಜ್ ಕುಮಾರ್ ಜೊತೆ ನಟಿಸಿದ ನ.ಟಿ

 | 
Hh

ತಮಿಳು ಸಿನಿಮಾಗಳಲ್ಲಿ ಬಾಲ ಕಲಾವಿದೆಯಾಗಿ ಸಿನಿಮಾರಂಗ ಪ್ರವೇಶಿಸಿದ ಕನ್ನಡ ಸಿನಿಮಾ ಪ್ರೀತಿಗಾಗಿ ಹಾಗೂ  ಕಾಂಚನ ಗಂಗಾ ಸಿನೆಮಾದಲ್ಲಿ ನಟಿಸಿದ್ದ ಮುದ್ದು ಮೊಗದ ಚೆಲುವೆ ನಟಿ ಶ್ರೀದೇವಿ ಈಗ ಏನ್‌ ಮಾಡ್ತಿದ್ದಾರೆ ಗೊತ್ತಾ?  ಮದುವೆ ಮಕ್ಕಳು  ನಂತರ ಸಿನಿಮಾದಿಂದ ಬ್ರೇಕ್ ತಗೊಂಡಿದ್ದ ಅವರು ಈಗ ಏನ್ ಮಾಡ್ತಿದ್ದಾರೆ.

ನಟಿ ಶ್ರೀದೇವಿ ವಿಜಯ್‌ಕುಮಾರ್, ತಮಿಳಿನ ಆಟೋ ಮಾಮಾ ಸಿನಿಮಾದ ಮೂಲಕ ಬಾಲ ಕಲಾವಿದೆಯಾಗಿ ಚಿತ್ರರಂಗ ಪ್ರವೇಶಿಸಿದ ಶ್ರೀದೇವಿ ವಿಜಯ್‌ಕುಮಾರ್ ಈಗ ಜೀ ತೆಲುಗುವಿನ ಡ್ರಾಮಾ ಜೂನಿಯರ್‌ನ ಜಡ್ಜ್‌.2000ರ ದಶಕದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಮನೆ ಮಾತಾಗಿದ್ದ ಈ ಮುದ್ದು ಮುಖದ ಚೆಲುವೆ ನಂತರ ಮದುವೆ ಮಕ್ಕಳು ಕುಟುಂಬ ಅಂತ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿ ಹೋಗಿದ್ದರು.

ಈಗ ಅವರು ಮತ್ತೆ ತೆಲುಗು ಡ್ರಾಮಾ ಜೂನಿಯರ್‌ಗೆ ಸೀಸನ್ 6 ಕ್ಕೆ ಜಡ್ಜ್‌ ಆಗಿ ಬರುವ ಮೂಲಕ ಅಭಿಮಾನಿಗಳ ಮನ ರಂಜಿಸುತ್ತಿದ್ದಾರೆ. ತೆಲುಗು, ತಮಿಳು ಸೇರಿದಂತೆ ಅವರು ಕನ್ನಡದ ಕಾಂಚನಾ ಗಂಗಾ ಸಿನಿಮಾದಲ್ಲಿಯೂ ನಟಿಸಿದ್ದಾರೆ. ತಮ್ಮ ಸಿನಿ ಪಯಣದ ಬಗ್ಗೆ ವೆಬ್‌ಸೈಟೊಂದರ ಜೊತೆ ಮಾತನಾಡಿದ ಈ ಕಾಂಚನಾ ಗಂಗಾದ ಉರ್ಮಿಳಾ, ನನ್ನ ಇಡೀ ಕುಟುಂಬವೇ ಸಿನಿಮಾ ರಂಗದಲ್ಲಿ ಇದ್ದುದರಿಂದ ಸಿನಿಮಾ ರಂಗಕ್ಕೆ ನನ್ನ ಎಂಟ್ರಿ ಅನಿರೀಕ್ಷಿತವೇನು ಆಗಿರಲಿಲ್ಲ ಎಂದು ಹೇಳಿದ್ದಾರೆ. 

ತೆಲುಗಿನಲ್ಲಿ ಪ್ರಭಾಸ್‌ ನಟನೆಯ ಈಶ್ವರ್‌ ನನ್ನ ಮೊದಲ ಸಿನಿಮಾವಾಗಿತ್ತು. ತಮಿಳು, ತೆಲುಗು ಕನ್ನಡದಲ್ಲಿ ನಟಿಸಿದ್ದ ನಾನು ಮದುವೆಯಾಗಿ ಸೆಟಲ್ ಆದೆ. ದೊಡ್ಡದೊಂದು ಬ್ರೇಕ್‌ನ ನಂತರ ರವಿತೇಜ ನಟನೆಯ ತೆಲುಗು ಸಿನಿಮಾ ವೀರ ಮೂಲಕ ಮತ್ತೆ ಸಿನಿಮಾ ರಂಗಕ್ಕೆ ಮರಳಿದೆ ಎಂದರು.ಮಗಳು ಹುಟ್ಟಿದ ನಂತರ ನಾನು ಯಾವುದೇ ಸಿನಿಮಾ ಮಾಡಲಿಲ್ಲ, ಆದರೆ ಸಿನಿಮಾ ರಂಗ ಬಿಟ್ಟೆ ಮತ್ತೆ ವಾಪಸ್ ಬಂದೆ ಎಂದು ನನಗೆ ಎಂದೂ ಅನಿಸಲೇ ಇಲ್ಲ, ಏಕೆಂದರೆ ನಾನು ಒಂದಲ್ಲ ಒಂದು ರೀತಿಯಲ್ಲಿ ಸಿನಿಮಾರಂಗದೊಂದಿಗೆ ಸಂಪರ್ಕದಲ್ಲೇ ಇದ್ದೇ ಎಂದು ಹೇಳ್ತಾರೆ ಪ್ರೀತಿಗಾಗಿ ನಟಿ. ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.