ಅನ್ಯಧರ್ಮ ನಂಬಿ ಮತಾಂತರಗೊಂಡ ನ.ಟಿ ಶ್ರೀವಿದ್ಯಾ; ನಂತರ ಈಕೆಯ ಅವಸ್ಧೆ ನೋಡಿ ಬೆ ಚ್ಚಿಬಿದ್ದ ಕರುನಾಡು

 | 
Hhsj

ದುಡ್ಡು ಇದ್ದ ಮಾತ್ರಕ್ಕೆ ಎಲ್ಲವೂ ಬರುವುದಿಲ್ಲ, ಎಲ್ಲವೂ ಬದಲಾಗುವುದಿಲ್ಲ. ಸಿನಿಮಾದವರಿಗೂ ನೂರೆಂಟು ಕಷ್ಟಗಳಿರುತ್ತವೆ. ತೆರೆ ಮೇಲೆ ಖ್ಯಾತ ಕಲಾವಿದರಾಗಿ ಮಿಂಚಿದ ಎಷ್ಟೋ ನಟ ನಟಿಯರು ದುರಂತ ಅಂತ್ಯ ಕಂಡಿರುವ ಎಷ್ಟೋ ಉದಾಹರಣೆಗಳಿವೆ. ಅಂತವರಲ್ಲಿ ಶ್ರೀ ವಿದ್ಯಾ ಕೂಡಾ ಒಬ್ಬರು. ಇವರು ಮೂಲತ: ತಮಿಳುನಾಡಿನವರು. 40 ವರ್ಷಗಳ ಕಾಲ ವೃತ್ತಿಜೀವನದಲ್ಲಿ ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಶ್ರೀವಿದ್ಯಾ ಕೊನೆಯ ದಿನಗಳನ್ನು ನೋವಿನಿಂದಲೇ ಕಳೆದರು. 

ಪತಿಯಿಂದ ಪಡಬಾರದ ಕಷ್ಟ ಪಟ್ಟು ತಾವು ಸಂಪಾದಿಸಿದ್ದ ಎಲ್ಲಾ ಆಸ್ತಿಯನ್ನು ದಾನ ಮಾಡಿ ಬದುಕಿಗೆ ವಿದಾಯ ಹೇಳಿದರು.ಶ್ರೀ ವಿದ್ಯಾ 24 ಜುಲೈ 1953ರಲ್ಲಿ ಜನಿಸಿದರು. ಇವರ ತಂದೆ ಕೃಷ್ಣಮೂರ್ತಿ ತಮಿಳು ಚಿತ್ರರಂಗದಲ್ಲಿ ಹಾಸ್ಯನಟನಾಗಿ ತಾಯಿ ವಸಂತಕುಮಾರಿ ಶಾಸ್ತ್ರೀಯ ಸಂಗೀತಗಾರ್ತಿಯಾಗಿ ಗುರುತಿಸಿಕೊಂಡಿದ್ದರು. ಜೀವನ ಚೆನ್ನಾಗಿ ಸಾಗುತ್ತಿದ್ದಂತೆ ಶ್ರೀವಿದ್ಯಾ ತಂದೆ ಅನಾರೋಗ್ಯದಿಂದ ಹಾಸಿಗೆ ಹಿಡಿದರು. ಸಂಸಾರದ ನೊಗ ಸಾಗಿಸಲು ತಾಯಿ ಕೆಲಸಕ್ಕೆ ಹೋಗಲು ಆರಂಭಿಸಿದರು. ಆಗ ಶ್ರೀವಿದ್ಯಾ ಪುಟ್ಟ ಮಗು. ನನಗೆ ಹಾಲುಣಿಸುವಷ್ಟು ಸಮಯ ಕೂಡಾ ತಾಯಿಗೆ ಇರಲಿಲ್ಲವಂತೆ ಎಂದು ಒಮ್ಮೆ ಶ್ರೀವಿದ್ಯಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಮನೆಯಲ್ಲಿನ ಪರಿಸ್ಥಿತಿ ನೋಡಿದ ಶ್ರೀವಿದ್ಯಾ, 14ನೇ ವಯಸ್ಸಿಗೆ ತಮಿಳು ಸಿನಿಮಾದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದರು. ನಂತರ ಮಲಯಾಳಂ ಭಾಷೆಯಲ್ಲಿ ಅವರಿಗೆ ಅವಕಾಶ ದೊರೆಯಿತು. 1971ರಲ್ಲಿ ನೂಟ್ರುಕು ನೂರು ಎಂಬ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದರು. ಮರು ವರ್ಷವೇ ಡೆಲ್ಲಿ ಟು ಮದ್ರಾಸ್‌ ಎಂಬ ಚಿತ್ರದ ಮೂಲಕ ನಾಯಕಿಯಾಗಿ ಪ್ರಮೋಷನ್‌ ಪಡೆದರು. ತಮಿಳು, ತೆಲುಗು, ಮಲಯಾಳಂ, ಹಿಂದಿ, ಕನ್ನಡ ಸೇರಿ ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಾಲನಟಿಯಾಗಿ, ನಾಯಕಿಯಾಗಿ, ಪೋಷಕ ನಟಿಯಾಗಿ ನಟಿಸಿದರು.

 ಕನ್ನಡದಲ್ಲಿ ಎರಡು ಮುಖ, ಶಿವಭಕ್ತ, ಇದು ಸಾಧ್ಯ, ಸಪ್ರಭಾತ  ಅಶ್ವಮೇಧ, ಲೇಡಿ ಕಮಿಷನರ್‌, ಭಾಮ ಸತ್ಯಭಾಮ, ಎಕೆ 47, ಸೈನಿಕ  ಮುಂತಾದ ಸಿನಿಮಾಗಳಲ್ಲಿ ಶ್ರೀವಿದ್ಯಾ ನಟಿಸಿದ್ದಾರೆ.ಶ್ರೀವಿದ್ಯಾ ತಮಿಳು ಖ್ಯಾತ ನಟ ಕಮಲ್‌ ಹಾಸನ್‌ ಅವರನ್ನು ಪ್ರೀತಿಸುತ್ತಿರು. ಇಬ್ಬರೂ ಜೊತೆಯಾಗಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಆ ಸಮಯದಲ್ಲಿ ಕಮಲ್‌ ಹಾಸನ್‌, ವಾಣಿ ಗಣಪತಿ ಜೊತೆ ಲವ್‌ನಲ್ಲಿ ಇದ್ದರು. ಇದಾದ ಕೆಲವು ವರ್ಷಗಳಲ್ಲಿ ಶ್ರೀವಿದ್ಯಾಗೆ ನಿರ್ದೇಶಕ ಭರತನ್‌ ಮೇಲೆ ಲವ್‌ ಆಗಿದೆ. ಆದರೆ ಈ ಸಂಬಂಧ ಕೂಡಾ ಹೆಚ್ಚು ದಿನ ಇರಲಿಲ್ಲ. ಮೂರನೆಯದಾಗಿ ಮಾಲಿವುಡ್‌ನಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ಜಾರ್ಜ್‌ ಥಾಮಸ್‌ ಎಂಬುವರನ್ನು ಪ್ರೀತಿಸಿ 1978ರಲ್ಲಿ ಮದುವೆ ಆದರು. ಆದರೆ ಇದು ಅಂತರ್ಜಾತಿ ವಿವಾಹ ಆದ್ದರಿಂದ ಮನೆಯವರಿಗೆ ಈ ಮದುವೆಗೆ ವಿರೋಧವಿತ್ತು.

ಮದುವೆ ನಂತರ ಕ್ರೈಸ್ತ ಧರ್ಮವನ್ನು ಅನುಸರಿಸಬೇಕು ಎಂದು ಜಾರ್ಜ್‌ ಕಂಡಿಷನ್‌ ಹಾಕಿದ್ದರು. ಅದರಂತೆ ಶ್ರೀವಿದ್ಯಾ ಮದುವೆಗೂ ಮುನ್ನ ಬಾಪ್ಟಿಸಂ ಮುಗಿಸಿದರು. ಇನ್ನು ನಟನೆ ಸಾಕು ಗೃಹಿಣಿಯಾಗಿ ಆರಾಮಾಗಿ ಇದ್ದರಾಯ್ತು ಎಂದುಕೊಂಡಿದ್ದ ವಿದ್ಯಾಗೆ, ಜಾರ್ಜ್‌ ಶಾಕ್‌ ನೀಡಿದರು. ಗಂಡ ಒತ್ತಾಯಿಸಿದ್ದರಿಂದ ಇಷ್ಟವಿಲ್ಲದಿದ್ದರೂ ಮತ್ತೆ ನಟನೆಗೆ ವಾಪಸಾದರು. ಕ್ರಮೇಣ ಜಾರ್ಜ್‌ ಶ್ರೀವಿದ್ಯಾಗೆ ಕಿರುಕುಳ ನೀಡಲು ಆರಂಭಿಸಿದರು. ನೋವನ್ನು ಸಹಿಸಲಾಗದ ಶ್ರೀ ವಿದ್ಯಾ 1980ರಲ್ಲಿ ಡಿವೋರ್ಸ್‌ ಪಡೆದು ಜಾರ್ಜ್‌ ಜೊತೆಗಿನ ಸಂಬಂಧಕ್ಕೆ ಎಳ್ಳು ನೀರು ಬಿಟ್ಟರು.

2003ರಲ್ಲಿ ತನಗೆ ಬ್ರೆಸ್ಟ್‌ ಕ್ಯಾನ್ಸರ್‌ ಇರುವುದು ಶ್ರೀವಿದ್ಯಾಗೆ ತಿಳಿಯಿತು. ಅದಕ್ಕೆ ಚಿಕಿತ್ಸೆ ಕೂಡಾ ಪಡೆದರು. ಬದುಕುವುದು ಇನ್ನು ಕೆಲವು ದಿನಗಳು ಮಾತ್ರ ಎಂದು ತಿಳಿದ ಶ್ರೀವಿದ್ಯಾ, ಸಾವನ್ನಪ್ಪುವ 2 ತಿಂಗಳ ಮುನ್ನ ತಮ್ಮ ಆತ್ಮೀಯರೊಬ್ಬರ ಸಹಾಯದಿಂದ ಟ್ರಸ್ಟ್‌ ಒಂದನ್ನು ತೆರೆದು ಎಲ್ಲಾ ಆಸ್ತಿಯನ್ನು ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ, ಸಂಗೀತ, ನೃತ್ಯಕ್ಕೆ ವಿನಿಯೋಗಿಸುವಂತೆ ವಿಲ್‌ ಬರೆದರು. ಅದರಲ್ಲಿ ಆರ್ಥಿಕ ಸಮಸ್ಯೆಯಿಂದ ಬಳಲುವ ಸಿನಿ ಕಲಾವಿದರಿಗೂ ನೆರವು ನೀಡುವಂತೆ ಸೂಚಿಸಿದ್ದರು. 

ಅಷ್ಟೇ ಅಲ್ಲ ತಮ್ಮ ಸಹೋದರನ ಇಬ್ಬರು ಮಕ್ಕಳಿಗೆ ತಲಾ 5 ಲಕ್ಷ ರೂಪಾಯಿ ಹಾಗೂ ಕೆಲಸಗಾರರಿಗೆ ತಲಾ 1 ಲಕ್ಷ ರೂಪಾಯಿ ನೀಡುವಂತೆ ವಿಲ್‌ನಲ್ಲಿ ಬರೆದಿದ್ದರು. 19 ಅಕ್ಟೋಬರ್‌ 2006ರಂದು ಶ್ರೀವಿದ್ಯಾ ನಿಧನರಾದರು. ಆಗ ಅವರಿಗೆ 53 ವರ್ಷ ವಯಸ್ಸು. ತಿರುವನಂತಪುರಂನಲ್ಲೇ ಅವರ ಅಂತ್ಯಕ್ರಿಯೆ ನೆರವೇರಿಸಲಾಯ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.