'ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ' ಎಂದ ಪತ್ನಿ, ಒಮ್ಮೆಲೇ ರೊಚ್ಚಿಗೆದ್ದ ಮಾಸ್ಟರ್ ಆನಂದ್‌

 | 
Dfg

ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಸದಾ ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ಟಿವ್ ಆಗಿರುತ್ತಾರೆ ಹೌದು ರಿಯಲ್ ಸ್ಟಾರ್ ಉಪ್ಪಿ ಅಭಿನಯದ ಉಪೇಂದ್ರ ಸಿನಿಮಾದ  ಕರಿಮಣಿ ಮಾಲೀಕ ಹಾಡು ದಿನೆ ದಿನೇ ವೈರಲ್ ಆಗುತ್ತಿದೆ. ವೈರಲ್ ಅಂದ್ರೆ ಇದೆಪ್ಪ ಅನ್ನೋಮಟ್ಟಿಗೆ ಕಿಚ್ಚು ಹೆಚ್ಚುತ್ತಿದೆ. ಶ್ರೀಸಾಮಾನ್ಯರಷ್ಟೇ ಅಲ್ಲ, ನಟ-ನಟಿಯರು , ನಟರ ಪತ್ನಿಯರು ಹೀಗೆ ಎಲ್ಲರಿಗೂ ಕರಿಮಣಿ ಮಾಲೀಕ  ಹಾಡು ಹೊಸ ಹುಮ್ಮಸ್ಸು ತುಂಬಿದೆ.

 ಮೂಲ ಹಾಡಿಗೆ ತಮ್ಮದೇ ಒಂದು ಲೈನ್‌ ಸೇರಿಸಿ ಹೊಸ ಹೊಳಪನ್ನ ಕೊಡ್ತಾಯಿದ್ದಾರೆ. ಮೊನ್ನೆ ಮೊನ್ನೆ ನಾನು ನಂದಿನಿ ಖ್ಯಾತಿಯ ವಿಕ್ಕಿ ಇದೇ ಹಾಡಿಗೆ ಬೇರೆ ರೂಪವನ್ನೆ ಕೊಟ್ಟಿದ್ದರು. ಇದೀಗ ಮಾಸ್ಟರ್ ಆನಂದ್ ಮತ್ತು ಪತ್ನಿ ಯಶಸ್ವಿನಿ  ಈ ಒಂದು ಗೀತೆಗೆ ಕಾಮಿಡಿ ಟಚ್ ಕೊಟ್ಟಿದ್ದಾರೆ. ಆದರೆ ಇದೇ ಹಾಡು 25 ವರ್ಷದ ಬಳಿಕ ಮತ್ತೆ ಮತ್ತೆ ಅನ್ನುವ ಹಾಗೆ ವೈರಲ್ ಆಗಿದೆ. ಮಾಸ್ಟರ್ ಆನಂದ್ ಮತ್ತು ಪತ್ನಿ ಯಶಸ್ವಿನಿ ಈ ಒಂದು ಹಾಡಿಗೆ ರೀಲ್ಸ್ ಮಾಡಿದ್ದಾರೆ. ಇದು ನಿಜಕ್ಕೂ ಮಜವಾಗಿಯೇ ಇದೆ.

https://www.instagram.com/reel/C3K9WdCISoq/?igsh=MzRlODBiNWFlZA==

ಕರಿಮಣಿ ಮಾಲೀಕ ಹಾಡು ಸೂಪರ್ ಆಗಿಯೇ ವೈರಲ್ ಆಗಿದೆ. 25 ವರ್ಷದ ಹಿಂದೆ ಉಪೇಂದ್ರ ಈ ಒಂದು ಹಾಡನ್ನ ತಮ್ಮ ಉಪೇಂದ್ರ ಚಿತ್ರಕ್ಕೆ ಬರೆದುಕೊಂಡಿದ್ದರು. ಆಗಲೂ ಈ ಹಾಡಿಗೊಂದು ಫೀಲ್ ಇತ್ತು. ಜನ ಇದನ್ನಅಷ್ಟೇ ಎಂಜಾಯ್ ಮಾಡಿದ್ದರು. ಆಡಿಯೋ ಕೇಳಿ ಖುಷಿಪಟ್ಟಿದ್ದರು. ಸಿನಿಮಾದಲ್ಲಿ ನೋಡಿ ವಿಶೇಷ ಹಾಡು ಅಂತಲೇ ಫೀಲ್ ಮಾಡಿಕೊಂಡಿದ್ದರು.

ಹೌದು, ಎಲ್ಲರೂ ಇರೋ ಹಾಡಿಗೇನೆ ರೀಲ್ಸ್ ಮಾಡ್ತಿದ್ದಾರೆ. ಆದರೆ ಮಾಸ್ಟರ್ ಆನಂದ್ ಇದೇ ಹಾಡಿಗೆ ತಮ್ಮದೇ ಒಂದು ಲಿರಿಕ್ಸ್ ಸೇರಿಸಿದ್ದಾರೆ. ಪತ್ನಿ ಯಶಸ್ವಿನಿ ಇಲ್ಲಿ ಕರಿಮಣಿ ಮಾಲೀಕ ನೀನಲ್ಲ ಅಂತ ಕೊರಳಲ್ಲಿರೋ ತಮ್ಮ ತಾಳಿ ಹಿಡಿದು ಹೇಳ್ತಾನೆ ಇರ್ತಾರೆ.ಆದರೆ ಸಡನ್‌ ಆಗಿಯೇ ಹಿಂದುಗಡೆಯಿಂದ ಬರೋ ಮಾಸ್ಟರ್ ಆನಂದ್‌, ಈ ಸರ ಕಳೆದು ಹೋದ್ರೆ ಇನ್ನೊಂದು ಕೊಡಿಸಲ್ಲಾ ಅಂತಾರೆ. ಆಗ ಯಶಸ್ವಿನಿ ಎಕ್ಸಪ್ರೆಷನ್ ಚೇಂಜ್ ಆಗುತ್ತದೆ. ಕರಿಮಣಿ ಮಾಲೀಕ ನೀ ನಲ್ಲ ಅಂತಲೇ ಆನಂದ್‌ಗೆ ಹೇಳ್ತಾರೆ. 

ಆಗ ಆನಂದ್ ಇನ್ನೂ ಒಂದು ಡೈಲಾಗ್ ಹೇಳ್ತಾರೆ. ಸರಿ ದಾರಿಗೆ ಈಗ ಬಂದೆಲ್ಲ ಅಂತಲೇ ಕಾಮಿಡಿ ಡೋಸ್ ಕೊಡ್ತಾರೆ. ಜನ ಇದನ್ನು ಮೆಚ್ಚಿ ಸಕತ್ತಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.