ಅಯೋಧ್ಯೆ ಶ್ರೀರಾಮನ ಮಂದಿರದಲ್ಲಿ ದಿನಕ್ಕೊಂದು ಪವಾಡ, ಭಕ್ತರಲ್ಲಿ ಮತ್ತಷ್ಟು ಕುತೂಹಲ

 | 
Bvf

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆದ ವಿಸ್ಮಯಕಾರಿ ಘಟನೆಯೊಂದರ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಟ್ವಿಟರ್​ನಲ್ಲಿ ಹಂಚಿಕೊಂಡಿದೆ. ಮಂಗಳವಾರ ಸಂಜೆ ಕೋತಿಯೊಂದು ದೇವಸ್ಥಾನದ ಪ್ರಾಂಗಣದೊಳಗೆ ಬಂದಿದ್ದು ಹಾಗೂ ಸ್ವತಃ ಆಂಜನೇಯ ಸ್ವಾಮಿಯೇ ಶ್ರೀರಾಮನ ದರ್ಶನಕ್ಕೆ ಬಂದಂತೆ ತಮಗೆಲ್ಲ ಭಾಸವಾಗಿದ್ದಾಗಿ ಟ್ರಸ್ಟ್​ ತನ್ನ ಅನುಭವವನ್ನು ಹಂಚಿಕೊಂಡಿದೆ. 

ಈ ಘಟನೆಯ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್  ಹೀಗೆಂದು ಅಭಿಪ್ರಾಯ ಹಂಚಿಕೊಂಡಿದೆ.
ದೇವಸ್ಥಾನದ ದಕ್ಷಿಣ ದ್ವಾರದ ಮಂಟಪದ ಕಡೆಯಿಂದ ಬಂದ ಕೋತಿಯೊಂದು ಗರ್ಭಗುಡಿಯೊಳಗೆ ಹೋಗಿ ಉತ್ಸವಮೂರ್ತಿಯವರೆಗೂ ತಲುಪಿತ್ತು. ಕೋತಿಯು ಉತ್ಸವ ಮೂರ್ತಿಯ ವಿಗ್ರಹಕ್ಕೆ ಏನಾದರೂ ಮಾಡೀತು ಎಂಬ ಆತಂಕದಲ್ಲಿ ಹತ್ತಿರದಲ್ಲಿದ್ದ ಭದ್ರತಾ ಸಿಬ್ಬಂದಿ ಓಡಿ ಬಂದಿದ್ದಾರೆ. ಆಗ ಕೋತಿಯು ಶಾಂತವಾಗಿಯೇ ಉತ್ತರ ದ್ವಾರದ ಕಡೆಗೆ ಓಡಿತು. 

ಆದರೆ ಆ ದ್ವಾರ ಮುಚ್ಚಿದ್ದರಿಂದ ಪೂರ್ವ ದಿಕ್ಕಿಗೆ ತೆರಳಿ ಭಕ್ತಾದಿಗಳ ಮಧ್ಯದಿಂದ ಹೊರಗೆ ಹೋಯಿತು. ಸ್ವಯಂ ಹನುಮಾನ್​ಜೀ ರಾಮಲಲ್ಲಾನ ದರ್ಶನಕ್ಕೆ ಬಂದಿದ್ದರು ಎಂಬ ಭಾವ ತಮಗಾಯಿತು ಎಂದು ಈ ದೃಶ್ಯ ನೋಡಿದವರ ಅಭಿಪ್ರಾಯವಾಗಿತ್ತು. ಭಕ್ತರ ದೇಣಿಗೆಯ ಹಣದಿಂದಲೇ ಭವ್ಯ ರಾಮನ ಮಂದಿರವನ್ನು ನಿರ್ಮಿಸಲಾಗಿದೆ. ಇದಕ್ಕಾಗಿ ಅನೇಕಾನೇಕ ಜನರು ತಮ್ಮ ಕೈಲಾದಷ್ಟು ಹಣವನ್ನು ನೀಡಿದ್ದಾರೆ. ವರದಿಯ ಪ್ರಕಾರ, ರಾಮಮಂದಿರ ನಿರ್ಮಾಣಕ್ಕಾಗಿ ಈವರೆಗೆ ಸುಮಾರು 5,500 ಕೋಟಿ ರೂ.ಗೂ ಅಧಿಕ ದೇಣಿಗೆ ಸಂಗ್ರಹವಾಗಿದೆ. 

ಜನವರಿ 22 ರಂದು ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಭಗವಾನ್‌ ರಾಮನ  ಪ್ರಾಣ ಪ್ರತಿಷ್ಠಾಪನೆಯಾಗಿದೆ. ಮೊರಾರಿ ಬಾಪು ಅವರು ರಾಮ ಕಥಾ ನಿರೂಪಕರಾಗಿದ್ದು, ಅವರು ಕಳೆದ ಆರು ದಶಕಗಳಿಂದ ರಾಮಾಯಣ ಸಾರವನ್ನು ಜಗತ್ತಿನಾದ್ಯಂತ ಹರಡುತ್ತಿದ್ದಾರೆ.ಬಾಪು ಅವರು ರಾಮಮಂದಿರಕ್ಕೆ ಬರೋಬ್ಬರಿ 18.6 ಕೋಟಿ ರೂಪಾಯಿಗಳ ಗಮನಾರ್ಹ ದೇಣಿಗೆ ನೀಡಿದ್ದಾರೆ. ಈ ದೊಡ್ಡ ಮೊತ್ತವನ್ನು ಭಾರತದ ಹಾಗೂ ವಿದೇಶಗಳಿಂದ ಅವರು ಸಂಗ್ರಹಿಸಿದ್ದಾರೆ.

ಭಾರತದೊಳಗೆ 11.30 ಕೋಟಿ ರೂ., ಯುಕೆ ಮತ್ತು ಯುರೋಪ್‌ನಿಂದ 3.21 ಕೋಟಿ ರೂಪಾಯಿ ಮತ್ತು ಅಮೆರಿಕ, ಕೆನಡಾ ಮತ್ತು ಇತರ ದೇಶಗಳಿಂದ 4.10 ಕೋಟಿ ರೂಪಾಯಿಗಳನ್ನು ಸಂಗ್ರಹಿ ನೀಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.