'ನಮ್ಮ ಬಾಸ್ ಮಯಾ೯ದೆ ಕಳಿಬೇಡಮ್ಮ' ಅಪ್ಪು ಮಗಳ ಅವತಾರಕ್ಕೆ ಫ್ಯಾನ್ಸ್ ಗರಂ

 | 
He
 ಸ್ಯಾಂಡಲ್‌ವುಡ್‌ ನ ಪ್ರತಿಭೆ...ಹಲವರ ಕಣ್ಮಣಿ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಇಲ್ಲವಾಗಿ ಕೆಲ ವರ್ಷಗಳೇ ಕಳೆದಿವೆ. ಆದರೂ, ಇಂದಿಗೂ ಅವರ ಅಭಿಮಾನಿಗಳು ಅಪ್ಪು ಸ್ಮರಣೆಯಲ್ಲಿದ್ದಾರೆ. ಪುನೀತ್‌ ಅವರ ಸಿನಿಮಾಗಳು, ಹಾಡುಗಳು, ಅವರ ಡೈಲಾಗ್‌ಗಳ ಮೂಲಕ ಸದಾ ನೆನಪಿಸಿಕೊಳ್ಳುತ್ತಲೇ ಇದ್ದಾರೆ. ಅದರಲ್ಲೂ ಸೋಷಿಯಲ್‌ ಮೀಡಿಯಾದಲ್ಲಿ ಇಂದಿಗೂ ಪುನೀತ್‌ ಅವರ ಫ್ಯಾನ್ಸ್ ಕ್ರೇಜ್‌ ಕಡಿಮೆ ಆಗಿಲ್ಲ. 
ಕರ್ನಾಟಕ ರತ್ನ ಕಣ್ಮರೆಯಾದರೂ, ಅವರನ್ನು ಎತ್ತಿ ಮೆರೆಸುತ್ತಿದ್ದಾರೆ ಅವರ ಫ್ಯಾನ್ಸ್‌. ದೊಡ್ಮನೆ ಮೇಲೆ, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮತ್ತವರ ಮಕ್ಕಳ ಮೇಲೆಯೂ ಅಷ್ಟೇ ಗೌರವ ಇಟ್ಟುಕೊಂಡಿದ್ದಾರೆ ಅಪ್ಪು ಅಭಿಮಾನಿಗಳು. ಈ ನಡುವೆ ಪುನೀತ್‌ ಪುತ್ರಿ ಧೃತಿ ರಾಜ್‌ಕುಮಾರ್‌ ಅವರ ಹೊಸ ಫೋಟೋವೊಂದು ಫ್ಯಾನ್ಸ್‌ಗಳ ಬೇಸರಕ್ಕೆ ಕಾರಣವಾಗಿದೆ. G
ಪುನೀತ್‌ ರಾಜ್‌ಕುಮಾರ್‌ಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬರು ಧೃತಿ ಮತ್ತೊಬ್ಬರು ವಂದನಾ. ಅಪ್ಪ ದೊಡ್ಡ ಸ್ಟಾರ್‌ ಆಗಿದ್ದರೂ, ಸಾರ್ವಜನಿಕವಾಗಿ ಈ ಇಬ್ಬರು ಹೆಣ್ಣು ಮಕ್ಕಳು ಕಾಣಿಸಿಕೊಳ್ಳುವುದೇ ಅಪರೂಪ. ಅಪ್ಪ ಪುನೀತ್‌ ರಾಜ್‌ಕುಮಾರ್‌ ನಿಧನದ ಬಳಿಕವಂತೂ ಎಲ್ಲದರಿಂದಲೂ ದೂರವೇ ಉಳಿದಿದ್ದ ಧೃತಿ ಮತ್ತು ವಂದಿತಾ, ವಿದ್ಯಾಭ್ಯಾಸದಲ್ಲಿಯೇ ಹೆಚ್ಚು ತೊಡಗಿಸಿಕೊಂಡಿದ್ದಾರೆ.
 ಸೋಷಿಯಲ್‌ ಮೀಡಿಯಾದಲ್ಲಿ ಇದ್ದರೂ, ಸಕ್ರಿಯರಿರುವುದು ತೀರಾ ಕಡಿಮೆ. ಆಗೊಂದು ಈಗೊಂದು ಪೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ ಧೃತಿ. ಇದೀಗ ಧೃತಿ ಶೇರ್‌ ಮಾಡಿರುವ ಎರಡು ಫೋಟೋಗಳಿಗೆ ಅಪ್ಪು ಫ್ಯಾನ್ಸ್‌ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.ತುಂಡು ಉಡುಗೆಯಲ್ಲಿ ಸೆಲ್ಫಿ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಧೃತಿ ಶೇರ್‌ ಮಾಡಿದ್ದಾರೆ. ಅದಕ್ಕೆ ಸಾಕಷ್ಟು ಮಂದಿ ಬಗೆಬಗೆ ರೀತಿಯ ಕಾಮೆಂಟ್‌ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ.
 ಬಹುತೇಕರು, ಪುನೀತ್‌ ಅವರನ್ನೇ ನೋಡಿದ ಹಾಗಾಯ್ತು ಎಂದು ಕಾಮೆಂಟ್‌ ಮಾಡಿದರೆ, ನಾವು ಅಪ್ಪು sir ನಾ ನಿಮ್ಮಲ್ಲಿ ಕಾಣುತ್ತಿದ್ದೇವೆ... ಅವರನ್ನು ಅವರಿಚ್ಛೇಯಂತೆ ಇರಲು ಬಿಡಿ.. ಲವ್‌ಲೀ ಸಿಸ್ಟರ್‌.. ಲುಕ್ಕಿಂಗ್‌ ಬ್ಯೂಟಿಫುಲ್‌ ಎಂಬಂಥ ಕಾಮೆಂಟ್‌ಗಳೇ ಹೆಚ್ಚಾಗಿವೆ. ಆದ್ರೆ ಇನ್ನು ಕೆಲವರು ದಯವಿಟ್ಟು ಫೋಟೋ ಡಿಲಿಟ್‌ ಮಾಡಿ ಎಂದು ಬೇಡಿಕೊಳ್ಳುತ್ತಿದ್ದಾರೆ. 
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.