ನಮ್ಮೆಲ್ಲರ ಅಚ್ಚುಮೆಚ್ಚಿನ ನಟಿಗೆ ಸೆಟ್ ನಲ್ಲಿ ಲೈಂಗಿಕ ಕಿರುಕುಳ, ಕೆಟ್ಟ ಅನುಭವ ಹೇಳಿಕೊಂಡ ಕಲಾವಿದೆ
Apr 28, 2025, 21:27 IST
|

ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಜೀ ಕನ್ನಡದ ಟಾಪ್ ಧಾರಾವಾಹಿಯಲ್ಲಿ ಗಟ್ಟಿಯಾಗಿ ನಿಂತಿದೆ. ಟಿಆರ್‌ಪಿಯಲ್ಲಿ ಮುಂದಡಿ ಇರಿಸಿರುವ ಈ ಸೀರಿಯಲ್‌ಗೆ ಕರುನಾಡ ವೀಕ್ಷಕ ಫಿದಾ ಆಗಿದ್ದಾನೆ. ಇದೇ ಸೀರಿಯಲ್‌ನ ನಾಯಕಿ ಶ್ರಾವಣಿ ಅಲಿಯಾಸ್ ಆಸಿಯಾ ಫಿರ್ದೋಸ್, ಬಣ್ಣದ ಲೋಕದಲ್ಲಿನ ಕಾಸ್ಟಿಂಗ್ ಕೌಚ್ ಕರಾಳತೆಯ ಅನುಭವದ ಬಗ್ಗೆ ಮಾತನಾಡಿದ್ದಾರೆ.
ಸೀರಿಯಲ್ ಮಾಡುತ್ತಿದ್ದೇನೆ. ಎರಡು ಸಿನಿಮಾಗಳಲ್ಲಿಯೂ ನಟಿಸಿದ್ದೇನೆ. ಇದಾದ ಮೇಲೆ ಒಬ್ಬ ನಿರ್ಮಾಪಕರಿಂದ ನನಗೆ ಕರೆ ಬಂತು. ಹೀಗೊಂದು ಸಿನಿಮಾ ಇದೆ. ಬಂದು ಭೇಟಿಯಾಗಿ ಅಂದ್ರು. ಅವರ ಆಫೀಸ್ ನಮ್ಮ ಮನೆ ಬಳಿಯೇ ಇದ್ದಿದ್ದರಿಂದ, ಅಮ್ಮನನ್ನು ಕರೆದುಕೊಂಡು ಹೋಗಲಿಲ್ಲ. ನಾನೊಬ್ಬಳೇ ಹೋದೆ. ಈ ಥರ ಒಂದು ಸಿನಿಮಾ ಮಾಡ್ತಿದ್ದೇನೆ. ನಿಮಗೆ ಇಂಟ್ರೆಸ್ಟ್ ಇದೆಯಾ? ಎಂದೆಲ್ಲ ಕೇಳಿದರು. ಕತೆ ಕೇಳಿದೆ, ಕಥೆಯೂ ಚೆನ್ನಾಗಿ ಅನಿಸ್ತು. ನನಗೂ ಆಗ ಹಣದ ಅವಶ್ಯಕತೆ ಇತ್ತು. ಜತೆಗೆ ಕೈಯಲ್ಲಿ ಒಂದು ಕೆಲಸ ಇರುತ್ತೆ ಎಂದು ಓಕೆ ಎಂದಿದ್ದೆ.
ಈ ಸಿನಿಮಾ ಯಾವಾಗ ಬರುತ್ತೋ ಗೊತ್ತಿಲ್ಲ, ಒಂದು ಕೆಲಸ ಆದರೂ ಇದ್ಯಲ್ಲ ಅನ್ನೋ ಉದ್ದೇಶ ನನ್ನದಾಗಿತ್ತು. ಅದೇ ಸಮಯಕ್ಕೆ ಯಾರೋ ಒಬ್ಬರು ಅದೇ ನಿರ್ಮಾಪಕರ ಬಳಿ ಕತೆಯನ್ನು ತಂದಿದ್ದರು. ಹಾಗೆ ಬಂದವರ ಎದುರು. ಇವರ ಹತ್ತಿರ ಕಮರ್ಷಿಯಲ್ ಬಗ್ಗೆ ಮಾತನಾಡಬೇಕು ಎಂದು ಹೇಳಿ ಕೆಲ ಹೊತ್ತು ಅವರನ್ನು ಹೊರಗೆ ಕಳಿಸಿದ್ರು. ಎಷ್ಟು ಸಂಭಾವನೆ ನಿರೀಕ್ಷೆ ಮಾಡುತ್ತಿದ್ದೀರಾ? ಎಂದು ನನ್ನನ್ನು ಕೇಳಿದರು. ನಾನು ನನ್ನ ಡಿಮಾಂಡ್ ಏನಿತ್ತೋ ಅದನ್ನು ಹೇಳಿದೆ. ಅವರು ತುಂಬ ಕಡಿಮೆ ಹೇಳಿದ್ರು, ಇಷ್ಟು ಕಡಿಮೆ ಬೇಡ ಸರ್. ಇನ್ನೊಂದು ಚೂರು ಜಾಸ್ತಿ ಮಾಡಿ ಎಂದೆ.
ಸರಿ ಆಯ್ತು ಕೊಡೋಣ ಬಿಡಿ ಎಂದರು. ಅದಾದ ಮೇಲೆ ಅವರ ಮಾತು ಬೇರೆ ಹಾದಿ ಹಿಡಿಯಿತು. ನಿಮ್ಮ ಪರ್ಸನಾಲಿಟಿ ಚೆನ್ನಾಗಿದೆ. ತುಂಬ ಚೆನ್ನಾಗಿ ಎಲ್ಲರನ್ನ ಮಾತನಾಡಿಸ್ತೀರಾ ಎನ್ನುತ್ತಲೇ, ಸಿನಿಮಾದ ಜತೆಗೆ, ನಾನು ನಿಮ್ಮ ಫ್ರೆಂಡ್ ಆಗಲು ಬಯಸುತ್ತೇನೆ ಎಂದರು. ಕ್ಷಮಿಸಿ ನನಗೆ ಅರ್ಥ ಆಗಲಿಲ್ಲ.. ಎಂದು ಅವರಿಗೆ ಹೇಳಿದೆ. ಯಾವ ಥರ ಸರ್ ಎಂದು ಮರು ಪ್ರಶ್ನೆ ಮಾಡಿದೆ ಕೇಳಿದೆ. ಉದಾಹರಣೆಗೆ ನಾನೆಲ್ಲಾದರೂ ಸಿನಿಮಾಕ್ಕೆ ಹೋಗ್ತಿದ್ದೀನಿ ಅಂದ್ರೆ, ನೀವು ನನ್ನ ಜತೆ ಬರಬೇಕು ಅಂದ್ರು. ಆವಾಗ ನನಗೆ ಗೊತ್ತಾಯ್ತು, ಇಲ್ಲೇನೋ ಬೇರೆ ಆಗ್ತಿದೆ ಎಂದು. ನನಗೆ ಕೋಪ ನೆತ್ತಿಗೇರಿತು.
ಎಷ್ಟೋ ಫ್ರೆಂಡ್ಸ್ ಕರೆದರೂ ನನಗೆ ಹೋಗಲು ಟೈಮ್ ಇರಲ್ಲ. ನಿಮ್ಮ ಜತೆ ನಾನ್ಯಾಕೆ ಬರಲಿ ಎಂದು ಕೇಳಿದೆ. ಆ ಮನುಷ್ಯನಿಗೆ ಮದುವೆ ಆಗಿದೆ, ಮಕ್ಕಳೂ ಇವೆ.ಚಿತ್ರರಂಗದಲ್ಲಿ ತಾವು ಎದುರಿಸಿದ ಕೆಟ್ಟ ಅನುಭವದ ಬಗ್ಗೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯ ನಟಿ ಆಸಿಯಾ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾ಼ಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.