ಮೈದಾನದಲ್ಲಿ ಮಗುವಂತೆ ಕಣ್ಣೀರು ಹಾಕಿದ ಪಾಂಡ್ಯ; ಒಮ್ಮೆಲೇ ಅಪ್ಪಿಕೊಂಡ ರೋಹಿತ್

 | 
Us

17 ವರ್ಷಗಳ ಬಳಿಕ ಭಾರತ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಭಾನುವಾರ ಬಾರ್ಬಡೋಸ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ರೋಚಕ ಗೆಲುವು ಸಾಧಿಸಿ, ಪ್ರಶಸ್ತಿ ಗೆದ್ದುಕೊಂಡಿತು. ಭಾರತ ಗೆಲುವು ಸಾಧಿಸುತ್ತಿದ್ದಂತೆ ಹಾರ್ದಿಕ್ ಪಾಂಡ್ಯ ನೆಲಕ್ಕೆ ಕುಸಿದು ಬಿದ್ದರು. ಅವರ ಮುಖದಲ್ಲಿ ಕೊನೆಗೂ ಸಾಧಿಸಿದ ನೆಮ್ಮದಿ, ಸಂತೋಷದ ಕಣ್ಣೀರು ಇತ್ತು.

ಇದೇ ಹಾರ್ದಿಕ್ ಪಾಂಡ್ಯ 1 ತಿಂಗಳ ಹಿಂದೆ ವಿಲನ್ ಆಗಿದ್ದರು. ಆದರೆ ಈಗ ಆತ ಭಾರತ ಕ್ರಿಕೆಟ್ ಅಭಿಮಾನಿಗಳ ಪಾಲಿನ ಹೀರೋ. 2024ರ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತೊರೆದು ಮುಂಬೈ ಇಂಡಿಯನ್ಸ್ ತಂಡಕ್ಕೆ ಬಂದ ಪಾಂಡ್ಯ, ರೋಹಿತ್ ಶರ್ಮಾರಿಂದ ನಾಯಕತ್ವ ಪಡೆದುಕೊಂಡಿದ್ದರು. ಇದು ರೋಹಿತ್ ಶರ್ಮಾ ಅಭಿಮಾನಿಗಳನ್ನು ಕೆರಳಿಸಿತ್ತು. ಗುಜರಾತ್ ಟೈಟಾನ್ಸ್ ಬಿಟ್ಟಿದ್ದಕ್ಕೆ ಅಲ್ಲಿನ ಅಭಿಮಾನಿಗಳು ಕೂಡ ಕೋಪಗೊಂಡಿದ್ದರು. 

ಹೋದಲ್ಲೆಲ್ಲಾ ಹಾರ್ದಿಕ್‌ ಪಾಂಡ್ಯಗೆ ಅವಮಾನವೇ ಸಿಕ್ಕಿತ್ತು. ಮೈದಾನದಲ್ಲಿ ಅಭಿಮಾನಿಗಳು ಹಾರ್ದಿಕ್‌ರನ್ನು ಅವಹೇಳನ ಮಾಡಿದ್ದರು. ಅದಕ್ಕೆ ತಕ್ಕಂತೆ ಈ ಬಾರಿ ಐಪಿಎಲ್‌ನಲ್ಲಿ ಪಾಂಡ್ಯರಿಂದ ನಿರೀಕ್ಷಿತ ಪ್ರದರ್ಶನ ಸಿಕ್ಕಿರಲಿಲ್ಲ, ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅವರು ವಿಫಲರಾಗಿದ್ದರು. ಮುಂಬೈ ಇಂಡಿಯನ್ಸ್ ಕೂಡ ಹೀನಾಯ ಪ್ರದರ್ಶನ ನೀಡಿತ್ತು. 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಮಾತ್ರ ಗೆದ್ದು 10 ಪಂದ್ಯಗಳಲ್ಲಿ ಸೋಲನುಭವಿಸಿತ್ತು.

ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ಸ್ಮರಣೀಯ ಪ್ರದರ್ಶನದ ಮೂಲಕ ಎದುರಾಳಿಗಳ ಬಾಯಿ ಮುಚ್ಚಿಸಿದ್ದಾರೆ. ಕ್ರಿಕೆಟರ್ ಪಾಂಡ್ಯ ಕಳೆದ ಆರು ತಿಂಗಳಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದರು. ನಂತರ ಪತ್ನಿ ನತಾಶಾ ಸ್ಟೆಕೋವಿಕ್‌ನಿಂದ ವಿಚ್ಛೇದನದ ವದಂತಿಗಳು ಜನರು ಅವರ ಬಗ್ಗೆ ಕೆಟ್ಟ ಮಾತುಗಳನ್ನು ಹೇಳಲು ಅವಕಾಶವನ್ನು ನೀಡಿತು. 

ಇಡೀ ದೇಶ ಬಯಸಿದ್ದನ್ನು ನಾವು ಪಡೆದುಕೊಂಡಿದ್ದೇವೆ ಎಂದರು. ಕಳೆದ ಆರು ತಿಂಗಳು ಹೇಗೆ ಕಳೆದವು, ಇನ್ನೂ ಒಂದು ಮಾತನ್ನೂ ಹೇಳಲಿಲ್ಲ. ಕಷ್ಟಪಟ್ಟು ದುಡಿದರೆ ಒಂದಲ್ಲ ಒಂದು ದಿನ ಮಿಂಚುತ್ತೇನೆ ಎಂದು ಗೊತ್ತಿತ್ತು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.