ಮಹಾ ಕುಂಭವೇಳದಲ್ಲಿ ಮೂರು ಬಾರಿ ಮುಳುಗಿ ಎದ್ದ ಪವಿತ್ರ ಗೌಡ, ಮಾಡಿದ ಪಾಪ ಪರಿಹಾರ ಎಂದ ಕನ್ನಡಿಗರು

 | 
J
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಕೋಟ್ಯಂತರ ಜನರು ಶಾಹಿ ಸ್ನಾನ ಮಾಡುತ್ತಿದ್ದು ಅನೇಕ ಸೆಲೆಬ್ರಿಟಿಗಳು ಕೂಡ ಭಾಗಿಯಾಗುತ್ತಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸೆರೆವಾಸ ಅನುಭವಿಸಿ ಜಾಮೀನು ಮೇಲೆ ಹೊರಬಂದಿರುವ ನಟ ದರ್ಶನ್ ಗೆಳತಿ ಪವಿತ್ರಾ ಗೌಡ ಕೂಡ ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. 
ಶಾಹಿ ಸ್ನಾನ ಕೂಡ ಮಾಡಿದ್ದಾರೆ, ಈ ವಿಡಿಯೊವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೌನಿ ಅಮಾವಾಸ್ಯೆಯಂದು ಶಾಹಿ ಸ್ನಾನದ ಪುಣ್ಯ ಸಿಕ್ಕ ನಾನೇ ಧನ್ಯಳು.ನಾನು ಎಲ್ಲಾ ನಕಾರಾತ್ಮಕ ಶಕ್ತಿಯಿಂದ ಮುಕ್ತಳಾಗಿದ್ದೇನೆ ಎಂದು ನಂಬಿದ್ದೇನೆ. ಹರಹರ ಮಹಾದೇವ ಎಂದು ಬರೆದುಕೊಂಡಿದ್ದಾರೆ.
ಇನ್ನು ಪವಿತ್ರಾಗೌಡ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಪಾಪ ತೊಳೆದುಕೊಂಡಿದ್ದಾರೆ.ಮೌನಿ ಅಮಾವಾಸ್ಯೆಯಂದು ನಟಿ ಪ್ರಯಾಗ್​ರಾಜ್​ಗೆ ಭೇಟಿ ನೀಡಿದ್ರು. ಈ ಬಗ್ಗೆ ತಮ್ಮ ಇನ್ಸ್ಟಾದಲ್ಲಿ ವಿಡಿಯೋ ಕೂಡ ಶೇರ್ ಮಾಡಿದ್ದಾರೆ. ಜೈಲಿಂದ ಬಂದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಪವಿತ್ರಾ, ಗಂಗಾ ನದಿಯ ತೀರದಲ್ಲಿ ಖುಷಿಯಾಗಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. 
ಜೈಲಿಂದ ಹೊರ ಬಂದ ಬಳಿಕ ಪವಿತ್ರಾ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ರು. ಇದೀಗ ಕುಂಭಮೇಳದಲ್ಲಿ ಭಾಗಿಯಾಗಿದ್ರು. ಹರ ಹರ ಮಹದೇವ ಎಂದು ತಮ್ಮ ಪೋಸ್ಟ್​ನಲ್ಲಿ ಬರೆದಿದ್ದಾರೆ. ಪವಿತ್ರಾ ಸ್ನಾನ ಮಾಡಿ ಶಿವನನ್ನು ನೆನೆದಿದ್ದಾರೆ. ಪವಿತ್ರಾ ಗೌಡ ಪೋಸ್ಟ್​​ಗೆ ನಟಿ ಮೇಘಾ ಶೆಟ್ಟಿ ಲೈಕ್ ಮಾಡಿದ್ದಾರೆ.ಸಂಗಮದಲ್ಲಿ ಮಿಂದೆದ್ದ ನಟಿ ಪವಿತ್ರಾ ಗೌಡ ದೇವರ ದರ್ಶನ ಪಡೆದಿದ್ದಾರೆ. ಹಣೆಯಲ್ಲಿ ಗಂಧವಿಟ್ಟು, ಕೈಯಲ್ಲಿ ಹೂ ಇಡಿದುಕೊಂಡು ಫೋಟೋಗೆ ಪೋಸ್​ ಕೊಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.