ಇತ್ತಿಚ್ಚಿಗೆ ಹೊಸ ಕಾರು ಖರೀದಿ ಮಾಡಿದ್ದ ಪವಿತ್ರ ಜಯರಾಮ್; ಅದೇ ಕಾರಿನಲ್ಲಿ ಅ ಪಘಾತ

 | 
Uu

ಕಿರುತೆರೆ ನಟಿ ಪವಿತ್ರಾ ಜಯರಾಮ್ ಅವರ ಸಾವಿನ ಆಘಾತದಿಂದ ಅವರ ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು ಇನ್ನೂ ಹೊರ ಬಂದಿಲ್ಲ. ತ್ರಿನಯನಿ ಧಾರಾವಾಹಿ ಖ್ಯಾತಿಯ ಪವಿತ್ರಾ ಸಾವಿಗೆ ಇಡೀ ತೆಲುಗು ಕಿರುತೆರೆಯ ತಾರಾಲೋಕ ದಿಗ್ಭ್ರಮೆಗೊಂಡಿದೆ. ಪವಿತ್ರಾ ಜಯರಾಮ್ ಅವರ ಜೊತೆ ತೆಲುಗು ಸೀರಿಯಲ್‌ನಲ್ಲಿ ನಟಿಸಿದ್ದ ಚಂದ್ರಕಾಂತ್ ಅವರು ನಟಿಯ ಸಾವಿಗೆ ಭಾವುಕ ಪೋಸ್ಟ್ ಮಾಡುವ ಮೂಲಕ ಕಂಬನಿ ಮಿಡಿದಿದ್ದಾರೆ.

ಕಳೆದ ಮೇ 12ರಂದು ಪವಿತ್ರಾ ಜಯರಾಮ್ ಅವರು ಬೆಂಗಳೂರಿಂದ ಹೈದರಾಬಾದ್‌ಗೆ ತೆರಳುವಾಗ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಪವಿತ್ರಾ ಜಯರಾಮ್ ಅವರ ಅಂತ್ಯಕ್ರಿಯೆ ನಿನ್ನೆ ಮಂಡ್ಯ ಜಿಲ್ಲೆಯ ಉಮ್ಮಡಹಳ್ಳಿಯಲ್ಲಿ ನೆರವೇರಿದೆ. ಪ್ರೀತಿಯ ಅಮ್ಮನನ್ನು ಕಳೆದುಕೊಂಡ ಮಕ್ಕಳು ಸಂಕಟ ಪಡುತ್ತಾ ಇದ್ದರೆ ಪವಿತ್ರಾ ಜಯರಾಮ್ ಅವರ ಇಂಡಸ್ಟ್ರಿ ಸ್ನೇಹಿತರು, ಗೆಳೆಯರು ಅತೀವ ದುಃಖ ವ್ಯಕ್ತಪಡಿಸುತ್ತಿದ್ದಾರೆ.

ಇವರು ಇತ್ತೀಚಿಗಷ್ಟೇ ಹೊಸ ಕಾರ್ ಖರೀದಿಸಿದ್ದರು. ಅಷ್ಟೇ ಅಲ್ಲದೇ ದರ್ಶನ್ ಸಿನಿಮಾ ಒಂದಕ್ಕೆ ನಟಿಸುವ ಸಲುವಾಗಿ ಬೆಂಗಳೂರಿಗೆ ಬಂದಿದ್ದರೆಂದು ಹೇಳಲಾಗುತ್ತಿದೆ.ಕಿರುತೆರೆ ನಟ ಚಂದ್ರಕಾಂತ್ ಅವರು ಪವಿತ್ರಾ ಜಯರಾಮ್ ಸಾವಿನ ಹಿನ್ನೆಲೆಯಲ್ಲಿ ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಪವಿತ್ರಾ ಜೊತೆ ತೆಗೆದುಕೊಂಡ ಕೊನೇ ಫೋಟೋ ಪೋಸ್ಟ್‌ ಮಾಡಿ ಭಾವುಕರಾಗಿದ್ದಾರೆ.

 ಪಾಪಾ ಇದು ನಾನು ನಿನ್ನ ಜೊತೆ ತೆಗೆದುಕೊಂಡ ಕೊನೆಯ ಫೋಟೋ. ನನ್ನ ಬಿಟ್ಟು ನೀನು ಒಬ್ಬಳೇ ಹೋಗಿರೋದನ್ನ ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನನಗಾಗಿ ಮತ್ತೊಮ್ಮೆ ಬಾ. ನನ್ನ ಪವಿ ಇನ್ನಿಲ್ಲ. ದಯವಿಟ್ಟು ಮತ್ತೆ ಹುಟ್ಟಿ ಬಂದು ನನ್ನ ಕಣ್ಣೀರು ನಿಲ್ಲಿಸು ಎಂದು ಬರೆದುಕೊಂಡು ಕಣ್ಣೀರು ಹಾಕಿದ್ದಾರೆ.ಭೀಕರ ರಸ್ತೆ ಅಪಘಾತದ ಬಳಿಕ ಆ್ಯಂಬುಲೆನ್ಸ್ ಬರುವುದು ತಡವಾಗಿದೆ.

ಕೊನೆಗೂ ಪವಿತ್ರಾ ಜಯರಾಮ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಮೇಲೆ ಬ್ರೈನ್ ಸ್ಟ್ರೋಕ್ ಆಗಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಪವಿತ್ರಾ ಅವರ ಜೊತೆಗಿದ್ದ ಚಂದ್ರಕಾಂತ್ ಅವರಿಗೆ ಗಾಯಗಳಾಗಿದೆ. ಮಧ್ಯರಾತ್ರಿ 1 ಗಂಟೆಗೆ ಆಸ್ಪತ್ರೆಗೆ ಹೋಗಿದ್ದು 4 ಗಂಟೆಯ ಹೊತ್ತಿಗೆ ನನಗೆ ಪ್ರಜ್ಞೆ ಬಂದಿದೆ. ಆಗ ಪವಿತ್ರಾ ಜಯರಾಮ್‌ ಸಾವನ್ನಪ್ಪಿದ್ದರು ಎಂದು ಚಂದ್ರಕಾಂತ್ ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.