ಸ್ವಂತ ಗಂಡನ ಜೊತೆ ಕೊನೆಯ ಬಾರಿ ಹುಟ್ಟು ಹಬ್ಬ ಆಚರಿಸಿದ ಪವಿತ್ರಾ

 | 
Hu

ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಪವಿತ್ರಾ ಜಯರಾಮ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅನಿರೀಕ್ಷಿತ ದುರಂತದಿಂದ ಪ್ರೇಕ್ಷಕರು ಚೇತರಿಸಿಕೊಳ್ಳುತ್ತಿರುವಾಗಲೇ ಅವರೊಂದಿಗೆ ಅದೇ ಧಾರಾವಾಹಿಯಲ್ಲಿ ನಟಿಸಿದ್ದ ಚಂದ್ರಕಾಂತ್ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಪವಿತ್ರಾ ಜಯರಾಮ್ ಅವರ ಕಾರು ಅಪಘಾತವಾದಾಗ ಅದೇ ಕಾರಿನಲ್ಲಿ ಚಂದ್ರು ಕೂಡ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಸಣ್ಣಪುಟ್ಟ ಗಾಯಗಳೊಂದಿಗೆ ಅವರು ಅಪಘಾತದಿಂದ ಹೊರಬಂದಿದ್ದಾರೆ. ಆದರೆ.. ಆ ಅಪಘಾತದಲ್ಲಿ ಪವಿತ್ರಾ ಸಾವನ್ನಪ್ಪಿದ್ದನ್ನು ಸಹಿಸಲಾಗದೆ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

 ಚಂದ್ರಕಾಂತ್ ನಿಧನದಿಂದ ಅವರ ಕುಟುಂಬ ಶೋಕತಪ್ತವಾಗಿದೆ. ಇದೇ ವೇಳೆ ಚಂದ್ರಕಾಂತ್ ಹಾಗೂ ಪವಿತ್ರಾ ಜಯರಾಂ ಜೊತೆಯಾಗಿ ಮಾಡಿದ್ದ ರೀಲ್ಸ ಎಲ್ಲರ ಕಣ್ಣು ಸೆಳೆಯುತ್ತಿದೆ. ಹೌದು ಪುಟ್ಟಮಲ್ಲಿ ಹಾಡಿಗೆ ಇವರಿಬ್ಬರೂ ಸೊಂಟ ಬಳುಕಿಸಿದ್ದಾರೆ. ಸಾಮನ್ಯವಾಗಿ ರೀಲ್ಸ್ ಮಾಡಿ ಸಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂತೋಷ ಪಡುತ್ತಿದ್ದ ಪವಿತ್ರಾ ಇದನ್ನು ಕೂಡಾ ಶೇರ್ ಮಾಡಿದ್ದಾರೆ.

ಆದರೆ ಚಂದು ಪತ್ನಿ ಶಿಲ್ಪಾ ಮಾಧ್ಯಮದವರೊಂದಿಗೆ ಮಾತನಾಡಿ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ನಾನು ಶಾಲೆಯಲ್ಲಿ ಓದುತ್ತಿರುವಾಗಲೇ ನನ್ನನ್ನು ಹಿಂಬಾಲಿಸಿದ ಚಂದು ನನ್ನನ್ನು ಪ್ರೀತಿಸಿ ಮದುವೆಯಾದ. ನಮಗೆ ಇಬ್ಬರು ಮಕ್ಕಳಿದ್ದಾರೆ. ನಾನೇ ಚಂದುಗೆ ಧಾರಾವಾಹಿಯಲ್ಲಿ ಮೊದಲ ಅವಕಾಶ ಕೊಟ್ಟೆ.. ‘ತ್ರಿನಯನಿ’ ಧಾರಾವಾಹಿ ಮಾಡುತ್ತಿದ್ದಾಗಿನಿಂದ ಪವಿತ್ರಿ ಜೊತೆ ಚಂದು ಸಂಬಂಧ ಶುರುವಾಗಿತ್ತು. 

ಅವಳ ಪ್ರೀತಿಗೆ ಬಿದ್ದು ನನ್ನನ್ನು ಮತ್ತು ಮಕ್ಕಳನ್ನು ಬಿಟ್ಟು ಹೋದ.. ಚಂದು ಅವಳ ಭ್ರಮೆಯಲ್ಲಿ ಬಿದ್ದು ಹೀಗೆ ನಮ್ಮನ್ನೆಲ್ಲ ಅಗಲಿದರು.. ನಮ್ಮ ಮಕ್ಕಳಿಗೆ ನ್ಯಾಯ ಸಿಗಬೇಕು ಎಂದು ಅಳಲು ತೋಡಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.