ದ ರ್ಶನ್ ಬಿಡುಗಡೆ ಸುದ್ದಿ ಕೇಳಿ ನಿದ್ದೆ ಇಲ್ಲದೆ ಚಿಂತೆ ಮಾಡುತ್ತಿರುವ ಪವಿತ್ರ;

ರೇಣುಕಾಸ್ವಾಮಿ ಕೇಸ್‌ನಲ್ಲಿ ಅಂದರ್ ಆಗಿದ್ದ ದಾಸನಿಗೆ ಬಿಗ್ ರಿಲೀಫ್ ಸಿಕ್ಕಿದೆ. ಕೋರ್ಟ್ ದರ್ಶನ್ ಅವರಿಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದ್ದು, ಐದು ತಿಂಗಳುಗಳಿಂದ ಜೈಲಿನಲ್ಲಿದ್ದ ದರ್ಶನ್‌ಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ.ಅತ್ತ ದರ್ಶನ್ ಗೆ ಮಧ್ಯಂತರ ಜಾಮೀನು ಮಂಜೂರು ಹಿನ್ನೆಲೆ, ಇತ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಕೂಡ ಸಂತಸಗೊಂಡಿದ್ದಾರೆ.
ಟಿವಿಯಲ್ಲಿ ದರ್ಶನ್‌ಗೆ ಬೇಲ್ ಸಿಕ್ಕ ವಿಚಾರ ತಿಳಿದು ಸಂತಸ ವ್ಯಕ್ತಪಡಿಸಿದ್ದಾರೆ.ತನ್ನಿಂದ ನಟ ದರ್ಶನ್ ಜೈಲು ಸೇರಿದ ಬಗ್ಗೆ ಪವಿತ್ರಾಗೆ ಬೇಸರವಿತ್ತು.ಸದ್ಯ ನಟ ದರ್ಶನ್ ಗೆ ಬೇಲ್ ಸಿಕ್ಕ ಹಿನ್ನೆಲೆ ಪವಿತ್ರಾ ಕೊಂಚ ನಿರಾಳಗೊಂಡಿದ್ದಾರೆ. ಇನ್ನೂ ನನಗೆ ಯಾವಾಗ ಜಾಮೀನು ಸಿಗುತ್ತೆ ಅಂತ ಪವಿತ್ರಾ ಗೌಡ ಅಲ್ಲೇ ಇದ್ದ ಇತರ ಖೈದಿಗಳೊಂದಿಗೆ ಮಾತನಾಡಿದ್ದಾರಂತೆ.
ಪರಪ್ಪನ ಅಗ್ರಹಾರ ಜೈಲಿನ ಮಹಿಳಾ ಬ್ಯಾರಕ್‌ನಲ್ಲಿ ಪವಿತ್ರಾಗೌಡ ಇದ್ದಾರೆ. ದರ್ಶನ್‌ಗೆ ಬೇಲ್ ಸಿಕ್ಕ ಹಿನ್ನೆಲೆ ತನಗೂ ಬೇಲ್ ಸಿಗುವ ಭರವಸೆಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಗೂ ಜಾಮೀನು ಸಿಗುತ್ತಾ ಕಾದು ನೋಡಬೇಕಿದೆ.ಇನ್ನೂ ತನಗೆ ಬೇಲ್ ಸಿಕ್ಕ ವಿಚಾರ ಗೊತ್ತಾಗುತ್ತಿದ್ದಂತೆ ದರ್ಶನ್ ಭಾವುಕರಾಗಿದ್ದಾರೆ. ಜೊತೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಜೈಲಿನ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರಂತೆ.
ತನ್ನನ್ನು ಎಷ್ಟು ಸಾಧ್ಯವೋ ಅಷ್ಟು ಚೆನ್ನಾಗಿ ನೋಡಿಕೊಂಡ ಜೈಲು ಸಿಬ್ಬಂದಿ ದರ್ಶನ್ ಮೊದಲಿಗೆ ಧನ್ಯವಾದ ತಿಳಿಸಿದ್ದಾರಂತೆ. ಇದಾದ ಬಳಿಕ ಸೆಲ್‌ಗೆ ಬಂದು ಭಾವುಕರಾಗಿದ್ದಾರೆ ಅಂತ ಹೇಳಲಾಗ್ತಿದೆ.ಆರು ವಾರಗಳ ಕಾಲ ದರ್ಶನ್‌ಗೆ ಮಧ್ಯಂತರ ಜಾಮೀನು ನೀಡಲಾಗಿದೆ. ಅವರ ಪಾಸ್‌ಪೋರ್ಟ್ ವಶಕ್ಕೆ ಪಡೆಯಲಾಗಿದ್ದು, ಈ ಸಮಯದಲ್ಲಿ ದರ್ಶನ್ ಎಲ್ಲಿ ಹೇಳ್ತಾರೋ ಅಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಒಂದು ವಾರ ಚಿಕಿತ್ಸೆ ಕೊಡಿಸಿ ಮೆಡಿಕಲ್ ರಿಪೋರ್ಟ್ ಕೊಡಬೇಕು ಎಂದು ಕೋರ್ಟ್ ಆದೇಶ ನೀಡಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.