ಬೆಂಗಳೂರಿನ ವಿಧಾನಸೌಧದಲ್ಲಿ ಅಚ್ಚ ಕನ್ನಡದಲ್ಲಿ ಮಾತನಾಡಿದ ಪವನ್ ಕಲ್ಯನ್;
Aug 9, 2024, 19:03 IST
|
ಕರ್ನಾಟಕದ ಅರಣ್ಯ ಇಲಾಖೆಯೊಂದಿಗೆ ಸಭೆ ನಡೆಸಲು ಪವನ್ ಕಲ್ಯಾಣ್ ಅವರು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಅವರು ಕನ್ನಡದ ಬಗ್ಗೆ ತಮಗೆ ಇರುವ ಅಭಿಮಾನವನ್ನು ವ್ಯಕ್ತಪಡಿಸಿದರು. ಕುವೆಂಪು, ರಾಜ್‌ಕುಮಾರ್ ಮುಂತಾದ ದಿಗ್ಗಜರ ಬಗ್ಗೆ ಕೂಡ ಪವನ್ ಕಲ್ಯಾಣ್ ಮಾತನಾಡಿದರು. ತಾವು ಸಹ ಕನ್ನಡ ಕಲಿಯುವುದಾಗಿ ಹೇಳಿದರು.
ನಟ ಪವನ್ ಕಲ್ಯಾಣ್ ಅವರು ಈಗ ರಾಜಕೀಯದಲ್ಲಿ ಸಂಪೂರ್ಣ ತೊಡಗಿಕೊಂಡಿದ್ದಾರೆ. ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿಯಾಗಿ ಅವರು ಕಾರ್ಯನಿರತರಾಗಿದ್ದಾರೆ. ವಿವಿಧ ಪ್ರದೇಶಗಳಿಗೆ ತೆರಳಿ ಕೆಲಸ ಮಾಡುತ್ತಿದ್ದಾರೆ. ಇಂದು ಪವನ್ ಕಲ್ಯಾಣ್ ಅವರು ಬೆಂಗಳೂರಿಗೆ ಆಗಮಿಸಿದ್ದರು. ಕರ್ನಾಟಕ ಅರಣ್ಯ ಇಲಾಖೆ ಜೊತೆ ನಡೆಸಿದೆ ಸಭೆಯಲ್ಲಿ ಪವನ್ ಕಲ್ಯಾಣ್ ಭಾಗಿಯಾದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪವನ್ ಕಲ್ಯಾಣ್, ರಾಷ್ಟ್ರಕವಿ ಕುವೆಂಪು ಅವರ ಪದ್ಯದ ಸಾಲುಗಳನ್ನು ಹೇಳಿದರು. ಕನ್ನಡ ಕಲಿಯದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ಡಾ. ರಾಜ್‌ಕುಮಾರ್ ಅವರನ್ನು ಕೂಡ ನೆನಪು ಮಾಡಿಕೊಂಡರು. ಡಾ. ರಾಜ್‌ಕುಮಾರ್ ಅವರ ಉದಾಹರಣೆ ಕೊಟ್ಟು ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾವನ್ನು ಟೀಕಿಸಿದ್ದಾರೆ. ಟಾಲಿವುಡ್ ಅಂಗಳದಲ್ಲಿ ಇದು ಸಂಚಲನ ಮೂಡಿಸಿದೆ.
ಈ ಸಂದರ್ಭದಲ್ಲಿ ಅವರು ಕನ್ನಡ ಭಾಷೆಯ ಬಗ್ಗೆ ಮಾತನಾಡಿದರು. ಕನ್ನಡವನ್ನು ತಾವೂ ಕೂಡ ಕಲಿತಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅವರು ಹೇಳಿದರು. ಈ ಸಭೆಯಿಂದ ನನಗೂ ಕನ್ನಡ ಕಲಿಯುವ ಮನಸ್ಸಾಗಿದೆ ಎಂದಿದ್ದಾರೆ ಪವನ್ ಕಲ್ಯಾಣ್. ಅವರ ಈ ಮಾತುಗಳನ್ನು ಕೇಳಿ ಕರುನಾಡಿನಲ್ಲಿನ ಅಭಿಮಾನಿಗಳಿಗೆ ಸಖತ್ ಖುಷಿಯಾಗಿದೆ. ಜನರಿಗೆ ಪವನ್ ಕಲ್ಯಾಣ್ ಮೇಲಿನ ಅಭಿಮಾನ ಇನ್ನಷ್ಟು ಹೆಚ್ಚಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.