ಶಿಲ್ಪಾ ಶೆಟ್ಟಿ ಐಶಾರಾಮಿ ಮನೆ ನೋಡಲು ಇಡೀ ಮುಂಬೈ ಜನ ಬರುತ್ತಾರೆ, ಅಷ್ಟಕ್ಕೂ ಒಳಗ‌ದೆ ಏನಿದೆ

 | 
Uuu

ನಟಿ ಶಿಲ್ಪಾ ಶೆಟ್ಟಿ  ಅವರು ಬಾಲಿವುಡ್​ನಲ್ಲಿ ಭಿನ್ನವಾಗಿ ಗುರುತಿಸಿಕೊಳ್ಳುತ್ತಾರೆ. ಅವರು ನಟಿ ಎನ್ನುವುದಕ್ಕಿಂತ ಉದ್ಯಮಿ ಎಂದು ಅವರನ್ನು ಕರೆಯೋದು ಉತ್ತಮ. ಬೆಂಗಳೂರು ಸೇರಿ ಅನೇಕ ಕಡೆಗಳಲ್ಲಿ ರೆಸ್ಟೋರೆಂಟ್​ಗಳನ್ನು ಅವರು ಹೊಂದಿದ್ದಾರೆ. ಇದರ ಜೊತೆಗೆ ಸಿನಿಮಾ ನಟನೆ ಮತ್ತಿತ್ಯಾದಿ ಕಡೆಗಳಿಂದ ಅವರಿಗೆ ಹಣ ಬರುತ್ತಿದೆ.

ಶಿಲ್ಪಾ ಶೆಟ್ಟಿ ಅವರ ಆಸ್ತಿ 134 ಕೋಟಿ ರೂಪಾಯಿ ಎನ್ನಲಾಗಿದೆ. ಅವರು ಈ ಮೊದಲು ನಟಿ ಆಗಿದ್ದರು. ಆ ಬಳಿಕ ತಮ್ಮ ಸ್ಮಾರ್ಟ್ ನಿರ್ಧಾರಗಳಿಂದ ಉದ್ಯಮಿ ಎನಿಸಿಕೊಂಡರು. ಅವರಿಗೆ ಬರೋಬ್ಬರಿ ಏಳು ಮೂಲಗಳಿಂದ ಹಣ ಹರಿದು ಬರುತ್ತಿದೆ. ಅವರ ಬಳಿ ದುಬಾರಿ ಕಾರುಗಳಿವೆ. ಅವರ ಪತಿ ರಾಜ್ ಕುಂದ್ರಾ ವಿವಾದಗಳ ಮೂಲಕ ಸುದ್ದಿ ಆಗುತ್ತಾರೆ.

ಒಂದ್ಕಾಲದಲ್ಲಿ ಅವಕಾಶಗಳಿಗಾಗಿ ತಿಣುಕಾಡುತ್ತಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇದೀಗ ಅಕ್ಷರಶಃ ರಾಣಿ. ಕರ್ನಾಟಕದ ಕರಾವಳಿ ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಶಿಲ್ಪಾ ಶೆಟ್ಟಿ ಸದ್ಯ ಮುಂಬೈನಲ್ಲಿ ಸೆಟಲ್ ಆಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ನ ರಾಜಸ್ಥಾನ ರಾಯಲ್ಸ್ ಕ್ರಿಕೆಟ್ ಟೀಮ್ ನ ಒಡತಿ ಕೂಡ ಆಗಿರುವ ಶಿಲ್ಪಾ ಶೆಟ್ಟಿ ಮುಂಬೈನಲ್ಲಿ ಅತ್ಯಂತ ವಿಲಾಸಿ ಬಂಗಲೆ ಹೊಂದಿದ್ದಾರೆ. ತಮ್ಮ ಅರಮನೆಗೆ ಕಿನಾರಾ ಅಂತ ಹೆಸರಿಟ್ಟಿದ್ದಾರೆ.

ಕಿನಾರಾ ಮನೆಯ ಒಳಾಂಗಣ ವಿನ್ಯಾಸವನ್ನ ಅತ್ಯಂತ ಜಾಗರೂಕತೆಯಿಂದ ಮಾಡಲಾಗಿದೆ. ಪೀಠೋಪಕರಣಗಳು ಹಾಗೂ ಗೋಡೆಗಳಿಗೆ ಕಣ್ಣಿಗೆ ಮುದ ನೀಡುವ ಕಲರ್ ಕಾಂಬಿನೇಶನ್ ಬಳಸಲಾಗಿದೆ. ಕಿನಾರಾ ಬೃಹತ್ ಆಗಿದೆ. ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ಪುತ್ರ ವಿಯಾನ್ ತನ್ನ ಮುದ್ದಿನ ನಾಯಿ ಮರಿ ಜೊತೆಗೆ ಮನೆಯಲ್ಲೇ ಆಟ ಆಡುತ್ತಾನೆ.ಶಿಲ್ಪಾ ಶೆಟ್ಟಿ ಕುಟುಂಬ ಮನೆಯಿಂದ ಹೊರಗೆ ಬಂದರೆ ಸಾಗರದ ಅಲೆಗಳು ಆಹ್ವಾನ ನೀಡುತ್ತವೆ. ಅಷ್ಟು ಶ್ರೀಮಂತಿಕೆ ಅವರ ಮನೆಯಲ್ಲಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.