2024 ರ ಚುನಾವಣೆಯಲ್ಲಿ ಪ್ರಧಾನಿಗೆ ಸಂಕಷ್ಟ, ಕೋಡಿಶ್ರೀಗಳಿಂದ ಮೈ ನ.ಡುಗಿಸುವ ಭವಿಷ್ಯ

 | 
Hjj

ಕೋಡಿ ಮಠದ ಶ್ರೀಗಳ ಭವಿಷ್ಯ ಅಂದರೆ ಅದಕ್ಕೆ ತುಂಬಾ ಮಹತ್ವವಿದೆ. ಶ್ರೀಗಳು ಈಗಾಗಲೇ ನುಡಿದ ಹಲವು ಭವಿಷ್ಯಗಳು ನಿಜವಾಗಿದ್ದು, ಅಚ್ಚರಿ ಮೂಡಿಸಿವೆ. ಅಂತೆಯೇ ಇದೀಗ ಶ್ರೀಗಳು 2024 ವರ್ಷದ ಬಗ್ಗೆ ಬೆಚ್ಚಿಬೀಳಿಸೋ ಭವಿಷ್ಯ ನುಡಿದಿದ್ದಾರೆ.ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, 2024ರಲ್ಲಿ ಅಕಾಲಿಕ ಮಳೆ, ಬಾಂಬ್ ಸ್ಫೋಟಗೊಳ್ಳುವ ಸಾಧ್ಯತೆ ಇದ್ದು, ಯುದ್ಧಭೀತಿ ಇರಲಿದೆ ಎಂದು ಹೇಳಿದರು. 

ಜನ ತಲ್ಲಣಗೊಳ್ಳಲಿದ್ದು, ಭೂಕಂಪನ ಮತ್ತು ಜಲಕಂಟಕ ಕೂಡ ಎದುರಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಹೌದು, 2024ರ ಕುರಿತು ಕೋಡಿ ಮಠದ ಶ್ರೀಗಳು ನುಡಿದ ಭವಿಷ್ಯ ನಿಜಕ್ಕೂ ಭಯ ಹುಟ್ಟಿಸಿದೆ. ಯಾಕೆಂದರೆ 2024 ಭಯಾನಕ ವರ್ಷ ಆಗಲಿದ್ದು, ಈ ವರ್ಷ ಜಗತ್ತಿನಾದ್ಯಂತ ಒಂದೆರಡು ಪ್ರಧಾನಿಗಳ ಸಾವಾಗುವ ಸಂಭವಗಳು ಎದ್ದು ಕಾಣುತ್ತವೆ. ಜಾತಿ-ಧರ್ಮಗಳ ಸಮಸ್ಯೆಯಿಂದ ಜನರು ದುಃಖ ಅನುಭವಿಸುತ್ತಾರೆ. 

ಜಗತ್ತಿನ ದೊಡ್ಡ ಸಂತರು ಕೊಲೆಯಾಗುತ್ತಾರೆ ಎಂದು ಬೆಚ್ಚಿಬೀಳೋ ಭವಿಷ್ಯ ನುಡಿದ್ದಾರೆ. ಮತೀಯ ಸಮಸ್ಯೆಗಳಿಂದ ಜನ ಹೆಚ್ಚು ದುಃಖ ಅನುಭವಿಸಲಿದ್ದಾರೆ. ಜಗತ್ತಿನ ಪ್ರಭಾವಿ ಜನ ಸಾವನ್ನಪ್ಪಲಿದ್ದಾರೆ. ಮತ್ತೊಮ್ಮೆ ರೋಗ ಹರಡುವ ಸಾಧ್ಯತೆ ಇದ್ದು, ದೊಡ್ಡ ರೋಗ  ಮತ್ತೊಮ್ಮೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹೇಳಿದರು. ಇದೆಲ್ಲದರಿಂದ ಕಾಪಾಡುವ ಶಕ್ತಿ ದೈವಕ್ಕಿದ್ದು, ದೇವರ ಮೊರೆಹೋಗಬೇಕು ಎಂದರು.

ಇಷ್ಟೇ ಅಲ್ಲದೆ ದೇಶದಲ್ಲಿ ಅಸ್ಥಿರತೆ, ಯುದ್ಧ ಭೀತಿ, ಅಣುಬಾಂಬ್ ಸ್ಫೋಟಗೊಳ್ಳುವ ಅವಕಾಶವಿದೆ. ಇದರೊಂದಿಗೆ ಜಗತ್ತಿಗೆ ಮತ್ತೊಮ್ಮೆ ರೋಗ ಹರಡುವ ಸಾಧ್ಯತೆ ಇದೆ. ಜೊತೆಗೆ ದೊಡ್ಡ ಸುನಾಮಿಯೊಂದು ಎದ್ದು ಜಗತ್ತಿಗೆ ಅಪಾಯವಾಗಲಿದೆ. ಅಕಾಲಿಕ ಮಳೆಯಾಗಿ ಲಕ್ಷಾಂತರು ಜನರು ತೊಂದರೆಗೊಳಗಾಗುತ್ತಾರೆ ಎಂದು ಶ್ರೀಗಳು ಹೇಳಿದ್ದಾರೆ. ಒಟ್ಟಿನಲ್ಲಿ 2024 ಜಗತ್ತಿಗೆ ಕಂಟಕವಾಗಲಿದ್ದು ದೈವ ನಂಬುವುದೊಂದೇ ಪರಿಹಾರ. ದೈವದ ಮೊರೆ ಹೋಗಬೇಕು ಎಂದು ಶ್ರೀಗಳು ಸಲಹೆ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.