ತುಕಾಲಿ ಕಾರು ಅ.ಪಘಾತದ ಲೈವ್ ದೃ.ಶ್ಯ ನೋಡಿ ಬೆಚ್ಚಿಬಿದ್ದ ಪೊ ಲೀಸರು
ತುಕಾಲಿ ಸಂತು ಹೊಸ ಕಾರು ಖರೀದಿ ಮಾಡಿ ಇನ್ನೂ 2-3 ವಾರ ಆಗಿಲ್ಲ. ಅಷ್ಟು ಬೇಗ ತುಕಾಲಿ ಸಂತು ಅವರ ಹೊಸ ಕಿಯಾ ಕಾರು ಬೇಸರ ಮೂಡಿಸಿದೆ.. ಕುಣಿಗಲ್ ಬಳಿ ಕಾರಿಗೆ ಆಕ್ಸಿಡೆಂಟ್ ಆಗಿದೆ. ತುಕಾಲಿ ಸಂತು ಇತ್ತೀಚೆಗಷ್ಟೇ ಹೊಸ ಕಾರು ಖರೀದಿಸಿದ್ದರು. ದುಬಾರಿ ಬೆಲೆಯ ಬಿಳಿ ಬಣ್ಣದ ಕಿಯಾ ಕಾರಿಗೆ ತುಕಾಲಿ ಸಂತು ಮಾಲೀಕರಾಗಿದ್ದರು. ಇದೀಗ ಅದೇ ಕಾರು ಅಪಘಾತಕ್ಕೀಡಾಗಿದೆ.
ಹೌದು.. ಯಾರ ಕೆಟ್ಟ ಕಣ್ಣು ಬಿತ್ತೋ ಏನೋ.. ತುಕಾಲಿ ಸಂತು ಅವರ ಹೊಸ ಕಾರು ಅಪಘಾತಕ್ಕೀಡಾಗಿದೆ. ಕುಣಿಗಲ್ ಬಳಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಆಟೋ ಜಖಂ ಆಗಿದೆ. ಆಟೋ ಚಾಲಕ ಜಗದೀಶ್ ಮದ್ಯ ಸೇವನೆ ಮಾಡಿದ್ದರು ಎನ್ನಲಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವ ಜಗದೀಶ್ ಮೃತ ಪಟ್ಟಿದ್ದಾರೆ.
ತುಕಾಲಿ ಸಂತೋಷ್ ಅವರು ಹೊಳೆನರಸೀಪುರದವರು. ತುಕಾಲಿ ಸಂತೋಷ್ ಅವರು ತಮ್ಮ ಕಾರಿನಲ್ಲಿ ತುಮಕೂರು ಕಡೆಯಿಂದ ಕುಣಿಗಲ್ ಮಾರ್ಗವಾಗಿ ಹೊಳೆನರಸೀಪುರ ಕಡೆ ಹೋಗುತ್ತಿದ್ದರು.ಅದೇ ವೇಳೆ ಕುಣಿಗಲ್ನಿಂದ ಕುರುಡಿಹಳ್ಳಿಗೆ ಆಟೋ ತೆರಳುತ್ತಿತ್ತು. ತುಕಾಲಿ ಸಂತೋಷ್ ಕಾರಿನ ಬಲ ಭಾಗಕ್ಕೆ ಆಟೋ ಡಿಕ್ಕಿ ಹೊಡೆದಿದೆ. ಆಟೋ ಬಹುತೇಕ ನಜ್ಜುಗುಜ್ಜಾಗಿತ್ತು. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಈ ಅಪಘಾತ ನಡೆದಿದೆ.
ಆಟೋ ಚಾಲಕ ಜಗದೀಶ್ 40 ವರ್ಷ ಮೃತ ದುರ್ದೈವಿ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆಟೋ ಡ್ರೈವರ್ ಏಕಾಏಕಿ ಬಂದು ನಮ್ಮ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ನಾವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದೆವು. ನಮ್ಮ ಕಾರು ಈಗ ಕುಣಿಗಲ್ ಸ್ಟೇಷನ್ ನಲ್ಲಿದೆ. ಪೊಲೀಸರು ನಾಳೆ ಬರೋಕೆ ಹೇಳಿದ್ದಾರೆ ತುಕಾಲಿ ಸಂತು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.