ಪೂನಂ ಪಾಂಡೆ ಎ ದೆ ನೋಡಿ ಓಡೋಡಿ ಬಂದು ಕಿಸ್ ಕೊಡಲು ಮುಂದಾದ ಯುವಕ, ಎದ್ದು ಬಿದ್ದು ಓಡಿಹೋದ ನಟಿ

 | 
Jd
ಭಾರತೀಯ ಚಿತ್ರರಂಗದ ಬಾಲಿವುಡ್ ನಟಿ ಮತ್ತು ಮಾಡೆಲ್ ಪೂನಂ ಪಾಂಡೆ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ಅವರ ಅಭಿಮಾನಿಯೊಬ್ಬ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ನಟಿಯ ಕೆನ್ನೆಗೆ ಮುತ್ತು ಕೊಡುವುದಕ್ಕೆ ಮುಂದಾಗಿ ಕೆಟ್ಟದಾಗಿ ವರ್ತಿಸುತ್ತಿರುವುದು ಕಂಡುಬಂದಿದೆ. 
ಈ ವಿಡಿಯೋ ನೋಡಿದ ಕೆಲವರು ಇದು ಪಬ್ಲಿಸಿಟಿ ಗಿಮಿಕ್ ಎಂದು ಹೇಳುತ್ತಿದ್ದರೆ, ಇನ್ನೂ ಕೆಲವರು ಆ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.ಪೂನಂ ಪಾಂಡೆ ಜೊತೆ ನಾಚಿಕೆಗೇಡಿನ ವರ್ತನೆ: ಇತ್ತೀಚೆಗೆ ಪೂನಂ ಪಾಂಡೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಕೆಂಪು ಬಣ್ಣದ ಗೌನ್ ಮತ್ತು ಬೂದು ಬಣ್ಣದ ಡೆನಿಮ್ ಜಾಕೆಟ್ ಧರಿಸಿದ್ದರು. ಪೂನಂ ಕ್ಯಾಮೆರಾಗಳಿಗೆ ಪೋಸ್ ನೀಡುತ್ತಾ ನಗುತ್ತಾ ಮಾತನಾಡುತ್ತಿದ್ದರು. 
ಆಗ ಅವರ ಅಭಿಮಾನಿಯೊಬ್ಬ ಹಿಂದಿನಿಂದ ಬಂದು ಅವರ ಪಕ್ಕದಲ್ಲಿ ನಿಂತುಕೊಂಡಾಗ ಅವರು ಬೆಚ್ಚಿಬಿದ್ದರು. ಆದರೆ, ಆ ಅಭಿಮಾನಿ ಸೆಲ್ಫಿ ಕೇಳಿದ. ಪೂನಂ ಅದಕ್ಕೆ ಒಪ್ಪಿಕೊಂಡರು. ಆದರೆ, ಆತ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಪೂನಂಗೆ ಕಿಸ್ ಮಾಡಲು ಪ್ರಯತ್ನಿಸಿದಾಗ ಪರಿಸ್ಥಿತಿ ಕೈಮೀರಿ ಹೋಯಿತು. ಪೂನಂ ಆತನನ್ನು ತಳ್ಳಿ ಅಲ್ಲಿಂದ ದೂರ ಸರಿದರು. ಅಲ್ಲಿದ್ದವರು ಆ ವ್ಯಕ್ತಿಯನ್ನು ಹಿಡಿದು ಪೂನಂನಿಂದ ದೂರ ಸರಿಸಿದರು.
ಇನ್ನು ನಟಿ ಪೂನಂ ಪಾಂಡೆಯ ಈ ವಿಡಿಯೋ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರೊಬ್ಬರು, 50 ರೂಪಾಯಿ ಓವರ್ ಆಕ್ಟಿಂಗ್ ಕಟ್ ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ, ಇದೆಲ್ಲಾ ಮಾಡಲು ಎಷ್ಟು ಖರ್ಚಾಯಿತು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇದು ಸ್ಕ್ರಿಪ್ಟೆಡ್ ಅಲ್ವಾ? ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ, ಅವಳು ಇದನ್ನೇ ಡಿಸರ್ವ್ ಮಾಡ್ತಾಳೆ ಎಂದು ಬರೆದಿದ್ದಾರೆ. 
ಇನ್ನೊಬ್ಬರು ಬೈಯುತ್ತಾ, ಏನ್ ಮನುಷ್ಯ ಇವನು ಎಂದು ಬರೆದಿದ್ದಾರೆ. ಮತ್ತೊಬ್ಬರು, ಅವಳು ವೈರಲ್ ಆಗಲು ಇದೆಲ್ಲಾ ಮಾಡುತ್ತಾಳೆ ಎಂದು ಕಾಮೆಂಟ್‌ನಲ್ಲಿ ಬರೆದುಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.