ಕೊನೆಗೂ ಮದುವೆ ಆಗೋಕೆ ಮುಂದಾದ ಪ್ರಭಾಸ್ ಹಾಗೂ ಅನುಷ್ಕಾ, ಮಾರ್ಚ್ ನಲ್ಲಿ ನಿಶ್ಚಿತಾರ್ಥ

 | 
Bd

ಅನುಷ್ಕಾ ತಮಿಳು ಮತ್ತು ತೆಲುಗಿನ ಪ್ರಮುಖ ನಟಿ. ಒಂದಾನೊಂದು ಕಾಲದಲ್ಲಿ ಎರಡೂ ಭಾಷೆಗಳಲ್ಲಿ ಸಾಲು ಸಾಲು ಸಿನಿಮಾ ಅವಕಾಶಗಳನ್ನು ಸ್ವೀಕರಿಸಲು ಸಮಯವಿಲ್ಲದಷ್ಟು ಬ್ಯುಸಿಯಾಗಿದ್ದ ಅನುಷ್ಕಾ ಕೈಯಲ್ಲಿ ಈಗ ಒಂದೇ ಒಂದು ಸಿನಿಮಾ ಇಲ್ಲ.. ಅದಕ್ಕೆ ಅವರ ವಯಸ್ಸು ಮತ್ತು ದೇಹದ ತೂಕ ಹೆಚ್ಚಳ ಕಾರಣ ಎನ್ನಲಾಗಿದೆ. ಅನುಷ್ಕಾ ಅವರ ಕೊನೆಯ ಚಿತ್ರ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ.. ಈ ಸಿನಿಮಾ ಯಶಸ್ಸು ಕಂಡರೂ ನಂತರ ಒಂದೇ ಒಂದು ಚಿತ್ರಕ್ಕೂ ಅನುಷ್ಕಾ ಕಮಿಟ್ ಆಗಿಲ್ಲ.

42ರಲ್ಲೂ ಅನುಷ್ಕಾ ಮದುವೆಯಾಗದೆ ಸಿಂಗಲ್ ಆಗಿ ಹರಿದಾಡುತ್ತಿದ್ದಾರೆ. ಅವರ ಬಗ್ಗೆ ಪ್ರಣಯದ ವದಂತಿಗಳು ಕಾಲಕಾಲಕ್ಕೆ ಕಾಣಿಸಿಕೊಳ್ಳುತ್ತಿರುವೆ... ಅದರಲ್ಲೂ ಬಾಹುಬಲಿಯಲ್ಲಿ ನಟಿಸಿದ ನಂತರ ಪ್ರಭಾಸ್ ಮತ್ತು ಅನುಷ್ಕಾ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಅವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ನಂತರ, ಇಬ್ಬರೂ ಇದು ಕೇವಲ ವದಂತಿ ತಾವೀಬ್ಬರು ಉತ್ತಮ ಸ್ನೇಹಿತರು ಎಂದು ಹೇಳಿಕೊಂಡಿದ್ದರು.

ಪ್ರಭಾಸ್ ನಂತರ ನಟಿ ಅನುಷ್ಕಾ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎನ್ನಲಾಗುತ್ತಿತ್ತು... ನಂತರ ನಿರ್ಮಾಪಕರೊಬ್ಬರಿಗೆ ಅನುಷ್ಕಾ ಹತ್ತಿರವಾಗುತ್ತಿದ್ದಾರೆ ಎನ್ನಲಾಗಿತ್ತು. ಹೀಗೆ ಅನುಷ್ಕಾ ಮದುವೆಯ ಬಗ್ಗೆ ವದಂತಿಗಳು ಹರಡುತ್ತಲೇ ಇದ್ದವು, ಆದರೆ ಕಳೆದ ಕೆಲವು ವರ್ಷಗಳಿಂದ ಕಡಿಮೆಯಾಗಿದೆ. ಹೀಗಿರುವಾಗ ಸದ್ಯ ಅವರ ಮದುವೆ ಬಗ್ಗೆ ಮತ್ತೊಂದು ಮಾಹಿತಿ ಹರಿದಾಡುತ್ತಿದೆ.ಹೌದು ನಟ ಪ್ರಭಾಸ್ ಹಾಗೂ ನಟಿ ಅನುಷ್ಕಾ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. 

ಮಾರ್ಚ್ ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆಯಲಿದ್ದು, ಏಪ್ರಿಲ್ ನಲ್ಲಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ ಎಂಬ ವದಂತಿ ಟಾಲಿವುಡ್ ನಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಇದರಿಂದಾಗಿ ಪ್ರಭಾಸ್-ಅನುಷ್ಕಾ ಪ್ರೀತಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಇದೀಗ ಅನುಷ್ಕಾ-ಪ್ರಭಾಸ್ ಮದುವೆಯ ಸುದ್ದಿ ಟಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಇದು ನಿಜವೋ ಸುಳ್ಳೋ ಎಂಬುದು ಸಂಬಂಧಪಟ್ಟವರು ಹೇಳಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.