ಮೊಟ್ಟಮೊದಲ ಬಾರಿಗೆ ಹುಟ್ಟೂರಿಗೆ ಪ್ರತಾಪ್ ಎಂಟ್ರಿ, ಮಗನಿಗಾಗಿ ರಾಗಿ ಮುದ್ದೆ ಕೈ ತುತ್ತು ಕೊಟ್ಟ ತಂದೆ

 | 
Vbj

ಬಿಗ್ ಬಾಸ್ ಡ್ರೋನ್ ಪ್ರತಾಪ್ ಎರಡು ದಿನದ ಮಟ್ಟಿಗೆ ತಮ್ಮೂರಿಗೆ ಹೋಗಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮವೇ ಪ್ರತಾಪ್ ಊರಾಗಿದೆ. ಇಲ್ಲಿಗೆ ಬರೋ ಮೊದಲು ಪ್ರತಾಪ್ ಒಂದು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಮೂಲಕ ತಮಗೆ ವೋಟ್ ಆಗಿರೋ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದ್ದಾರೆ. ಇನ್ನು ಅವರ ಅಭಿಮಾನಿಗಳು ಅಲ್ಲಿ ಅವರ ಕಟ್ಟೌಟ್ ಹಾಕಿ ಅವರ ಎದುರು ನೋಡುತ್ತಿದ್ದಾರೆ.

ಎರಡೂವರೆ ಕೋಟಿ ವೋಟ್ ಬಂದಿರೋದು ಇವರಿಗೆ ತುಂಬಾನೆ ಖುಷಿ ತಂದಿದೆ. ಇನ್ನಿಲ್ಲದಂತೆ ಹೆಮ್ಮೆ ಪಟ್ಟಿರೋ ಪ್ರತಾಪ್ ಈ ಒಂದು ವೋಟ್ ವಿಚಾರವನ್ನ ಒತ್ತಿ ಹೇಳುತ್ತಾರೆ. ಜೊತೆಗೆ ಎಲ್ಲರಿಗೂ ಮನಸಾರೆ ಧನ್ಯವಾದಗಳನ್ನು ಕೂಡ ಹೇಳಿಕೊಂಡಿದ್ದಾರೆ. ಹಾಗೇನೆ ತಮ್ಮೂರಿಗೆ ಹೋಗ್ತಿರೋ ಮ್ಯಾಟರ್‌ ಅನ್ನೂ ಈ ವಿಡಿಯೋದಲ್ಲಿ ತಿಳಿಸಿದ್ದಾರೆ.

ನಟ್ಕಲ್ ಗ್ರಾಮದಲ್ಲಿ ನಾನು ಎರಡು ದಿನ ಇರುತ್ತೇನೆ. ನನ್ನ ಪ್ರೀತಿಯ ಅಭಿಮಾನಿಗಳು ಬಂದು ಭೇಟಿ ಆಗಬಹುದು. ಎರಡು ದಿನಗಳ ಕಾಲದ ಇಲ್ಲಿಯೇ ನಾವು-ನೀವು ಸಾಕಷ್ಟು ಮಾತನಾಡಬಹುದು. ಬನ್ನಿ ಮಾತನಾಡೋಣ ಅಂತಲೇ ಪ್ರತಾಪ್ ಹೇಳಿಕೊಂಡಿದ್ದಾರೆ. ಈ ಒಂದು ವಿಡಿಯೋ ಜೊತೆಗೆ ಹೀಗೂ ಬರೆದುಕೊಂಡಿದ್ದಾರೆ.

ವೋಟ್ ಮಾಡಿದಂತಹ ಎಲ್ಲಾ ಕರ್ನಾಟಕದ ಪ್ರೀತಿಯ ಜನತೆಗೆ ಧನ್ಯವಾದಗಳು ಮತ್ತು ಇದೆ ಶುಕ್ರವಾರ ಹಾಗೂ ಶನಿವಾರ ನನ್ನ ಊರಾದಂತಹ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು, ನೆಟ್ಕಲ್ ಗ್ರಾಮದಲ್ಲಿ 2 ದಿನಗಳ ಕಾಲ ಇರುತ್ತೆವೆ ಪ್ರೀತಿಯ ಅಭಿಮಾನಿಗಳು ಬಂದು‌ ಭೇಟಿಯಾಗಬಹುದು.ಅಲ್ಲಿ ಡ್ರೋನ್ ಪ್ರತಾಪ್ ಅವರಿಗೆ ಸನ್ಮಾನ ಸಮಾರಂಭ ಕೂಡ ನಡೆಯಲಿದೆ ಎನ್ನಲಾಗುತ್ತಿದೆ.

ಪ್ರತಾಪ್ ತಮ್ಮೂರಿನಲ್ಲಿ ಎರಡು ದಿನ ಟೈಮ್‌ ಸ್ಪೆಂಡ್ ಮಾಡುತ್ತಿದ್ದಾರೆ. ತಮಗೆ ವೋಟ್ ಹಾಕಿರೋ ಅಭಿಮಾನಿಗಳಿಗೆ ಈ ಮೂಲಕ ಧನ್ಯವಾದ ಹೇಳೋಕೆ ಹೋಗಿದ್ದಾರೆ. ಇನ್ನುಳಿದಂತೆ ಡ್ರೋನ್ ಪ್ರತಾಪ್ ಮುಂದಿನ ನಡೆ ಏನೂ ಅನ್ನೋದು ಕೂಡ ಅಷ್ಟೇ ಕುತೂಹಲ ಮೂಡಿಸಿದೆ ಅಂತಲೇ ಹೇಳಬಹುದು.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.