ಮತ್ತೆ ಸಿಡಿದೆದ್ದ ಪ್ರತಾಪ್ ಸಿಂಹ; ರಾಜ ಅಂತ ನೋಡದೆ ಯಧುವೀರ್ ಗೆ ತರಾಟೆ
ಮೈಸೂರು ಕ್ಷೇತ್ರದ ಟಿಕೆಟ್ ಕಳೆದುಕೊಂಡ ನಂತರ ಪ್ರತಾಪ್ ಸಿಂಹ ಕೋಪಗೊಂಡಿದ್ದಾರೆ. ಒಂದು ಕಡೆ ಕೇಂದ್ರದ ವರಿಷ್ಠರ ಮೇಲಿನ ಮುನಿಸು ಬೇರೆ ರೀತಿಯಲ್ಲಿ ಹೊರ ಬರುತ್ತಿದ್ದು, ಇದು ಮೈಸೂರು ಕ್ಷೇತ್ರದಲ್ಲಿ ದೊಡ್ಡ ತಲ್ಲಣ ಸೃಷ್ಟಿಸಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆದರೆ ಇದೇ ಸಮಯದಲ್ಲಿ ಪ್ರತಾಪ್ ಸಿಂಹ ಎಸಿ ರೂಂ ಹೇಳಿಕೆಯ ಬಗ್ಗೆ ಮೈಸೂರು ಬಿಜೆಪಿ ಅಭ್ಯರ್ಥಿ ಹಾಗೂ ರಾಜವಂಶಸ್ಥ ಯದುವೀರ್ ಕೂಡ ರೊಚ್ಚಿಗೆದ್ದಿದ್ದಾರೆ.
ಹೌದು ಪ್ರತಾಪ್ ಸಿಂಹಗೆ ಈ ಬಾರಿ ಟಿಕೆಟ್ ಮಿಸ್ ಆಗಲು ಕಾರಣ ಯಡಿಯೂರಪ್ಪ ಅವರು ಅನ್ನೋ ಆರೋಪವನ್ನು ಈ ಮೊದಲು ಮಾಡಲಾಗಿತ್ತು. ಆದರೆ ಅಸಲಿ ಕಾರಣ ರಾಜಸ್ಥಾನ ಅನ್ನೋದು ಆಮೇಲೆ ಗೊತ್ತಾಗಿತ್ತು. ಯದುವೀರ ಕೃಷ್ಣದತ್ತ ಒಡೆಯರ್ ಮಾವ ಅಂದ್ರೆ ಇದೇ ಯದುವೀರ ಅವರ ಧರ್ಮಪತ್ನಿಯ ತಂದೆ ಮೈಸೂರು & ಕೊಡಗು ಕ್ಷೇತ್ರ ಟಿಕೆಟ್ ತರಲು, ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದರು ಎಂಬ ಸತ್ಯ ಈಗ ಜಗತ್ತಿಗೆ ಗೊತ್ತಾಗುತ್ತಿದೆ.
ಇವರು ರಾಜಸ್ಥಾನ ಮೂಲದವರು. ಹಾಗಾಗಿ ಅವರ ಮೂಲಕ ರಾಜರು ಮಂತ್ರಿಗಳಾಗಲು ಬಂದಿದ್ದಾರೆ.ರಾಜರು ರಾಜರಾಗೇ ಇದ್ದಾರೆ ಮರ್ಯಾದೆ ಹೆಚ್ಚು ಅದನ್ನು ಬಿಟ್ಟು ಎಸಿ ರೂಮಿನಿಂದ ರೋಡಿಗೆ ಬರಬಾರದು ಇಲ್ಲಿ ಸೆಕೆ ಹೆಚ್ಚು, ಎಲ್ಲೆಡೆಯೂ ನೆರಳು ಸಹಾ ಸಿಗುವುದಿಲ್ಲ.ಎಂದು ಪ್ರತಾಪ್ ಸಿಂಹ ಟಾಂಗ್ ನೀಡಿದ್ದರು. ಹೀಗಿದ್ದಾಗ ತಮ್ಮ ವಿರುದ್ಧ ಪ್ರತಾಪ್ ಸಿಂಹ ನೀಡಿದ್ದ ಎಸಿ ರೂಂ ಹೇಳಿಕೆಗೂ ಯದುವೀರ್ ಇದೀಗ ಸರಿಯಾಗೇ ತಿರುಗೇಟು ನೀಡಿದ್ದಾರೆ. ಹಾಗೇ ತಮ್ಮ ರಾಜಕೀಯ ಭವಿಷ್ಯವನ್ನೂ ಸ್ಪಷ್ಟವಾಗಿ ಹೊರ ಜಗತ್ತಿಗೆ ತಿಳಿಸಿದ್ದಾರೆ.
ಕನ್ನಡದ ಖಾಸಗಿ ನ್ಯೂಸ್ ಚಾನೆಲ್‌ಗಳಿಗೆ ಸಂದರ್ಶನ ನೀಡಿರುವ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್, ಪ್ರತಾಪ್ ಸಿಂಹ ತಮ್ಮ ವಿರುದ್ಧ ನೀಡಿದ್ದ ಒಂದೊಂದು ಹೇಳಿಕೆಗೂ ಕಡ್ಡಿ ತುಂಡು ಮಾಡಿದಂತೆ ಉತ್ತರ ನೀಡಿದ್ದಾರೆ. ತಾವು ಎಸಿ ರೂಂನಲ್ಲಿ ಇದ್ದು ಹೊರಗೆ ಬರುತ್ತಿರುವವರು ಎಂಬ ಮಾತಿಗೆ ತಿರುಗೇಟು ನೀಡಿರುವ ಯದುವೀರ್, ಹಲವಾರು ವರ್ಷಗಳಿಂದ ನಾನು ಜನರ ನಡುವೆಯೇ ಇದ್ದೇನೆ ಎಂದು ಉತ್ತರಿಸಿದ್ದಾರೆ. ಹಾಗೇ ಇನ್ನೂ ಒಂದು ಮಾತನ್ನ ಸ್ಪಷ್ಟವಾಗಿ ಹೇಳಿದ ಯದುವೀರ್, ನನ್ನ ಸಾಮರ್ಥ್ಯವನ್ನ ಬೇರೆಯವರಿಗೆ ಸಾಬೀತು ಮಾಡುವ ಅಗತ್ಯತೆ ಇಲ್ಲ ಎಂಬ ಅರ್ಥದಲ್ಲಿ ತಿರುಗೇಟು ನೀಡಿದ್ದಾರೆ. ಇನ್ನು ಪ್ರತಾಪ್ ಸಿಂಹ ಅವರಿಗೆ ರಂಗಣ್ಣ ಸಹ ಬೆಂಬಲಿಸಿದ್ದಾರೆ.