ಮುಸ್ಲಿಮ್ ಮಕ್ಕಳ ಮೇಲೆ ಕರುಣೆ ತೋರಿದ ಪ್ರತಾಪ್; ಚಿಕ್ಕ ಮಕ್ಕಳ ಕೈಯಲ್ಲಿ ಲಕ್ಷ ಲಕ್ಷ ಹಣ ಕೊಟ್ರಾ ಡ್ರೋನ್

 | 
Hjk

ಸಾರ್ವಜನಿಕ ಜೀವನದಲ್ಲಿ ದೊಡ್ಡ ಮಟ್ಟದಲ್ಲಿ ನೆಗೆಟಿವಿಟಿ ಇಟ್ಟುಕೊಂಡು ಬಿಗ್ ಬಾಸ್ ಮನೆಗೆ ಹೋಗಿದ್ದ ಡ್ರೋನ್ ಪ್ರತಾಪ್ ಅವರು ಶೋನಲ್ಲಿ ನಡೆದುಕೊಂಡ ವರ್ತನೆಯಿಂದ ಒಂದಷ್ಟು ಪಾಸಿಟಿವ್ ಪ್ರತಿಕ್ರಿಯೆ ಪಡೆದರು. ‘ಬಿಗ್ ಬಾಸ್ ಕನ್ನಡ 10’ ಶೋನಿಂದ ಸಿಕ್ಕ ಬಹುಮಾನದ ಹಣವನ್ನು ಅರ್ಹರಿಗೆ ತಲುಪಿಸ್ತೀನಿ ಅಂತ ‘ಡ್ರೋನ್’ ಪ್ರತಾಪ್ ಹೇಳಿದ್ದರು. 

ಅಂತೆಯೇ ಈಗಾಗಲೇ ರನ್ನರ್ ಅಪ್‌ನಿಂದ ಬಂದ ಬೈಕ್‌ನ್ನು ಡೆಲಿವರಿ ಬಾಯ್‌ಗೆ ನೀಡಿದ್ದರು. ಈಗ ಹೆಣ್ಣು ಮಕ್ಕಳ ಶಿಕ್ಷಣಕ್ಕೆಂದು ಒಂದಷ್ಟು ಮೊತ್ತದ ಹಣ ನೀಡಿದ್ದಾರೆ. ಅಷ್ಟೆ ಅಲ್ಲ ತಂದೆ ತಾಯಿ ಇಲ್ಲದ ಶಬಾನಗೆ ರಮಜಾನ ಹಬ್ಬಕ್ಕೆ ಉಡುಗೊರೆ ನೀಡಿದ್ದಾರೆ. ತಂದೆ ತಾಯಿ ತೀರಿ ಹೋಗಿ ಹಬ್ಬ ಮಾಡಲೂ ಸಾಧ್ಯವಿಲ್ಲ ಎಂದು ಬೇಸರದಲ್ಲಿದ್ದ ಶಬಾನಾ ಮುಖದಲ್ಲಿ ನಗು ಮೂಡಿಸಿದ್ದಾರೆ.

ಈ ಹಿಂದೆ ಕೂಡ ಡ್ರೋನ್ ಪ್ರತಾಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಗೆ ಹಣ ನೀಡಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಣ ಪಡೆದ ಮಹಿಳೆ ಹಾಗೂ ಅವರ ಇಬ್ಬರು ಮಕ್ಕಳು ತುಂಬ ಖುಷಿಪಟ್ಟಿದ್ದು,ನಾವು ಈ ಹಿಂದಿನ ಬಿಗ್ ಬಾಸ್ ಸೀಸನ್‌ಗಳನ್ನು ನೋಡಿರಲಿಲ್ಲ, ಈ ಬಾರಿ ಸೀಸನ್ ನೋಡಿದ್ದೆವು, ನಿಮ್ಮನ್ನು ನಾವು ಇಷ್ಟಪಟ್ಟಿದ್ದಕ್ಕೂ ಸಾರ್ಥಕ ಆಯ್ತು, ಅನೇಕರು ಸಹಾಯ ಮಾಡ್ತೀನಿ ಅಂತ ಹೇಳ್ತಾರೆ, ಆದರೆ ಸಹಾಯ ಮಾಡೋದಿಲ್ಲ. ನೀವು ಹೇಳಿದಂತೆ ಸಹಾಯ ಮಾಡಿದ್ದೀರಿ, ನೀವೇ ಶ್ರೇಷ್ಠ ಎಂದು ಆ ಮಹಿಳೆ ಹೇಳಿದ್ದಾರೆ. ಅಂದಹಾಗೆ ಆ ಮಹಿಳೆಯ ಹೆಸರನ್ನು ರಿವೀಲ್ ಮಾಡಿಲ್ಲ.

ಬಿಗ್ ಬಾಸ್ ಶೋನಿಂದ ಹೊರಗಡೆ ಬಂದಮೇಲೆ ಪ್ರತಾಪ್ ಅವರು ಸಾಕಷ್ಟು ಸಂದರ್ಶನಗಳಲ್ಲಿ ದೊಡ್ಮನೆಯ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಜನರಿಗೆ ಸಹಾಯ ಮಾಡುವ ಶಕ್ತಿ ನನಗೆ ಸಿಗಬೇಕು ಎಂದಿದ್ದಾರೆ.ಕೆಲ ಸಮಯದಿಂದ ಪ್ರತಾಪ್ ಟ್ರೋಲ್ ಆಗಿದ್ದೇ ಹೆಚ್ಚು. ಆದರೆ ಈಗ ಅವರಿಗೆ ಫ್ಯಾನ್ಸ್ ಸಂಖ್ಯೆ ಹೆಚ್ಚಾಗಿದೆ. ಸೋಶಿಯಲ್ ಮೀಡಿಯಾದಲ್ಲೂ ತಮ್ಮ ಹವಾ ತೋರಿಸುತ್ತಿದ್ದಾರೆ ಅವರು. 

ಅಲ್ಲಿಯೂ ಕೂಡ ಅವರಿಗೆ ದೊಡ್ಡ ಸಂಖ್ಯೆಯ ಫಾಲೋವರ್ಸ್ ಹುಟ್ಟಿಕೊಳ್ಳುತ್ತಿದ್ದಾರೆ ಮತ್ತು ಪ್ರೀತಿ ತೋರುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಈ ಮಧ್ಯೆ ದುಬೈಗೆ ಡ್ರೋನ್ ಪ್ರತಾಪ್ ಹೋಗಿದ್ದು, ಅದು ಕೂಡ ಸುದ್ದಿಯಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.