'ಪ್ರತಾಪ್ ಮುಖ ಕಾಗೆ ತರ ಇದೆ ಎಂದ ಇಶಾನಿ' ಎದ್ದು ಬಿದ್ದು ನಗಾಡಿದ ಕಿಚ್ಚ ಸುದೀಪ್
ಬಿಗ್ ಬಾಸ್ ಕನ್ನಡ 10 ಕಾರ್ಯಕ್ರಮದಲ್ಲಿ 15ನೇ ವಾರ ಮಾಜಿ ಸ್ಪರ್ಧಿಗಳು ರೀ-ಎಂಟ್ರಿಕೊಟ್ಟಿದ್ದರು. ಇಶಾನಿ ಬಂದಾಗ ಡ್ರೋನ್ ಪ್ರತಾಪ್ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡಿದ್ದರು. ರಕ್ಷಕ್ ಕೂಡ ಡ್ರೋನ್ ಪ್ರತಾಪ್ ಅವರೊಂದಿಗೆ ಕಿರಿಕ್ ಮಾಡಿದ್ದರು. ಸ್ನೇಹಿತ್ ಹಾಗೂ ಇಶಾನಿ ಮಾತುಗಳಿಂದಾಗಿ ನಮ್ರತಾ ಮಾನಸಿಕವಾಗಿ ಕುಗ್ಗಿದ್ದರು.
ಇದನ್ನೆಲ್ಲಾ ನೋಡಿ ಅಪ್‌ಸೆಟ್ ಆಗಿರುವ ಕಿಚ್ಚ ಸುದೀಪ್, ಈ ಬಗ್ಗೆ ಸೀಸನ್‌ನ ಕೊನೆಯ ಪಂಚಾಯತಿ ಸಂಚಿಕೆಯಲ್ಲಿ ಮಾತನಾಡಿದ್ದಾರೆ.ಡ್ರೋನ್ ಪ್ರತಾಪ್ ಬಗ್ಗೆ ಕೀಳಾಗಿ ಕಾಮೆಂಟ್ ಮಾಡಿರುವ ಇಶಾನಿಗೆ ಕಿಚ್ಚ ಸುದೀಪ್ ಕೌಂಟರ್ ಕೊಟ್ಟಿದ್ದಾರೆ. ಇಶಾನಿಗೆ ತಮ್ಮ ಮಾತಿನ ಮೂಲಕವೇ ಕಿಚ್ಚ ಸುದೀಪ್ ಬಿಸಿ ಮುಟ್ಟಿಸಿದ್ದಾರೆ.
ಕಾಗೆ ಗೊತ್ತಿಲ್ವಾ? ಕಾಗೆ ಕಕ್ಕ ಮಾಡಿಬಿಟ್ಟು.. ಎಲ್ಲಾ ಕಡೆ ಹೋಗ್ತಾನೇ ಇದೆ. ಸಿಂಪಥಿ ಕಾರ್ಡ್ ಯೂಸ್ ಮಾಡಿ ಉಳ್ಕೊಂಡಿದ್ದಾರೆ. ಕಾಗೆ ಕಾ.. ಕಾ.. ಅಂತಿದೆ ಎಂದು ಡ್ರೋನ್ ಪ್ರತಾಪ್ ಬಗ್ಗೆ ಇಶಾನಿ ಹೇಳಿದ್ದರು.ಹಾಯ್ ಇಶಾನಿ.. ನೀವು ನೋಡ್ತಿದ್ದೀರಾ ಅಂತ ಭಾವಿಸ್ತೀನಿ. ‘ಕಾಗೆ ಕಕ್ಕ ಮಾಡಿಕೊಂಡು ಓಡಾಡ್ತಾ ಇದೆ. ಸಿಂಪಥಿಯಿಂದ ಗೆದ್ದುಕೊಂಡು ಬಂದಿದೆ’’ ಅಂತೀರಿ. ವಾವ್ ಇಶಾನಿ.! ನಿಮ್ಮ ಈ ಸಾಹಿತ್ಯ ನನಗೆ ಬಹಳ ಇಷ್ಟ ಆಯ್ತು.
ಕಾಗೆ ಕಕ್ಕಾ ಮಾಡ್ತಿರೋದು ಕಾಣ್ತಾ ಇದೆ. ಆದರೆ, ಕಾಗೆ ಇನ್ನೂ ಮನೆಯೊಳಗೆ ಇದೆ ಅನ್ನೋದು ನಿಮಗೆ ಕಾಣ್ತಿಲ್ವಾ? ಪ್ರತಾಪ್ ಅವರು ಗೆದ್ದು ಉಳ್ಕೊಂಡಿದ್ದಾರೆ ಎಂದು ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಇಶಾನಿಗೆ ಕಿಚ್ಚ ಸುದೀಪ್ ತಿರುಗೇಟು ಕೊಟ್ಟಿದ್ದಾರೆ.ಇದೇ ವೇಳೆ, ಪ್ರತಾಪ್ ನಿಮಗೆ ಉತ್ತರ ಕೊಡೋಕೆ ಬರಲ್ವಾ?ಎಂದು ಕಿಚ್ಚ ಸುದೀಪ್ ಪ್ರಶ್ನಿಸಿದರು. ಅದಕ್ಕೆ, ಗೆಸ್ಟ್ ಅಂತ ಸುಮ್ಮನೆ ಇದ್ದೆ ಸರ್ ಎಂದು ಡ್ರೋನ್ ಪ್ರತಾಪ್ ಹೇಳಿದರು.
ನಿಮಗೆ ಒಂದು ಮಾತು ಹೇಳ್ತೀನಿ ಕೇಳಿ.. ನಾನು ತುಂಬಾ ಹಂಬಲ್. ವೆರಿ ಹ್ಯೂಮನ್. ಆದರೆ, ಅದು ನನ್ನ ಕ್ಯಾರೆಕ್ಟರ್ ಅಲ್ಲ. ಅದು gesture. ಯಾರಿಗೆ ಹೋಗಬೇಕೋ, ಅವರಿಗೆ ಮಾತ್ರ ಹೋಗಬೇಕು. ಗೌರವಕ್ಕೆ ಅರ್ಹ ಇಲ್ಲದಿರೋರಿಂದ ದೂರ ಇರೋಕೆ ಪ್ರಯತ್ನ ಪಡಿ. ಕೆದಕಿ ಕೆದಕಿ ಬರ್ತಾಯಿದ್ದರೆ, ಉತ್ತರ ಕೊಡೋಕೆ ಪ್ರಯತ್ನ ಪಡಿ. ನೀವ್ಯಾರೂ ಇಲ್ಲಿಯವರೆಗೂ ಏನೂ ಮಾಡದೇ ಬಂದಿಲ್ಲ.
ಇದು ತಲೆಯಲ್ಲಿ ಇರಲಿ ಎಂದರು ಕಿಚ್ಚ ಸುದೀಪ್. ಒಟ್ಟಿನಲ್ಲಿ ಬಿಗ್ಬಾಸ್ ಮನೆಯಲ್ಲಿ ಪ್ರತಾಪ್ ಗೆ ಹೇಳಿ ಅವರ ಅಭಿಮಾನಿಗಳ ಕೈಲಿ ಮತ್ತು ಸುದೀಪ ಅವರಿಂದಲು ಉಗಿಸಿ ಕೊಂಡ ಇಶಾನಿ ಸಪ್ಪೆ ಮುಖ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.