ದರ್ಶನ್ ಗೆ ಮತ್ತೆ ಬೈದ ಪ್ರಥಮ್, ಇಲ್ಲಿ ಯಾವ ಡಿ ಬಾಸೂ ಇಲ್ಲ ಮಣ್ಣೂ ಇಲ್ಲ
Feb 19, 2025, 13:09 IST
|

ನಟ ದರ್ಶನ್ ಅಭಿಮಾನಿಗಳು ಹಾಗೂ ನಟ ಪ್ರಥಮ್ ನಡುವಿನ ವಾರ್ ಆಗಾಗ ಸುದ್ದಿ ಆಗ್ತಾನೆ ಇರುತ್ತೆ. ಪ್ರಥಮ್ ಖಡಕ್ ಮಾತುಗಳು ದಚ್ಚು ಅಭಿಮಾನಿಗಳನ್ನು ರೊಚ್ಚಿಗೇಳಿಸಿದ ಉದಾಹರಣೆ ಕೂಡ ಇದೆ. ದರ್ಶನ್ ಜೈಲು ಸೇರಿದ್ದ ವೇಳೆ ನಟ ಪ್ರಥಮ್ ಆಡಿದ ಮಾತುಗಳು ಡಿ ಬಾಸ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು.
ದರ್ಶನ್ ಫ್ಯಾನ್ಸ್ ನಟ ಪ್ರಥಮ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ರು. ದಾಸ ಅಭಿಮಾನಿಗಳ ಕಾಟಕ್ಕೆ, ಬೆದರಿಕೆಗೆ ಬೇಸತ್ತ ಪ್ರಥಮ್ ಅವರು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ರು. ಡಿ ಬಾಸ್ ಅಂತ ಕೂಗಿದ ಅಭಿಮಾನಿಗೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದ ಪ್ರಥಮ್ ಇದೀಗ ದರ್ಶನ್ ಹುಟ್ಟುಹಬ್ಬದ ದಿನ ಶಾಕಿಂಗ್ ಪೋಸ್ಟ್ ಮಾಡಿದ್ದಾರೆ.
ನೀವೆಲ್ಲರೂ ಕನ್ನಡಿಗರು ನನಗೆ ಮಾಧ್ಯಮದವರು ಬಾಸ್, ನಿಮಗೆ ಅಂದ್ರೆ ಜನರಿಗೆ ಅವರ ಅಮ್ಮ-ಅಮ್ಮನೇ ಬಾಸ್ ಎಂದ್ರು ಪ್ರಥಮ್. ಜನರು ನಮ್ಮನ್ನು ನೋಡಿದ್ರಷ್ಟೇ ನಾನು ಇಲ್ಲಿ ನಟರಾಗ್ತೀವಿ. ನಾವು ನಟರಷ್ಟೇ. ಇಲ್ಲಿ ಯಾರನ್ನು ಕೂಡ ದೇವರನ್ನಾಗಿ ಮಾಡ್ಬೇಡಿ ಎಂದು ಪ್ರಥಮ್ ಹೇಳಿದ್ರು. ಈ ಹಿಂದೆ ಕೂಡ ಪ್ರಥಮ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ಇದೀಗ ಪ್ರಥಮ್ ಡಿಬಾಸ್ ಎಂದು ಘೋಷಣೆ ಕೂಗಿದವರಿಗೆ ಹಿಗ್ಗಾಮುಗ್ಗಾ ಬೈದಿದ್ದಾರೆ.ಯಾರಿಗೆ ನಿಮ್ಮ ಅಪ್ಪ-ಅಮ್ಮ ಬಾಸ್ ಅಲ್ಲ ಅನ್ನೋದು ಮುಂದೆ ಬನ್ನಿ. ಕರ್ನಾಟಕದಲ್ಲಿ ಕನ್ನಡ ಬಾಸ್, ನೀವೆಲ್ಲರೂ ನಮಗೆ ಬಾಸ್. ಇಲ್ಲಿ ಯಾರು ಕನ್ನಡಿಗರಲ್ಲದ ಬೆರಕೆಗಳು ಇದ್ದರೂ ಅವರು ನನಗೆ ಬಾಸ್ ಅಲ್ಲ ಎಂದು ಪ್ರಥಮ್ ಕೋಪದಲ್ಲೇ ಮಾತಾಡಿದ್ದಾರೆ. ಕಲಾವಿದರನ್ನು ಕಂಡಾಗ ಮಾತಾಡಿಸಿ, ಅವರನ್ನು ದೇವರಂತೆ ಪೂಜಿಸಬೇಡಿ ಎಂದು ಪ್ರಥಮ್ ಹೇಳಿದ್ರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.