'ನಾನು ಮದುವೆಯಾಗೋ ಹುಡುಗಿ ರಾಚಿತಾ ರಾಮ್ ತರ ಇರಬೇಕು ಎಂದ ಪ್ರತಾಪ್' ನಾಚಿ‌ ನೀರಾದ ನಿರಂಜನ್

 | 
Diu

ಒಂದಿಷ್ಟು ಕಾಂಟ್ರವರ್ಸಿಯ ಮೂಲಕವೇ ಕೆಲ ವರ್ಷ ಸುದ್ದಿಯಲ್ಲಿದ್ದ ಡ್ರೋಣ್ ಪ್ರತಾಪ್‌, ಬಿಗ್‌ ಬಾಸ್‌ಗೆ ಹೋಗಿ ಬಂದ ಮೇಲೆ ಅವರ ಚಹರೆಯೇ ಬದಲಾಯ್ತು. ಬಿಗ್‌ ಮನೆಯಲ್ಲಿ ಅವರ ನಿಜ ಸ್ವಭಾವ ಅವರನ್ನು ಫಿನಾಲೆ ವರೆಗೂ ಕರೆದುಕೊಂಡು ಬಂದಿತು. ಅಷ್ಟೇ ಅಲ್ಲ ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ರನ್ನರ್‌ ಅಪ್‌ ಆಗಿ ಮಿಂಚಿದರು ಡ್ರೋಣ್‌ ಪ್ರತಾಪ್.‌ ಶೋ ಮುಗಿದ ಬಳಿಕ ಪ್ರತಾಪ್‌ಗೆ ಪುನರ್ಜನವೇ ಸಿಕ್ಕಂತಾಗಿತ್ತು. 

ಪ್ರತಿಯೊಬ್ಬರಿಗೂ ಅವನು/ಅವಳು ಮದುವೆಯಾಗೋ ಹುಡುಗ ಅಥವಾ ಹುಡುಗಿ ಹೇಗಿರಬೇಕು ಎಂಬ ನೂರಾರು ಕನಸುಗಳಿರುತ್ತವೆ. ಆ ಕನಸಿನ ಬಗ್ಗೆಯೇ ಇದೀಗ ಡ್ರೋಣ್‌ ಪ್ರತಾಪ್‌, ವೇದಿಕೆ ಮೇಲೆ ನೆರೆದಿದ್ದ ಸಾವಿರಾರು ಜನರ ಮುಂದೆ ಹೇಳಿಕೊಂಡಿದ್ದಾರೆ. ಹೊಸಪೇಟೆಯಲ್ಲಿ ಕೆಂಡಸಂಪಿಗೆ ಸೀರಿಯಲ್‌ ಸಂತೆ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಬಿಗ್‌ಬಾಸ್‌ನ ಬಹುತೇಕರು ಭಾಗವಹಿಸಿದ್ದರು. ಪ್ರತಾಪ್‌ ಸಹ ಭಾಗವಹಿಸಿ ಡಾನ್ಸ್‌ ಮಾಡಿ ಸಂಭ್ರಮಿಸಿದ್ದಾರೆ.

ಪ್ರತಾಪ್ ಅವರಿಗೆ ಅವಮಾನವಾದ ಕಡೆಯಲ್ಲಿ ಸನ್ಮಾನ ಸಿಕ್ಕವು. ಅಪ್ಪ ಅಮ್ಮ ಹತ್ತಿರವಾದರು. ಈಗ ತನ್ನ ಹುಡುಗಿ ಬಗ್ಗೆಯೂ ಹೇಳಿಕೊಂಡಿದ್ದಾರೆ ಪ್ರತಾಪ್. ಇನ್ನೂ, ಇದೇ ಜಾತ್ರಾ ಮಹೋತ್ಸವದಲ್ಲಿ ತನಗೆ ಮದುವೆಯಾಗೋ ಹುಡುಗಿ ಹೇಗೆ ಇರಬೇಕು ಅಂತಾ ಬಾಯ್ಬಿಟ್ಟಿದ್ದಾರೆ. ಹೌದು, ವೇದಿಕೆ ಮೇಲೆ ನಿರೂಪಕ ನಿರಂಜನ್ ದೇಶಪಾಂಡೆ ಅವರು ಕೇಳಿದ ಪ್ರಶ್ನೆಗೆ ಖಡಕ್​ ಆಗಿ ಉತ್ತರ ನೀಡಿದ್ದಾರೆ. ನನ್ನ ತಂದೆ ತೋರಿಸೋ ಹುಡುಗಿಯನ್ನು ಬಿಟ್ಟರೆ ಎಲ್ಲ ಹೆಣ್ಣು ಮಕ್ಕಳನ್ನ ದೀದಿ ಅಂತಲೇ ಕರೆಯುತ್ತೇನೆ ಅಂತಾ ಡ್ರೋನ್​ ಪ್ರತಾಪ್​​ ಹೇಳಿದ್ದಾರೆ.

ಆಗ ನಿರಂಜನ್ ದೇಶಪಾಂಡೆ ಅವರು ನೀವು ಮದುವೆಯಾಗೋ ಹುಡುಗಿ ಹೇಗೆ ಇರಬೇಕು ಅಂತಾ ಕೇಳುತ್ತಾರೆ. ಆಗ ಡ್ರೋನ್​ ಪ್ರತಾಪ್​​, ನೋಡುವುದಕ್ಕೆ ಕಪ್ಪಾಗಿದ್ರು ಪರವಾಗಿಲ್ಲ. ನೋಡಿದ ತಕ್ಷಣ ಒಳ್ಳೆಯ ಹುಡುಗಿ ಅಂತಾ ಅನಿಸಬೇಕು. ಜಡೆಯನ್ನು ಹೆಣೆದುಕೊಂಡು ಇರಬೇಕು ಅಂದರೆ ಉದ್ದ ಕೂದಲಿನ ಹುಡುಗಿ ಬೇಕು ಅಂತಾ ಹೇಳಿದ್ದಾರೆ. ಜತೆಗೆ ನಮ್ಮ ಅಪ್ಪ ಯಾವ ಹುಡುಗಿಯನ್ನು ತೋರಿಸುತ್ತಾರೋ ಅವರನ್ನೇ ನಾನು ಮದುವೆ ಆಗುತ್ತೇನೆ ಅಂತಾ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Pawerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.