ತೋಟದಲ್ಲಿ ಕೆಲಸ ಮಾಡುತ್ತಿರುವ ಅಮೂಲ್ಯ ಅವಳಿ ಜವಳಿ ಮಕ್ಕಳು; ಗಂಡ ಜಗದೀಶ್ ಕಣ್ಣೀರು

 | 
ಹಗಹ

ಆಡಿ ಬಾ ನನಕಂದ, ಅಂಗಾಲ ತೊಳೆದೇನ ಎನ್ನುತ್ತಾ ಜನಪದದ ತಾಯಂದಿರು ಹಾಡುತ್ತಿದ್ದರು. ತಮ್ಮ ಮಕ್ಕಳು ಎಂಥಾ ಮಣ್ಣುರಾಡಿಯಲ್ಲಿ ಆಡಿ, ಬಿದ್ದು ಹೊರಳಾಡಿ ಬಂದರೂ ಅವರಿಗೇನೂ ತಕರಾರು ಇರುತ್ತಿರಲಿಲ್ಲ. ಮಕ್ಕಳಿರುವುದೇ ಹೀಗೆ ಎಂದು ನಿರುಮ್ಮಳವಾಗಿರುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಣ್ಣಲ್ಲಿ ಆಡುವ ಮಕ್ಕಳು ಎಲ್ಲಿ ಕಾಣುತ್ತಾರೆ. ನಿಜ ಹೇಳುವುದಾದರೆ, ಮಕ್ಕಳು ಬೀದಿಯಲ್ಲಿ ಆಡುವುದೇ ಕಡಿಮೆಯಾಗಿದೆ. 

ಹಾದಿ-ಬೀದಿಯಲ್ಲಿ ಸಿಕ್ಕವರೊಟ್ಟಿಗೆ ಸಿಕ್ಕ ರೀತಿಯಲ್ಲಿ ರಸ್ತೆರಾಜ ಅಥವಾ ರಾಣಿಯರಂತೆ ಮಕ್ಕಳು ಆಡುವ ದೃಶ್ಯವೂ ಅದೃಶ್ಯವಾಗಿದೆ.ಮಣ್ಣಲ್ಲಿರುವ ಅಪಾಯಕಾರಿ ಬ್ಯಾಕ್ಟೀರಿಯಾಗಳಿಗೆ ಮಕ್ಕಳನ್ನು ಈ ದಿನಗಳಲ್ಲಿ ಒಡ್ಡಬೇಕೆ ಎಂಬುದು ಖಂಡಿತಾ ಚರ್ಚಾಸ್ಪದ ವಿಷಯವೇ. ತಂದೆ-ತಾಯಂದಿರು ಬೇಡವೇ ಬೇಡ ಎಂದು ಹೇಳಿದರೂ, ಅಗತ್ಯವಾಗಿ ಬೇಕು ಎಂದು ಹೇಳುತ್ತಾರೆ ತಜ್ಞರು.

 ಅಂದರೆ ಮಕ್ಕಳನ್ನು ತೀರಾ ಗಟಾರದಲ್ಲಿ ಆಡುವುದಕ್ಕೆ ಬಿಡಬೇಕು ಎಂಬರ್ಥದಲ್ಲಿ ಅಲ್ಲ, ಆದರೆ ಇಂಟರ್‌ಲಾಕ್‌ ಹಾಕಿದ ಆಟದ ಮೈದಾನದಲ್ಲಿ ಬಿಡುವುದು ಸೂಕ್ತವಲ್ಲ. ಬದಲಿಗೆ ಅವರು ಕಲ್ಲು-ಮಣ್ಣು, ಕೆಸರು, ಮರಳಿನಂಥ ಜಾಗಗಳಲ್ಲಿ ಆಡುವುದು ಸರಿಯಾದದ್ದು ಎನ್ನುತ್ತಾರೆ ನಟಿ ಅಮೂಲ್ಯ. ಹೌದು ಅವರು ಮಕ್ಕಳಿಗೆ ಮಣ್ಣಿನಲ್ಲಿ ಅಡಿಸುತ್ತಾರಂತೆ.

ತೋಟದ ಮನೆಯಲ್ಲಿ ಅಪ್ಪನ ಜೊತೆ ಗಿಡವನ್ನು ನೆಟ್ಟು. ಮಣ್ಣಿನಲ್ಲಿ ಆಡಿ ನೀರಲ್ಲಿ ಕೈ ತೊಳದುಕೊಂಡು ಎಲ್ಲರ ಗಮನ ಸೆಳೆದಿದ್ದಾರೆ ಅಮೂಲ್ಯ ಅವರ ಪುಟ್ಟ ಮಕ್ಕಳು. ಮಣ್ಣು ಮುಟ್ಟಬೇಡ ಎಂದೆನ್ನುವ ನೂರಾರು ತಾಯಂದಿರ ನಡುವೆ ಅಮೂಲ್ಯ ವಿಭಿನ್ನವಾಗಿ ನಿಲ್ಲುತ್ತಾರೆ. ಮುದ್ದು ಮಕ್ಕಳು ಸಹಾ ಮಣ್ಣಿನ ಆಟವನ್ನು ಎಂಜಾಯ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.