ಗಟ್ಟಿ ಮೇಳ ನಿಶಾ ಹಾಗೂ ವಿಶಾಲ್ ನಡುವೆ ನಿಜಜೀವನದಲ್ಲೂ ಪ್ರೀತಿ ಪ್ರೇಮಾ, ಸಿಹಿಸುದ್ದಿ ನೀಡಲಿರುವ ಜೋಡಿ

 | 
ಕೇ
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯ ಶಿವು ಮತ್ತು ಪಾರ್ವತಿ ಜೋಡಿ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಗಟ್ಟಿಮೇಳದಲ್ಲಿ ರೌಡಿ ಬೇಬಿ ಅಮೂಲ್ಯ ಪಾತ್ರದ ಮೂಲಕ ಮೋಡಿ ಮಾಡಿದ ನಿಶಾ ರವಿಕೃಷ್ಣನ್, ಇಲ್ಲೂ ಅಷ್ಟೆ ಪಾರ್ವತಿ ಎನ್ನುವ ಸಖತ್ ಖಡಕ್ ಪಾತ್ರದ ಮೂಲಕ, ತನ್ನ ಅಪ್ಪನಿಗೆ ಠಕ್ಕರ್ ಕೊಡುತ್ತಾ, ಗಂಡ ಶಿವು ಮತ್ತು ಆತನ ತಂಗಿಯರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಬಂದರೂ ಅದನ್ನು ಎದುರಿಸುತ್ತಾ ನಿಲ್ಲುವ ಗಟ್ಟಿಗಿತ್ತಿ ಪಾರು. ಹಾಗಾಗಿ ಪಾರು ಮತ್ತು ಮುಗ್ಧ ಶಿವು ಜೋಡಿ ಜನರಿಗೆ ಸಿಕ್ಕಾಪಟ್ಟೆ ಇಷ್ಟ. 
ಶಿವು ಪಾತ್ರದಲ್ಲಿ ನಟಿಸುತ್ತಿರುವ ವಿಕಾಶ್ ಉತ್ತಯ್ಯ ಹಾಗೂ ಪಾರು ಪಾತ್ರದಲ್ಲಿ ನಟಿಸುತ್ತಿರುವ ನಿಶಾ ರವಿಕೃಷ್ಣನ್ ಅವರ ಒಂದಿಷ್ಟು ವಿಡೀಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿರೋದ್ರಿಂದ ಈ ಜೋಡಿ, ರಿಯಲ್ ಆಗಿ ಲವ್ ಮಾಡ್ತಿದ್ದಾರೆಯೇ ಎಂದು ಅಭಿಮಾನಿಗಳಲ್ಲಿ ಅನುಮಾನ ಹುಟ್ಟಿದೆ. ಇದಕ್ಕೆ ಕಾರಣ ಹಲವು. ರಿಯಾಲಿಟಿ ಶೋಗಳಲ್ಲೂ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆ ಕಾರ್ಯಕ್ರಮದಲ್ಲಿ ನಿಶಾ ಅಮ್ಮನಿಗೆ ಕರೆ ಮಾಡಿದಾಗ, ವಿಕಾಶ್ ಯಾವಾಗ್ಲೂ ನಿಶಾನ ಕಾರಲ್ಲಿ ಡ್ರಾಪ್ ಮಾಡೋದಾಗಿ ಹೇಳಿದ್ದರು, ಅದಾದ ಬಳಿಕ ಸರಿಗಮಪ ವೇದಿಕೆಯಲ್ಲೂ ಅನುಶ್ರೀ ಇಬ್ಬರ ಕಾಲು ಎಳೆದು ತಮಾಷೆ ಮಾಡಿದ್ದರು. 
ಅಷ್ಟೇ ಅಲ್ಲ ಇತ್ತೀಚೆಗೆ ವಿಕಾಶ್ ಉತ್ತಯ್ಯ ಅವರ ಸಿನಿಮಾ ಅಪಾಯವಿದೆ ಎಚ್ಚರಿಕೆ ಸೆಲೆಬ್ರಿಟಿ ಶೋ ಸಮಯದಲ್ಲಿ ಇಬ್ಬರು ಜೊತೆಯಾಗಿ ಕೈ ಕೈ ಹಿಡಿದುಕೊಂಡು ನಿಂತಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಇನ್ನು ಈ ಜೋಡಿಯ ಮುದ್ದಾದ ರೊಮ್ಯಾಂಟಿಕ್ ವಿಡಿಯೋ ಬೆಲ್ದಚ್ಚಂಗೆ ಪಾರು ನೀನು ನಂಗೆ ಹಾಡು ಸಖತ್ ವೈರಲ್ ಆಗಿತ್ತು, ಅದಾದ ಬಳಿಕ ಈ ಜೋಡಿ ಅಪಾಯವಿದೆ ಎಚ್ಚರಿಕೆ ಸಿನಿಮಾದ ಹಾಡಿಗೂ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದು, ಆ ವಿಡೀಯೋವನ್ನು ಅಭಿಮಾನಿಗಳು ಇಷ್ಟಪಟ್ಟಿದ್ದರು. 
ಇದೀಗ ಈ ಜೋಡಿ ಮತ್ತೊಂದು ಹಾಡಿಗೆ ಅಷ್ಟೇ ರೋಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದು ಅಭಿಮಾನಿಗಳಿಗಾಗಿ ಈ ವಿಡೀಯೋ ಎಂದಿದ್ದಾರೆ. ವಿಕಾಶ್ ಉತ್ತಯ್ಯ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡೀಯೋ ಶೇರ್ ಮಾಡಿದ್ದು, ಇದನ್ನು ನಮ್ಮ ಫ್ಯಾನ್ ಪೇಜ್ ಗಳಿಗಾಗಿ ಡೆಡಿಕೇಟ್ ಮಾಡುತ್ತಿದ್ದೇವೆ. ನಿಮ್ಮ ಪ್ರೀತಿ ನಮಗೆ ಪ್ರಪಂಚವೇ ಆಗಿದೆ ಎಂದಿದ್ದಾರೆ. ಇವರಿಬ್ಬರ ಮುದ್ದಾದ ವಿಡಿಯೋ ನೋಡಿ, ಜನ ಆದಷ್ಟು ಬೇಗನೆ ಗುಡ್ ನ್ಯೂಸ್ ಕೊಡಿ ಎಂದಿದ್ದಾರೆ. ಸದ್ಯದಲ್ಲೇ ಈ ಜೋಡಿ ಮದುವೆಯಾಗಲಿದೆ ಎಂದಿದ್ದಾರೆ, ಯಾರದೇ ದೃಷ್ಟಿ ಬೀಳದಿರಲಿ, ನಿಮ್ಮಿಬ್ಬರ ಡುಯೆಟ್ ಯಾವ ಸಿನಿಮಾಗೂ ಕಮ್ಮಿ ಇಲ್ಲ ಎಂದಿದ್ದಾರೆ. ನೀವಿಬ್ಬರು ಜೊತೆಯಾಗಿದ್ದರೇನೆ ಚೆಂದ ಅಂತಾನೂ ಕಾಮೆಂಟ್ ಮಾಡಿದ್ದಾರೆ.