ಪ್ರೇಮ್ ಮಗ ಚಿತ್ರರಂಗಕ್ಕೆ ಎಂಟ್ರಿ ಕೊಡದಂತೆ ಸ್ಕೆಚ್ ಹಾಕಿದ್ಯಾರು; ರಕ್ಷಿತಾ ಗರಂ

 | 
Hd

ನೆಪೋಟಿಸಂ ಬಗ್ಗೆ ಕೆಲ ವರ್ಷಗಳಿಂದ ಭಾರೀ ಚರ್ಚೆ ಆಗುತ್ತಿದೆ. ಅದರಲ್ಲೂ ಬಾಲಿವುಡ್‌ನಲ್ಲಿ ಈ ಬಗ್ಗೆ ಪದೇ ಪದೆ ಪರ - ವಿರೋಧ ವಾದ ಕೇಳಿಬರುತ್ತಲೇ ಇರುತ್ತದೆ. ಸ್ಟಾರ್ ಕಿಡ್ಸ್ ಚಿತ್ರರಂಗಕ್ಕೆ ಬಂದರೆ ಬೇರೆಯವರಿಗೆ ಅವಕಾಶಗಳು ಸಿಗಲ್ಲ ಎನ್ನುವ ಆರೋಪ ಇದೆ. ಸ್ಟಾರ್ಸ್ ಮಕ್ಕಳು ಎನ್ನುವ ಕಾರಣಕ್ಕೆ ಅವರನ್ನು ಚಿತ್ರರಂಗದಲ್ಲಿ ಬೆಳಸಬೇಕಾ? ಎನ್ನುವವರು ಇದ್ದಾರೆ.

ಪ್ರತಿಭೆ ಇರುವ ಯಾರೇ ಆಗಲಿ ತಮ್ಮ ಪರಿಶ್ರಮದಿಂದ ಗೆಲ್ಲಬಹುದು. ಆದರೆ ಕೆಲ ಕ್ಷೇತ್ರಗಳಲ್ಲಿ ಮಾತ್ರ ಆವರ ಹಿನ್ನೆಲೆ ನೋಡಿ ಅವಕಾಶಗಳು, ಸೌಕರ್ಯಗಳು ದೊರೆಯುತ್ತದೆ. ಇದೇ ಕಾರಣಕ್ಕೆ ಅರ್ಹರು ಅವಕಾಶ ವಂಚಿತರಾಗುತ್ತಾರೆ ಎನ್ನುವ ಚರ್ಚೆ ಇಂದು ನಿನ್ನೆಯದಲ್ಲ. ಸ್ವಜನ ಪಕ್ಷಪಾತ ಎನ್ನುವುದು ಚಿತ್ರರಂಗದಲ್ಲಿ ಗಾಢವಾಗಿದೆ ಎಂದು ಕೆಲವರು ಹೇಳುತ್ತಾರೆ. ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ಬಾಲಿವುಡ್‌ನಲ್ಲಿ ನೆಪೋಟಿಸಂ ಬಗ್ಗೆ ಚರ್ಚೆ ಹೆಚ್ಚಾಯಿತು.

ಹಿಂದಿ ಚಿತ್ರರಂಗದಲ್ಲಿದ್ದ ಸ್ವಜನ ಪಕ್ಷಪಾತ ಕೂಡ ಸುಶಾಂತ್ ಸಿಂಗ್ ನಿಧನಕ್ಕೆ ಕಾರಣ ಎನ್ನುವ ಅರ್ಥದಲ್ಲಿ ಕೆಲವರು ಮಾತನಾಡಿದರು. ಬಳಿಕ ಜಾನ್ವಿ ಕಪೂರ್, ಆಲಿಯಾ ಭಟ್, ಅರ್ಜುನ್ ಕಪೂರ್, ಇಶಾನ್ ಕಟ್ಟರ್ ಸೇರಿದಂತೆ ಹಲವರನ್ನು ನೆಪೋ ಕಿಡ್ಸ್ ಎಂದು ದೂರುವವರು ಇದ್ದಾರೆ. ಇನ್ನು ಸಲ್ಮಾನ್ ಖಾನ್, ಕರೀನಾ ಕಪೂರ್ ಸೇರಿದಂತೆ ಹಲವರು ಇದೇ ರೀತಿ ಚಿತ್ರರಂಗದಲ್ಲಿ ಬೆಳೆದು ಬಂದರು ಎನ್ನುತ್ತಾರೆ.

ಸಾಕಷ್ಟು ಜನ ನೆಪೊಟಿಸಂ ಎನ್ನುವುದನ್ನು ಒಪ್ಪಲು ಸಿದ್ಧರಿಲ್ಲ. ಏನೇ ಸಿನಿಮಾ ಹಿನ್ನಲೆ ಇದ್ದರೂ ತಮ್ಮ ಪರಿಶ್ರಮದಿಂದ ಮಾತ್ರ ಚಿತ್ರರಂಗದಲ್ಲಿ ಉಳಿಯಲು ಸಾಧ್ಯ ಎನ್ನುತ್ತಾರೆ. ಒಂದು ವೇಳೆ ಅದೇ ನಿಜವಾಗಿದ್ದರೆ ಇಂಡಸ್ಟ್ರಿಯಲ್ಲಿ ಸ್ಟಾರ್ಸ್ ಕಿಡ್ಸ್ ಮಾತ್ರ ಸ್ಟಾರ್‌ಗಳಾಗು ಮೆರೆಯುತ್ತಿದ್ದರು ಇನ್ನುತ್ತಾರೆ. ನಟಿ ರಕ್ಷಿತಾ ಪ್ರೇಮ್ ಕೂಡ ಇದೇ ವಾದ ಮುಂದಿಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.