ಸಾಮಾನ್ಯ ಜನರ ನಡುವೆ ಮತ ಹಾಕಿದ ಪ್ರಧಾನ ಮಂತ್ರಿ; ಮತಗಟ್ಟೆ ಅಧಿಕಾರಿಗಳು ಶಾ ಕ್

 | 
Gui

ದೇಶದ ಸಾರ್ವತ್ರಿಕ ಚುನಾವಣೆ ಮೂರನೇ ಹಂತದ ಮತದಾನ ನಡೆದಿದೆ. ತವರು ಗುಜರಾತ್‌ನಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ನಿಶಾನ್‌ ಹಿರಿಯ ಪ್ರಾಥಮಿಕ ಶಾಲೆಯಲ್ಲಿದ್ದ ಮತಗಟ್ಟೆಗೆ ತೆರಳಿ ಪ್ರಧಾನಿ ಮೋದಿ ಅವರು ಮತ ಚಲಾಯಿಸಿದ್ದಾರೆ.

ಮಂಗಳವಾರ ಬೆಳಗ್ಗೆ ರಾಜಭವನದಿಂದ ಹೊರಟು ಪ್ರಧಾನಿ ಚಲಾಯಿಸಿದರು. ನಂತರ ಮತದಾನ ಮಾಡಿದ ಶಾಹಿ ತೋರಿಸಿ ಮತದಾನ ಮಾಡುವಂತೆ ಪ್ರೇರೇಪಿಸಿದರು. ಮತದಾನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಧಾನಿ, ಇಂದು ಮೂರನೇ ಹಂತದ ಮತದಾನ ನಡೆಯುತ್ತಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಬೇಕು. ಉತ್ಸಾಹದಲ್ಲಿ ಬಂದು ಮತದಾನ ಮಾಡಬೇಕು. 

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚು ಉತ್ಸಾಹ ಇದೆ. ಎಲ್ಲ ರೀತಿಅ ಯ ವ್ಯವಸ್ಥೆಯನ್ನು ಆಯೋಗ ಮಾಡಿದೆ. ಆಯೋಗ ಪ್ರಶಂಸೆಗೆ ಅರ್ಹ. ಗುಜರಾತ್ ಎಲ್ಲಿಲ್ಲಿ ಮತದಾನ ಇದೆ, ಜನರು ಹೆಚ್ಚು ಮತದಾನ ಮಾಡಿ. ಚುನಾವಣೆಯನ್ನು ಉತ್ಸವ ರೀತಿಯಲ್ಲಿ ಆಚರಿಸಿ ಎಂದು ಜನತೆಗೆ ಕರೆ ನೀಡಿದ್ದಾರೆ.

ಮತದಾನ ಮಾಡಿದ ಬಳಿಕ 1 ಕಿಮೀ ವರೆಗೆ ಪ್ರಧಾನಿ ನಡೆದರು. ಮತದಾನ ಕೇಂದ್ರದತ್ತ ನೆರದಿದ್ದ ಜನರತ್ತ ಕೈ ಬೀಸಿದರು. ಕೆಲವು ಜನರ ಭೇಟಿ ಮಾಡಿ ಅವರು ತಂದಿದ್ದ ಉಡುಗೊರೆಗಳಿಗೆ ಸಹಿ ಹಾಕಿದರು.ಚುನಾವಣೆಯ ಇಂದಿನ ಹಂತದಲ್ಲಿ ಮತದಾನ ಮಾಡುವ ಎಲ್ಲರೂ ದಾಖಲೆ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕೆಂದು ಮನವಿ ಮಾಡುತ್ತೇನೆ. 

ಮತದಾರರ ಸಕ್ರಿಯ ಭಾಗವಹಿಸುವಿಕೆಯು ಖಂಡಿತವಾಗಿ ಚುನಾವಣೆಯನ್ನು ಮತ್ತಷ್ಟು ರೋಮಾಂಚಕಗೊಳಿಸುತ್ತದೆ ಎಂದು ಎಕ್ಸ್‌ನಲ್ಲಿ ಪ್ರಧಾನಿ ಮೋದಿ ಪೋಸ್ಟ್‌ ಹಾಕಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.