ಪ್ರಕಾಶ್ ರೈ ಜೊತೆ ಆ ಕೆಲಸ ಮಾಡಲು ತುಂಬಾ ಸುಲಭವಾಯಿತು ಎಂದ ಪ್ರಿಯಾಮಣಿ
Aug 31, 2024, 17:04 IST
|
ಪ್ರಕಾಶ್ ರಾಜ್ ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು ಮತ್ತು ಅವರು ಪ್ರತಿ ಚಿತ್ರದಲ್ಲೂ ತಮ್ಮ ಬಹುಮುಖತೆಯನ್ನು ಸಾಬೀತುಪಡಿಸಿದ್ದಾರೆ. ಆದರೆ ವರ್ಷಗಳಲ್ಲಿ ಅವರು ವಿವಾದಾತ್ಮಕ ದಕ್ಷಿಣ ಕಲಾವಿದರಲ್ಲಿ ಒಬ್ಬರೆಂದೇ ಕುಖ್ಯಾತಿಯನ್ನೂ ಗಳಿಸಿದ್ದಾರೆ. ಸಾಮಾನ್ಯವಾಗಿ ದಕ್ಷಿಣ ಭಾರತದ ಕಲಾವಿದರು ಯಾವುದೇ ವಿವಾದಕ್ಕೆ ಒಳಗಾಗದೇ ಸಾಮಾಜಿಕ ಜಾಲತಾಣದಿಂದ ದೂರವೇ ಉಳಿಯುತ್ತಾರೆ.
ಆದರೆ ನಟ ಪ್ರಕಾಶ್ ರಾಜ್ ಈ ಎಲ್ಲಾ ನಟರಿಗಿಂತಲೂ ಭಿನ್ನ ವ್ಯಕ್ತಿತ್ವ ಉಳ್ಳವರು. ಅವರು ಪ್ರಸ್ತುತ ಸನ್ನಿವೇಶದ ಕುರಿತು ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಸದಾ ಪ್ರತ್ಯಕ್ಷ ಮತ್ತು ಪರೋಕ್ಷ ಟೀಕೆಗಳನ್ನು ಮಾಡುತ್ತಲೇ ಇರುತ್ತಾರೆ. ಸ್ವಲ್ಪ ಜನಪ್ರಿಯತೆ ಕುಗ್ಗಿತು ಎಂದಾಕ್ಷಣ, ಯಾವುದೋ ಕೆಟ್ಟ ಪೋಸ್ಟ್ ಹಾಕಿ, ಟ್ರೋಲ್ಗೆ ಒಳಗಾದರೂ ಸರಿ, ಒಟ್ಟಿನಲ್ಲಿ ಸುದ್ದಿಯಲ್ಲಿ ಇರುವುದು ಇವರಿಗೆ ಇಷ್ಟ ಎಂದು ಹಲವರು ನಟನ ಕಾಲೆಳೆಯುವುದೂ ಇದೆ.
ಇಂಥ ಪೋಸ್ಟ್ಗಳಿಗಾಗಿ ಒಂದಷ್ಟು ಮಂದಿಯಿಂದ ಹೊಗಳಿಸಿಕೊಳ್ಳುತ್ತಾರೆ. ಆದರೆ ಇದೇ ವೇಳೆ, ಇದೇ ಕಾರಣಕ್ಕೆ ಇವರಷ್ಟು ಕೆಟ್ಟ ಕಮೆಂಟ್ಗಳನ್ನು ಹಾಗೂ ಟೀಕೆಗಳನ್ನು ಎದುರಿಸುವ ದಕ್ಷಿಣದ ನಟರೂ ಬೇರಾರೂ ಇಲ್ಲ ಎಂದೇ ಹೇಳಬಹುದು. ಕೆಲವು ವೇಳೆ ಕಾನೂನು ಕುಣಿಕೆಯೂ ಇವರ ಮೇಲೆ ಸುತ್ತುತ್ತಿದ್ದುದು ಉಂಟು.
ಇಂತಿಪ್ಪ ಪ್ರಕಾಶ್ ರಾಜ್ ಅವರ ಕೆಲಸದ ವಿಷಯಕ್ಕೆ ಬರುವುದಾದರೆ ಇವರು ಬಹುಭಾಷೆಗಳನ್ನು ಬಲ್ಲರು. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲಗು ಚಿತ್ರರಂಗಗಳಲ್ಲಿಯೂ ಸಕ್ರಿಯರಾಗಿದ್ದಾರೆ. ಇವರ ಭಾಷಾ ಪ್ರೌಢಿಮೆಯನ್ನು ಹಾಡಿ ಹೊಗಳುತ್ತಲೇ ನಟಿ ಪ್ರಿಯಾಮಣಿ ಚಿತ್ರ ತಾರೆಯರು ಪ್ರಕಾಶ್ ರಾಜ್ ಜೊತೆ ಕೆಲಸ ಮಾಡುವಾಗ ಹೇಗೆ ಪೇಚಿಗೆ ಸಿಲುಕುತ್ತಾರೆ ಎನ್ನುವ ಕುರಿತು ತಮಾಷೆಯ ಮಾತನಾಡಿದ್ದಾರೆ.
ಪ್ರಕಾಶ್ ರಾಜ್ ಸರ್ ಜೊತೆ ಕೆಲಸ ಮಾಡುವ ಅನುಭವವೇ ಕುತೂಹಲವಾದದ್ದು ಎಂದಿರುವ ಪ್ರಿಯಾಮಣಿ ಅವರು, ಅವರಿಗೆ ಬಹಳ ಭಾಷೆ ಗೊತ್ತಿದೆ. ಅವರಿಗೆ ತಮಿಳು, ತೆಲಗು, ಕನ್ನಡ, ಹಿಂದಿ ಎಲ್ಲವೂ ಗೊತ್ತು. ಮಲಯಾಳಂನಲ್ಲಿ ಮಾತ್ರ ಯಾಕೋ ಕೆಲಸ ಮಾಡಲಿಲ್ಲ. ಅದೇ ರೀತಿ ಅವರಿಗೆ ಎಲ್ಲಾ ಭಾಷೆಯ ಸಹಾಯಕರು ಇದ್ದು, ಇವರಿಂದಾಗಿಯೇ ನಾವು ಪೇಚಿಗೆ ಸಿಲುಕಿರುವುದು ಇದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.