ಒಂದು ಕಾಲದಲ್ಲಿ ಮಹೇಶ್ ಬಾಬುಗೆ 30 ಕೋಟಿ ಡಿಮಾಂಡ್ ಮಾಡಿದ್ದ ಪ್ರಿಯಾಂಕಾ ಚೋಪ್ರಾ
Mar 22, 2025, 18:39 IST
|

ಬಾಲಿವುಡ್ ಮತ್ತು ಹಾಲಿವುಡ್ನಲ್ಲಿ ಗುರುತಿಸಿಕೊಂಡಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರಿಗೆ ತುಂಬ ಬೇಡಿಕೆ ಇದೆ. ರಾಜಮೌಳಿ ನಿರ್ದೇಶನದ ಹೊಸ ಸಿನಿಮಾ ಅವರೇ ನಾಯಕಿ ಎಂದು ಹೇಳಲಾಗುತ್ತಿದೆ. ಈ ಸಿನಿಮಾಗಾಗಿ ಅವರು ದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ. ಮಹೇಶ್ ಬಾಬುಗೆ ಜೋಡಿಯಾಗಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಾರೆ ಎನ್ನಲಾಗಿದೆ.
ಎಸ್.ಎಸ್. ರಾಜಮೌಳಿ ಅವರು ಆರ್ಆರ್ಆರ್ ಸಿನಿಮಾದಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡರು. ಈಗ ಅವರ ಮುಂದಿನ ಸಿನಿಮಾ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ಜೊತೆ ರಾಜಮೌಳಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಪಾತ್ರವರ್ಗ ಮತ್ತು ತಾಂತ್ರಿಕ ಬಳಗದ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ. ವರದಿಗಳ ಪ್ರಕಾರ, ಪ್ರಿಯಾಂಕಾ ಚೋಪ್ರಾ ಅವರು ಈ ಸಿನಿಮಾಗೆ ನಾಯಕಿಯಾಗಲಿದ್ದಾರೆ. ತಾತ್ಕಾಲಿಕವಾಗಿ ಈ ಚಿತ್ರವನ್ನು ಎಸ್ಎಸ್ಎಂಬಿ 29 ಎಂದು ಕರೆಯಲಾಗುತ್ತಿದೆ. ಈ ಸಿನಿಮಾಗೆ ಪ್ರಿಯಾಂಕಾ ಚೋಪ್ರಾ ಪಡೆಯುತ್ತಿರುವ ಸಂಭಾವನೆ ಮೊತ್ತ ಎಷ್ಟು ಎಂಬುದು ಕೇಳಿ ಎಲ್ಲರೂ ಹೌಹಾರಿದ್ದಾರೆ.
ಹೌದು ಇದೀಗ ದೇ ಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಅವರು ಸ್ಟಾರ್ ನಟಿಯಾದ ಆಲಿಯಾ ಭಟ್, ಕರೀನಾ ಕಪೂರ್, ದೀಪಿಕಾ ಪಡುಕೋಣೆ, ನಯನತಾರಾರನ್ನೇ ಹಿಂದಿಕ್ಕಿದ್ದಾರೆ. ಮಹೇಶ್ ಬಾಬು ನಟನೆಯ ಹೊಸ ಸಿನಿಮಾದಲ್ಲಿ ನಟಿಸಲು ಪ್ರಿಯಾಂಕಾ ಚೋಪ್ರಾ 30 ಕೋಟಿ ರೂ. ಸಂಭಾವನೆಗೆ ಮಾತುಕತೆ. ಈ ಮೂಲಕ ಸ್ಟಾರ್ ನಟಿಯರಿಗೆ ಪ್ರಿಯಾಂಕಾ ಸೆಡ್ಡು ಹೊಡೆದಿದ್ದಾರೆ.ಕಿಯಾರಾ, ಆಲಿಯಾ, ದೀಪಿಕಾ ಪಡುಕೋಣೆ ಸೇರಿದಂತೆ ಕೆಲ ಟಾಪ್ ನಟಿಯರು ಒಂದು ಸಿನಿಮಾಗೆ 5ರಿಂದ 15 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಹೀಗಿರುವಾಗ 30 ಕೋಟಿ ರೂ. ಸಂಭಾವನೆಯನ್ನು ಪ್ರಿಯಾಂಕಾ ಪಡೆಯುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಒಂದು ಸಿನಿಮಾಗೆ 30 ಕೋಟಿ ರೂ. ಸಂಭಾವನೆ ಪಡೆದ ಭಾರತದ ಮೊದಲ ನಟಿ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ದೇಸಿ ಗರ್ಲ್ ಹಾಲಿವುಡ್ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದರು. ಇದೀಗ ಮಹೇಶ್ ಬಾಬು ನಟನೆಯ 29ನೇ ಚಿತ್ರಕ್ಕೆ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದಷ್ಟೇ ಅಲ್ಲ, ಒಡಿಶಾ, ವಿಶಾಖಪಟ್ಟಣಂ, ಹೈದರಾಬಾದ್‌ನಲ್ಲಿ ಶೂಟಿಂಗ್ ನಡೆಯುತ್ತಿದೆ, ನಟಿ ಕೂಡ ಇದ್ದಾರೆ. ಈ ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡುತ್ತಿದ್ದಾರೆ.ಈ ಹಿಂದೆ ರಾಮ್ ಚರಣ್, ದಳಪತಿ ವಿಜಯ್ ಜೊತೆ ತೆಲುಗು ಸಿನಿಮಾಗಳಲ್ಲಿ ಪ್ರಿಯಾಂಕಾ ನಟಿಸಿದ್ದಾರೆ. ಈಗ ಮಹೇಶ್ ಬಾಬುಗೆ ನಾಯಕಿಯಾಗಿ ಬರೋಬ್ಬರಿ 20 ವರ್ಷಗಳ ಬಳಿಕ ಸೌತ್ ಸಿನಿಮಾರಂಗಕ್ಕೆ ನಟಿ ಕಮ್ ಬ್ಯಾಕ್ ಆಗ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.