ಹೊಸ ಜೀವನಕ್ಕೆ ಕಾಲಿಟ್ಟ ಗಿಚ್ಚಿಗಿಲಿಗಿಲಿ ಪ್ರಿಯಾಂಕಾ ಕಾಮತ್, ಮದುವೆ ಮಂಟಪದಲ್ಲೇ ಮುದ್ದಾಟ

 | 
ರಕಕ

ಮಜಾಭಾರತ ಹಾಗೂ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋಗಳ ಮೂಲಕ ಕನ್ನಡಿಗರ ಮನೆ ಮಾತಾಗಿರುವ ನಟಿ ಪ್ರಿಯಾಂಕಾ ಕಾಮತ್. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪಿಕೆ ಎಂದೇ ಖ್ಯಾತಿ ಪಡೆದಿರುವ ಪ್ರಿಯಾಂಕಾ ಕಾಮತ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ತಾವು ಪ್ರೀತಿಸಿದ ಹುಡುಗ ಅಮಿತ್ ನಾಯಕ್ ಅವರನ್ನ ಪ್ರಿಯಾಂಕಾ ಕಾಮತ್ ಮದುವೆಯಾಗಿದ್ದಾರೆ.

ಅದ್ಧೂರಿಯಾಗಿ ಪ್ರಿಯಾಂಕಾ ಕಾಮತ್ - ಅಮಿತ್ ನಾಯಕ್ ವಿವಾಹ ಮಹೋತ್ಸವ ಜರುಗಿದೆ.ಪ್ರಿಯಾಂಕಾ ಕಾಮತ್ - ಅಮಿತ್ ನಾಯಕ್ ವಿವಾಹಕ್ಕೆ ಕುಟುಂಬಸ್ಥರು, ಆಪ್ತರು ಸಾಕ್ಷಿಯಾಗಿದ್ದಾರೆ. ಅಂದ್ಹಾಗೆ, ಇದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಈ ವರ್ಷದಾರಂಭದಲ್ಲಿ ಅಂದ್ರೆ ಜನವರಿ ತಿಂಗಳಿನಲ್ಲಿ ಅಮಿತ್ ನಾಯಕ್ - ಪ್ರಿಯಾಂಕಾ ಕಾಮತ್ ಎಂಗೇಜ್‌ಮೆಂಟ್‌ ಪುತ್ತೂರಿನಲ್ಲಿ ನಡೆದಿತ್ತು. 

ಇತ್ತೀಚೆಗಷ್ಟೇ ಅಮಿತ್ ನಾಯಕ್ ಮತ್ತು ಪ್ರಿಯಾಂಕಾ ಕಾಮತ್ ಬಾಲಿ, ಮಲೇಷ್ಯಾ ಪ್ರವಾಸ ಕೈಗೊಂಡಿದ್ದರು. ಇದೀಗ ಮದುವೆ ಜರುಗಿದೆ. ಈಗಾಗಲೇ ಯೂಟ್ಯೂಬ್‌ನಲ್ಲಿ ಪ್ರಿಯಾಂಕ ಕಾಮತ್‌ ವೆಡ್ಸ್‌ ಅಮಿತ್‌ ನಾಯಕ್‌ ಲೈವ್‌ ಪ್ರಸಾರವಾಗುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ವೆಡ್ಡಿಂಗ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರ ವಿವಾಹ ಸಮಾರಂಭಕ್ಕೆ ಎಲ್ಲರೂ ಅಭಿನಂದನೆಗಳನ್ನು ಹೇಳುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಪುತ್ತೂರಿನಲ್ಲಿ ಪ್ರಿಯಾಂಕ ಕಾಮತ್‌ ಮತ್ತು ಅಮಿತ್‌ ನಾಯಕ್‌ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 

ಆದರೆ, ಆರೋಗ್ಯ ತೊಂದರೆಯಿಂದಾಗಿ ಇವರು ಡಿಸೆಂಬರ್‌ನಲ್ಲಿ ವಿವಾಹವಾಗಲು ನಿರ್ಧರಿಸಿದ್ದರು. ನನ್ನ ಬದುಕಿನಲ್ಲಿ ಎಲ್ಲವೂ ಚೆನ್ನಾಗಿತ್ತು. ಇಂತಹ ಸಂದರ್ಭದಲ್ಲಿ ನಡೆಯಲು, ಕುಳಿತುಕೊಳ್ಳಲು ತೊಂದರೆಯಾಗುವಂತಹ ಸಮಸ್ಯೆ ಆರಂಭವಾಯಿತು. ಡಾಕ್ಟರ್‌ ಈ ಸಂದರ್ಭದಲ್ಲಿ ಆಪರೇಷನ್‌ ಮಾಡಬೇಕೆಂದು ಹೇಳಿದ್ದರು. ಇದಕ್ಕೂ ಮೊದಲು ನನಗೆ ಎಂಗೇಜ್‌ಮೆಂಟ್‌ ಆಗಿತ್ತು ಎಂದು ಅವರು ಈ ಹಿಂದೆ ವಿಡಿಯೋದಲ್ಲಿ ಹೇಳಿಕೊಂಡಿದ್ದರು.

ಈ ಸಂದರ್ಭದಲ್ಲಿ ನನಗೆ ಅಮಿತ್‌ ನೆರವಿಗೆ ನಿಂತರು. ನನ್ನ ಎಲ್ಲಾ ಸೇವೆಗಳನ್ನು ಮಾಡಿದರು. ಎಂಟು ತಿಂಗಳ ಕಾಲ ನನ್ನನ್ನು ಪ್ರೀತಿಯಿಂದ ನೋಡಿಕೊಂಡ. ನನಗೆ ಆತ ಐ ಲವ್‌ ಯು ಎಂದು ಒಮ್ಮೆಯೂ ಹೇಳಲಿಲ್ಲ. ಆದರೆ, ಆತ ತನ್ನ ಕೆಲಸದ ಮೂಲಕ ಪ್ರೀತಿ ತೋರಿದ ಎಂದು ಪ್ರಿಯಾಂಕ ಕಾಮತ್‌ ಈ ಹಿಂದೆ ಹೇಳಿಕೊಂಡಿದ್ದರು. ಇದೀಗ ಅವರ ಕೈಹಿಡಿದು ಮದುವೆಯೆಂಬ ಸಿಹಿ ಬಂಧನಕ್ಕೆ ಒಳಗಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.