ಪಕ್ಕಾ desi ಹುಡುಗ; ಇವ್ನು ಜೊತೆ ಮದುವೆ ಆಗಬೇಕು ಎಂದು ಅಂದುಕೊಂಡಿದ್ದೆ ಎಂದ ದಿಪೀಕಾ ದಾಸ್

 | 
Ftt
ಇತ್ತಿಚಿಗೆ ಸದ್ದಿಲ್ಲದೆ ಗೋವಾದಲ್ಲಿ ಕುಟುಂಬದವರ ಸಮ್ಮುಖದಲ್ಲಿ ರಿಯಲ್ ಎಸ್ಟೇಟ್​ ಮತ್ತು ಐಟಿ ಉದ್ಯಮದಲ್ಲಿ ತೊಡಗಿಕೊಂಡಿರುವ ದೀಪಕ್ ಜತೆ ದೀಪಿಕಾ ದಾಸ್ ಮದುವೆಯಾಗಿದ್ದಾರೆ. ಸ್ನೇಹಿತರು ಮತ್ತು ಆಪ್ತರಿಗಾಗಿ ಬೆಂಗಳೂರಲ್ಲಿ ರಿಸೆಪ್ಷನ್​ ಮಾಡಲಾಗಿದೆ. ಈ ಸಂದರ್ಭದಲ್ಲಿ ದೀಪಕ್​ ಮತ್ತು ದೀಪಿಕಾ ದಾಸ್​ ಅವರು ಮಾಧ್ಯಮಗಳ ಜತೆ ಮಾತನಾಡಿದ್ದಾರೆ.
ಒಂದು ವರ್ಷದಿಂದ ದೀಪಕ್‌ ಹಾಗೂ ದೀಪಿಕಾ ದಾಸ್​ ಡೇಟಿಂಗ್​ ಮಾಡುತ್ತಿದ್ದರು. ಇದೀಗ ಮಾಧ್ಯಮದ ಜತೆ ದೀಪಕ್‌ ಮಾತನಾಡಿ ನಾಲ್ಕು ವರ್ಷಗಳ ಹಿಂದೆ ಭೇಟಿ ಆದೆವು. ಕಳೆದೊಂದು ವರ್ಷದಿಂದ ಕಮಿಟೆಡ್​ ರಿಲೇಷನ್​ಶಿಪ್​ನಲ್ಲಿ ಇದ್ದೆವು. ಮನೆಯವರಿಗೆಲ್ಲ ಗೊತ್ತಿತ್ತು. ಇದರಲ್ಲಿ ಏನೂ ಸಸ್ಪೆನ್ಸ್​ ಇಲ್ಲ. ನಾನು ರಿಯಲ್​ ಎಸ್ಟೇಟ್​ ಡೆವೆಲಪರ್​ ಇಲ್ಲಿಯೇ ಇರುವುದು. ದುಬೈನಲ್ಲಿ ಅಲ್ಲ ಎಂದರು.
ದೀಪಿಕಾ ಮಾತನಾಡಿ ದೀಪಕ್‌ ಅವರು ಪಕ್ಕಾ ಗೌಡ, ದೇಸಿ ಹುಡುಗ. ನಾನೇ ಸೈಲೆಂಟ್‌ ಅಂದರೆ ಅವರು ಇನ್ನೂ ಸೈಲೆಂಟ್‌. ದೀಪಕ್​ ಧ್ವನಿ ಜೋರಾಗಿ ಬರಲ್ಲ. ಅವರನ್ನು ಮಾತಾಡಿಸಬೇಕು ಎಂದರೆ ನಾನೇ ಹತ್ತು ಸಲ ಕೇಳಬೇಕು. ನನ್ನ ಬೆಳವಣಿಗೆಯಲ್ಲಿ ಅವರ ಬೆಂಬಲ ಇದ್ದೇ ಇರುತ್ತದೆ ಎಂಬ ನಂಬಿಕೆ ನನಗೆ ಇದೆ. ಅದು ಮಾಡಬೇಡ ಇದು ಮಾಡಬೇಡ ಎಂದು ದೀಪಕ್‌ ಡೇಟ್‌ ಮಾಡುವಾಗಲೂ ಹೇಳಲಿಲ್ಲ.
ಪರ್ಸನಲ್​ ಬೇರೆ, ಪ್ರೊಫೆಷನಲ್​ ಬೇರೆ ಅಂತ ನಾವು ಇಟ್ಟುಕೊಂಡಿದ್ದೇವೆ. ಪ್ರೊಡಕ್ಷನ್​ ಹೌಸ್ ಮಾಡೋಣ ಎಂಬ ಆಲೋಚನೆ ಇದೆ. ಏನಾಗತ್ತೋ ನೋಡೋಣ. ನಿಮ್ಮೆಲ್ಲರ ಬೆಂಬಲ ಇರಲಿ ಎಂದು ದೀಪಿಕಾ ದಾಸ್​ ಹೇಳಿದ್ದಾರೆ.ಶೈನ್‌ ಶೆಟ್ಟಿ ಮತ್ತು ದೀಪಿಕಾ ದಾಸ್‌ ಆತ್ಮೀಯರಾಗಿದ್ದರು. ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಗುಸುಗುಸು ಇತ್ತು. ಆದರೆ, ದೀಪಿಕಾ ಸದ್ದಿಲ್ಲದೇ ಮದುವೆಯಾಗಿದ್ದಾರೆ. ಕೃಷ್ಣ ರುಕ್ಮಿಣಿ, ನಾಗಿಣಿ ಸೀರಿಯಲ್‌ನಿಂದ ಖ್ಯಾತಿ ಪಡೆದಿದ್ದರು ದೀಪಿಕಾ ದಾಸ್. 
ಹೊಸ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ನಾಯಕಿಯಾಗಿ ಪಾಯಲ್ ಎಂಬ ಪಾತ್ರದ ಮೂಲಕ ಬರಲು ಸಜ್ಜಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.