ಕನ್ನಡಿಗರಿಗೆ ಸಿಹಿಸುದ್ದಿ ಪುನೀತ್ ರಾಜ್‍ಕುಮಾರ್ ದೊಡ್ಡ ಮಗಳು, ಊರೆಲ್ಲಾ ಹಬ್ಬದೂಟ
May 1, 2025, 10:57 IST
|

ಪವರ್‌ಸ್ಟಾರ್, ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಇಲ್ಲವಾಗಿ ನಾಲ್ಕು ವರ್ಷ ಮುಗಿದೇ ಹೋಯ್ತು. ಇಂದಿಗೂ ಅವರ ಅಭಿಮಾನಿಗಳು ಪುನೀತ್ ಅವರ ಸ್ಮರಣೆಯಲ್ಲಿದ್ದಾರೆ. ಅಪ್ಪು ನಟಿಸಿದ ಸಿನಿಮಾ, ಅವರ ಹಾಡುಗಳು, ಸಿನಿಮಾ ಡೈಲಾಗ್‌ಗಳ ಮೂಲಕ ಅವರನ್ನು ನೆನಪಿಸಿಕೊಳ್ಳುತ್ತಲೇ ಇದ್ದಾರೆ. ಮರು ಬಿಡುಗಡೆ ಆಗುತ್ತಿರುವ ಅವರ ಸಿನಿಮಾಗಳ ಮೇಲೆಯೂ ಅಷ್ಟೇ ಪ್ರೀತಿ ತೋರಿಸುತ್ತಿದ್ದಾರೆ. ಬರೀ ಪುನೀತ್ ರಾಜ್‌ಕುಮಾರ್ ಮಾತ್ರವಲ್ಲ, ಅಪ್ಪು ಇಲ್ಲದ ಮೇಲೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತವರ ಇಬ್ಬರು ಹೆಣ್ಣುಮಕ್ಕಳಲ್ಲಿಯೇ ಪುನೀತ್ ಅವರನ್ನು ಕಾಣುತ್ತಿದ್ದಾರೆ ಫ್ಯಾನ್ಸ್.
ಪುನೀತ್ ರಾಜ್‌ಕುಮಾರ್‌ಗೆ ಅವರಿಗೆ ಧೃತಿ ಮತ್ತು ವಂದಿತಾ ಎಂಬಿಬ್ಬರು ಮಕ್ಕಳು. ಅಪ್ಪ ದೊಡ್ಡ ಸ್ಟಾರ್ ಆಗಿದ್ದರೂ, ಸಾರ್ವಜನಿಕವಾಗಿ ಇವರಿಬ್ಬರು ಎಲ್ಲೆಡೆ ಕಾಣಿಸಿಕೊಂಡ ಉದಾಹರಣೆ ಇಲ್ಲ. ಅಪ್ಪನ ಅಗಲಿಕೆ ಬಳಿಕವಂತೂ ಎಲ್ಲದರಿಂದಲೂ ಕೊಂಚ ಅಂತರ ಕಾಯ್ದುಕೊಂಡಿದ್ದರು. ಸೋಷಿಯಲ್ ಮೀಡಿಯಾವನ್ನು ಇಬ್ಬರೂ ಬಳಕೆ ಮಾಡುತ್ತಿದ್ದಾರಾದರೂ, ಹೆಚ್ಚು ಸಕ್ರಿಯರಾಗಿರಲಿಲ್ಲ. ಇಬ್ಬರಲ್ಲಿ ಹಿರಿ ಮಗಳು ಧೃತಿ ಕೊಂಚ ಓಪನ್ ಗರ್ಲ್. ಸೋಷಿಯಲ್ ಮೀಡಿಯಾದಲ್ಲಿ ತಮಗಿಷ್ಟವಾದ ಫೋಟೋಗಳನ್ನು ಶೇರ್ ಮಾಡುತ್ತಲಿರುತ್ತಾರೆ. ಇತ್ತೀಚೆಗಷ್ಟೇ ತುಂಡು ಉಡುಗೆಯಲ್ಲಿ ಸೆಲ್ಫಿ ಫೋಟೋಗಳನ್ನು ಶೇರ್ ಮಾಡಿದ್ದಕ್ಕೆ ಟೀಕೆ ಎದುರಿಸಿದ್ದ ಧೃತಿಗೆ ಇದೀಗ ಅದೇ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಧೃತಿ ರಾಜ್‌ಕುಮಾರ್ ಸದ್ಯ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಓದಿನ ಜತೆಜತೆಗೆ ವಿದೇಶಿ ಸುತ್ತಾಟದ ಕ್ಷಣವನ್ನೂ ಅನುಭವಿಸುತ್ತಿದ್ದಾರೆ. ಮ್ಯಾಕ್ಸಿಕೊದಲ್ಲಿನ ಬಗೆಬಗೆ ತಾಣಗಳಿಗೆ ಭೇಟಿ ನೀಡಿ, ರೆಸ್ಟೋರಂಟ್‌ಗಳಿಗೆ ತೆರಳಿ ಅಲ್ಲಿನ ತರಹೇವಾರಿ ಖಾದ್ಯಗಳ ಜತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೀಗೆ ಫೋಟೋಗಳನ್ನು ಶೇರ್ ಮಾಡುತ್ತಿದ್ದಂತೆ, ಅಪ್ಪು ಫ್ಯಾನ್ಸ್ ಕಡೆಯಿಂದ ಮೆಚ್ಚುಗೆಯ ಕಾಮೆಂಟ್‌ಗಳು ಹರಿದುಬಂದಿವೆ. ಪುನೀತ್ ಅವರನ್ನೇ ನೋಡಿದಂತಾಯ್ತು ಎಂದು ಕೆಲವರು ಹೇಳಿದರೆ, ನಮ್ಮ ಬಾಸ್ ಮಗಳು, ನಮ್ಮ ದೊರೆ ಮಗಳು ಎಂದೆಲ್ಲ ಕಾಂಪ್ಲಿಮೆಂಟ್ ಕಾಮೆಂಟ್ ಹಾಕುತ್ತಿದ್ದಾರೆ.
ಇನ್ನು ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ಪುತ್ರಿ ಓದುತ್ತಿರುವುದು. ಇದು ನ್ಯೂಯಾರ್ಕ್ ನಗರದ ಗ್ರೀನ್‌ವಿಚ್ ವಿಲೇಜ್ ಬಳಿಯಿದ್ದು ಕಲೆ ಮತ್ತು ವಿನ್ಯಾಸ ಕಲಿಸಿಕೊಡು ಕಾಲೇಜಾಗಿದೆ. ಅಲ್ಲಿಂದ ಬಂದಮೇಲೆ ತೆರೆಯ ಮುಂದೆ ಕಾಣಿಸಿಕೊಳ್ಳದೆ ತೆರೆಯ ಹಿಂದೆ ನಿರ್ಮಾಪಕಿ, ನಿರ್ದೇಶಕಿ ಆಗುವ ಆಸೆಯನ್ನು ಹೊಂದಿದ್ದಾರಂತೆ ಅಪ್ಪು ಮಗಳು. ಒಟ್ಟಿನಲ್ಲಿ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಅವರ ವಿದ್ಯಾಭ್ಯಾಸ ಮುಗಿದು ವಾಪಸ್ಸಾಗಲಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬರ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.