ಬಾಲಿವುಡ್ ನಟಿಯರಂತೆ ಡ್ಯಾನ್ಸ್ ಮಾಡಿದ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸ್ನೇಹ
Oct 8, 2024, 13:11 IST
|

ಪುಟ್ಟಕ್ಕನ ಮಕ್ಕಳು ಧಾರವಾಹಿಯ ಮೂಲಕ ಧಾರಾವಾಹಿ ಪ್ರಿಯರ ಮನಸ್ಸನ್ನು ಗೆದ್ದು, ಕದ್ದು ಬೀಗುತ್ತಿರೋ ನಟಿಯರಲ್ಲಿ ಒಬ್ಬರು ಸಂಜನಾ ಬುರ್ಲಿ. ಸಂಜನಾ ಬುರ್ಲಿ ಎಂದರೆ ಬಹುಶಃ ಯಾರಿಗೂ ಅರ್ಥವಾಗಲಿಕ್ಕಿಲ್ಲ. ಅದೇ ಸ್ನೇಹಾ ಎಂದರೆ ಸಾಕು, ತಮ್ಮ ಪರಿಚಯಸ್ಥರಲ್ಲಿ ಸ್ನೇಹಾ ಎನ್ನುವ ಹೆಸರು ಇದ್ದವರಿದ್ದರೂ ಮೊದಲಿಗೆ ನೆನಪಿಗೆ ಬರುವುದು ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ಸ್ನೇಹಾ ಅಲ್ಲವೆ? ಸದಾ ಟಿಆರ್ಪಿಯಲ್ಲಿ ಮುಂದೆ ಇರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾಳೇ ಹೈಲೈಟ್.
ಎಷ್ಟೋ ಮಂದಿಗೆ ಮಾದರಿ ಹೆಣ್ಣೀಕೆ. ರೌಡಿ ಕಂಠಿಯ ಜೊತೆಗಿನ ಸಂಪ್ರದಾಯಸ್ಥ ಹೆಣ್ಣುಮಗಳು ಸ್ನೇಹಾಳ ಲವ್ ಸ್ಟೋರಿಯೇ ಈ ಧಾರಾವಾಹಿಯ ಬಂಡವಾಳ. ಇದರಲ್ಲಿ ಸ್ನೇಹಾಳ ಅಸಲಿ ಹೆಸರೇ ಸಂಜನಾ ಬುರ್ಲಿ. ಕಂಠಿ ಪಾತ್ರಧಾರಿ ಧನುಷ್ ಎನ್ ಎಸ್. ಧಾರಾವಾಹಿಯ ಈ ಕ್ಯೂಟ್ ಜೋಡಿ ಅದೆಷ್ಟು ಫೇಮಸ್ ಎಂದರೆ, ಇಬ್ಬರೂ ನಿಜ ಜೀವನದಲ್ಲಿಯೂ ಮದ್ವೆಯಾಗಲಿ ಅಂತಿದ್ದಾರೆ ಇವರಿಬ್ಬರ ಫ್ಯಾನ್ಸ್.
ಇನ್ನು ಇದೀಗ ಸೀರಿಯಲ್ನಲ್ಲಿ ಸ್ನೇಹಾ ಜಿಲ್ಲಾಧಿಕಾರಿ ಆಗಿದ್ದಾಳೆ. ಬಡತನದಲ್ಲಿಯೇ ಹುಟ್ಟಿರೋ ಹೆಣ್ಣುಮಗಳು ಕೂಡ ಉನ್ನತ ಸ್ಥಾನಕ್ಕೆ ಏರಬಹುದು ಎನ್ನುವ ಉದ್ದೇಶದೊಂದಿಗಿನ ಸ್ನೇಹಾ ಪಾರ್ಟ್ ಜನರಿಗೆ ಇಷ್ಟವಾಗಿದೆ. ಇಂದು ಎಷ್ಟೋ ಹೆಣ್ಣುಮಕ್ಕಳು ಅದೆಷ್ಟೋ ಕೋಟೆ ಕೊತ್ತಲೆಗಳನ್ನು ದಾಟಿ, ಜೀವನದಲ್ಲಿ ದುಃಖವನ್ನೇ ಉಂಡು ಉನ್ನತ ಸ್ಥಾನಕ್ಕೆ ಏರಿದವರಿದ್ದಾರೆ. ಇಂಥ ಅದೆಷ್ಟೋ ಮಹಿಳೆಯರು ಒಂಟಿಯಾಗಿ ನಿಂತು ತಮ್ಮ ಹೆಣ್ಣುಮಗಳನ್ನು ಇಂಥ ಸ್ಥಾನಕ್ಕೆ ಏರಿಸಿದ್ದಾರೆ. ಅವರೆಲ್ಲರ ದ್ಯೋತಕವಾಗಿ ನಿಲ್ಲುತ್ತಾರೆ ಪುಟ್ಟಕ್ಕ ಮತ್ತು ಸ್ನೇಹಾ. ಸದ್ಯ ಸೀರಿಯಲ್ನಲ್ಲಿ ಸ್ನೇಹಾ ತನ್ನ ನಕಲಿ ಅತ್ತೆಯ ಮೋಸವನ್ನು ಬಯಲಿಗೆ ಎಳೆಯುವ ಕಾಲ ಬಂದಿದೆ. ಕಾನೂನು ಎಂದು ನಿಂತರೆ ಸಂಬಂಧವನ್ನೂ ನೋಡದವಳು ಸ್ನೇಹಾ. ಇಂಥ ಖಡಕ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾಳೆ.
ಅಂದಹಾಗೆ ಇದೀಗ ಸ್ನೇಹಾ ಅಲಿಯಾಸ್ ಸಂಜನಾ ಬುರ್ಲಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಒಂದು ವೈರಲ್ ಆಗುತ್ತಲೇ ನಿಮ್ಮ ವಿರುದ್ಧ ಕೇಸ್ ಹಾಕ್ತೀವಿ ಎಂದು ನೆಟ್ಟಿಗರು ಹೇಳ್ತಿದ್ದಾರೆ. ಅಷ್ಟಕ್ಕೂ ಆಗಿರೋದೇನು? ಸಂಜನ ಅವರು ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಇದೀಗ ಅವರು ರೀಲ್ಸ್ ಮಾಡಿದ್ದಾರೆ. ತಮ್ಮ ಎಂದಿನ ಭರ್ಜರಿ ಸ್ಟೆಪ್ ಜೊತೆ ಕಾಣಿಸಿಕೊಂಡಿದ್ದಾರೆ. ಇವರ ಡಾನ್ಸ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಆದರೆ ಈಕೆ ಜಿಲ್ಲಾಧಿಕಾರಿಯಾಗಿರೋ ಕಾರಣ, ಅಂದರೆ ಪುಟ್ಟಕ್ಕನ ಮಕ್ಕಳು ಸೀರಿಯಲ್ನ ಸ್ನೇಹಾ ಸರ್ಕಾರಿ ಅಧಿಕಾರಿಯಾಗಿ ಇಂಥ ಹುದ್ದೆಯಲ್ಲಿ ಇರುವ ಕಾರಣ, ಈ ರೀತಿ ರೀಲ್ಸ್ ಮಾಡುವುದು ಸರಿಯಲ್ಲ, ನಿಮ್ಮ ಮೇಲೆ ಕೇಸ್ ಹಾಕ್ತೀವಿ ಎಂದು ಫ್ಯಾನ್ಸ್ ತಮಾಷೆ ಮಾಡುತ್ತಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.