ಪುಟ್ಟಕ್ಕನ‌ ಮಕ್ಕಳು ಧಾರಾವಾಹಿ ನಿಲ್ಲಿಸುವಂತೆ ಒತ್ತಾಯ, ಎಡವಟ್ಟು ಮಾಡಿಕೊಂಡ ಉಮಾಶ್ರೀ

 | 
ಕ್
ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕಳಿಗೆ ಗಂಡು ಮಗು ಆಗಿಲ್ಲ ಎಂದು ಗೋಪಾಲಯ್ಯ ಅವಳನ್ನು ಬಿಟ್ಟು ಬೇರೆ ಮದುವೆ ಆದನು. ಈಗ ಎಲ್ಲ ತಪ್ಪುಗಳನ್ನು ಮರೆತು ಮತ್ತೆ ಪುಟ್ಟಕ್ಕನ ಮನೆಯಲ್ಲಿ ಇದ್ದಾನೆ. ಈಗ ಪುಟ್ಟಕ್ಕಳಿಗೆ ಮತ್ತೆ ಮದುವೆ ಆಗುವ ಯೋಗ ಬಂದಿದೆಯಾ ಎಂಬ ಪ್ರಶ್ನೆ ಮೂಡಿದೆ.
ಸಹನಾ, ಸ್ನೇಹ, ಸುಮಾ ಎಂಬ ಮೂವರು ಮಕ್ಕಳಿದ್ದಾರೆ. ಬರೀ ಹೆಣ್ಣು ಮಕ್ಕಳಾದರು, ಗಂಡು ಇಲ್ಲ ಅಂತ ಗೋಪಾಲಯ್ಯ ಪತ್ನಿ ಪುಟ್ಟಕ್ಕಳನ್ನು ಬಿಟ್ಟು ರಾಜೇಶ್ವರಿಯನ್ನು ಮದುವೆಯಾಗಿದ್ದನು. ರಾಜಿಗೆ ಪುರುಸಿ ಎನ್ನುವ ಮಗ ಹುಟ್ಟಿದ್ದಾನೆ. ಸಹನಾ, ಸ್ನೇಹ ಮದುವೆ ಆದಬಳಿಕ ಗೋಪಾಲಯ್ಯನಿಗೆ ತನ್ನ ತಪ್ಪಿನ ಅರಿವಾಯ್ತು. ಹೀಗಾಗಿ ಅವನು ಪುಟ್ಟಕ್ಕ ಮನೆಗೆ ಬಂದಿದ್ದಾನೆ.
ಕಳೆದ ಕೆಲ ಸಮಯದಿಂದ ಪುಟ್ಟಕ್ಕ ಜೊತೆಗೆ ಗೋಪಾಲಯ್ಯ ನಿಂತಿದ್ದಾನೆ. ಸ್ನೇಹಾ, ಸುಮಾ ಮಾತ್ರ ಗೋಪಾಲಯ್ಯನನ್ನು ಅಪ್ಪಾ ಅಂತ ಕರೆದಿಲ್ಲ. ಪುಟ್ಟಕ್ಕನ ಹಿರಿಯ ಮಗಳು ಸಹನಾ ಮಾತ್ರ ತಂದೆಯನ್ನು ಅಪ್ಪಾ ಅಂತ ಕರೆದಿದ್ದಾಳೆ. ಒಟ್ಟಿನಲ್ಲಿ ಗೋಪಾಲಯ್ಯ ಮಾಡಿದ ತಪ್ಪನ್ನು ಎಲ್ಲರೂ ಕ್ಷಮಿಸಿಲ್ಲ. ಗೋಪಾಲಯ್ಯನ ತಪ್ಪನ್ನು ಪುಟ್ಟಕ್ಕ ಕ್ಷಮಿಸದೆ ಇದ್ದರೂ ಕೂಡ ಅವನಿಗೆ ಮನೆಯಲ್ಲಿ ಇರಲು ಅವಕಾಶ ಕೊಟ್ಟಿದ್ದಾಳೆ.
ಈಗ ಕಲ್ಯಾಣೋತ್ಸವ ನಡೆಯುತ್ತದೆ. ಆ ಕಲ್ಯಾಣೋತ್ಸವದಲ್ಲಿ ಪುಟ್ಟಕ್ಕಳಿಗೆ ಮತ್ತೆ ತಾಳಿ ಕಟ್ಟಿ ತಾನು ಮಾಡಿದ ತಪ್ಪನ್ನು ಸರಿ ಮಾಡಬೇಕು ಅಂತ ಗೋಪಾಲಯ್ಯ ಅಂದುಕೊಂಡಿದ್ದಾನೆ, ಇದಕ್ಕೆ ಸುಮಾ ಒಪ್ಪಿಗೆ ಕೊಡ್ತಿಲ್ಲ. ಇನ್ನು ಪುಟ್ಟಕ್ಕ ಕೂಡ ರೆಡಿ ಇಲ್ಲ. ಈ ರೀತಿ ಮಾಡೋದು ಎಲ್ಲರಿಗೂ ಇಷ್ಟ ಇಲ್ಲ ಅಂತ ಗೋಪಾಲಯ್ಯನಿಗೂ ಗೊತ್ತಿದೆ. ಆದರೂ ಅವನು ತನ್ನ ಆಸೆಯನ್ನು ಎಲ್ರ ಮುಂದೆ ಹೇಳಿಕೊಂಡಿದ್ದಾನೆ. ಒಟ್ಟಿನಲ್ಲಿ ಪುಟ್ಟಕ್ಕ-ಗೋಪಾಲಯ್ಯ ಮದುವೆ ಆಗಲಿದೆ. 
ಇದಂತೂ ಪಕ್ಕಾ. ಗೋಪಾಲಯ್ಯ-ಪುಟ್ಟಕ್ಕ ಮರು ಮದುವೆಗೆ ರಾಜೇಶ್ವರಿ ಅಡ್ಡಗಾಲು ಹಾಕ್ತಾಳಾ? ತೊಂದರೆ ಕೊಡ್ತಾಳಾ ಅಂತ ಕಾದು ನೋಡಬೇಕಿದೆ. ಯಾವಾಗಲೂ ವಿಷ ಕಾರುವ ಪುಟ್ಟಕ್ಕ ಈ ಬಾರಿ ಕೂಡ ಏನಾದರೊಂದು ಸಮಸ್ಯೆ ಕೊಟ್ಟೇ ಕೊಡುತ್ತಾಳೆ. ಇದಂತೂ ಪಕ್ಕಾ. ಇನ್ನು ಸ್ನೇಹಾ ಪಾತ್ರಧಾರಿ ಬದಲಾದರು. ಸಮಯ ಬದಲಾಯಿತು. ಈಗ ಈ ಹೊಸ ಟ್ವಿಸ್ಟ್ ಇದರಿಂದ ಬೇಸತ್ತ ಜನ ಸಾಕು ಧಾರವಾಹಿ ಮುಗಿಸಿ ಅಂತಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.