ರಚಿತಾಂದು ಸಣ್ಣ ಅದು ಕೂಡ ತೋರಿಸಿಲ್ಲ ನಮ್ಮ ಸಿನಿಮಾದಲ್ಲಿ, ಅವಳ ಆಟ ಎಲ್ಲ ನನಿಗೆ ಗೊತ್ತಿದೆ ಸರ್; ಡೈರೆಕ್ಟರ್ ನಾಗಶೇಖರ್
Jun 20, 2025, 20:27 IST
|

ನಟಿ ರಚಿತಾ ರಾಮ್ ಅವರು ಸಂಜು ವೆಡ್ಸ್ ಗೀತಾ 2ಸಿನಿಮಾದ ಪ್ರಚಾರಕ್ಕೆ ಬಂದಿಲ್ಲ ಎಂಬುದು ವಿವಾದಕ್ಕೆ ಕಾರಣ ಆಗಿದೆ. ಆದ್ದರಿಂದ ರಚಿತಾ ರಾಮ್ ವಿರುದ್ಧ ನಿರ್ದೇಶಕ ನಾಗಶೇಖರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಸುದೀಪ್, ದರ್ಶನ್, ನಾಗಾರ್ಜುನ, ಸಲ್ಮಾನ್ ಖಾನ್, ಶಾರುಖ್ ಖಾನ್ ಅವರಂತಹ ದೊಡ್ಡ ಕಲಾವಿದರು ಪ್ರಚಾರ ಮಾಡುತ್ತಾರೆ.
ರಶ್ಮಿಕಾ ಮಂದಣ್ಣ ಕಾಲು ಪೆಟ್ಟಾಗಿದ್ದರೂ ಕೂಡ ಬಂದು ಪ್ರಮೋಷನ್ ಮಾಡುತ್ತಾರೆ. ಈ ಕಾಲಘಟ್ಟದಲ್ಲಿ ರಚಿತಾ ರಾಮ್ 3 ದಿನ ಬಿಡುವು ಮಾಡಿಕೊಂಡು ನಮ್ಮ ಸಿನಿಮಾದ ಪ್ರಚಾರಕ್ಕೆ ಬರಬಹುದಿತ್ತು ಎಂದು ನಾಗಶೇಖರ್ ಹೇಳಿದ್ದಾರೆ.
ಈ ಹಿಂದೆ ನಮ್ಮ ಸಿನಿಮಾ ಮೇಲೆ ಸ್ಟೇ ಬಂದಿದ್ದರಿಂದ ಜನವರಿ 10ಕ್ಕೆ ರಿಲೀಸ್ ಮಾಡಲು ಆಗಲಿಲ್ಲ. ಜನವರಿ 17ಕ್ಕೆ ಒಂದು ಟ್ರಯಲ್ ಮಾಡಿದ್ದೆವುಮಾಡಿದ್ದೆವು. ಈಗ ಜೂನ್ 6ಕ್ಕೆ ನಾವು ರೀ ರಿಲೀಸ್ ಮಾಡಿರೋದಲ್ಲ. ಇದೇ ನಿಜವಾದ ರಿಲೀಸ್ ಅನ್ನೋದು ರಚಿತಾ ರಾಮ್ ಅವರಿಗೂ ಕೂಡ ಗೊತ್ತು. ರಚಿತಾ ರಾಮ್ ಅವರ ಮ್ಯಾನೇಜರ್ ಜೊತೆಗೆ ನಾನು ಮಾಡಿರುವ ಸಂಭಾಷಣೆಗಳಿವೆ.
ನಾನು ಇಲ್ಲಿಯವರೆಗೂ 11 ಸಿನಿಮಾಗಳನ್ನು ಮಾಡಿದ್ದೇನೆ. ಇಲ್ಲಿಯವರೆಗೂ ಯಾವ ಸಿನಿಮಾದಲ್ಲಿಯೂ ಯಾರ ವಿರುದ್ಧವೂ ದೂರು ಕೊಟ್ಟವನಲ್ಲ. ಯಾರನ್ನು ಅಗೌರವವಾಗಿ ನಡೆಸಿಕೊಂಡವನಲ್ಲ. ನಾನು ಒಬ್ಬ ಕಲಾವಿದ ಹಾಗಾಗಿ ಕಲಾವಿದರನ್ನು ಹೇಗೆ ನಡೆಸಿಕೊಳ್ಳಬೇಕು ಅನ್ನೋದು ನನಗೆ ಗೊತ್ತು.ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಎರಡು ವರ್ಷದ ಮತ್ತು ಈ ವರ್ಷದ ಜೂನ್ ತಿಂಗಳ ಹಿಂದಿನ ವಿಡಿಯೋಗಳು.
ಜೂನ್ 6 ರಂದು ಸಿನಿಮಾ ರಿಲೀಸ್ ಆದ ನಂತರ ನಾವು ಎಲ್ಲಾ ಕಡೆ ಪ್ರಮೋಷನ್ಸ್ ಮಾಡಿದ್ದೆವು. ಅಲ್ಲಿಯೂ ರಚಿತಾ ರಾಮ್ ಬರಲಿಲ್ಲ. ಪ್ರೀ ರಿಲೀಸ್ ಈವೆಂಟ್‌ಗೆ ಶಿವಣ್ಣನನ್ನು ಕರೆಸಿದ್ದೆವು. ಆ ಈವೆಂಟ್‌ಗೂ ಕೂಡ ರಚಿತಾ ರಾಮ್ ಬರಲಿಲ್ಲ. ಆಟಕ್ಕೆ, ಊಟಕ್ಕೆ ಮತ್ತು ಪಾಠಕ್ಕೆ ಜೊತೆಯಾಗಿದ್ದ ರಚಿತಾ ರಾಮ್ ಅವರು ಹಾಸ್ಪಿಟಲ್‌ಗೆ ಜೊತೆಯಾಗಿ ಬರಲಿಲ್ಲ ಎಂದು ನಾಗಶೇಖರ್ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಫಿಲ್ಮ್ ಚೇಂಬರ್‌ಗೆ ಮನವಿ ಮಾಡಿದ್ದೆ. ದೂರು ಕೊಡೋಣ ಅಂತ ನಿರ್ಧಾರ ಯಾಕೆ ಮಾಡಿದೆ ಅಂದ್ರೆ, ಶಿವಣ್ಣ ಮತ್ತು ಗೀತಕ್ಕ ಅವರು ಸಿನಿಮಾ ನೋಡುತ್ತಿದ್ದಾರೆ. ನಾಳೆ ಈ ಕಾರ್ಯಕ್ರಮಕ್ಕೂ ರಚಿತಾ ರಾಮ್ ಬರಲ್ಲ ಅಂದಾಗ ಇದು ಮಿತಿ ಮೀರಿದೆ. ಈಗ ಅವರು ಏನು ಬರೋದು ಬೇಡ. ಆದರೆ ಅವರು ಯಾಕೆ ಬರ್ತಿಲ್ಲ ಅನ್ನೋ ಉತ್ತರ ಬೇಕು ನನಗೆ ಉಳಿದೆಲ್ಲ ಸಿನಿಮಾಗಳಿಗಿಂತ ರಚಿತಾ ರಾಮ್ ಅವರನ್ನು ಚಂದವಾಗಿ ಈ ಸಿನಿಮಾದಲ್ಲಿ ತೋರಿಸಿದ್ದೇವೆ. ಹೊಟ್ಟೆ ಸೊಂಟ ಶೋ ಮಾಡದೆ ಮುದ್ದಾಗಿ ಕಾಣುವ ಹಾಗೆ ನೋಡಿಕೊಂಡಿದ್ದರೂ ಅವರೇಕೆ ಹೀಗೆ ಮಾಡಿದ್ರು ಎಂಬ ಪ್ರಶ್ನೆ ಮೂಡಿದೆ. ಎಂದು ನಿರ್ದೇಶಕ ನಾಗಶೇಖರ್ ಅಸಮಾಧಾನ ಹೊರಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.