ಬಸವರಾಜ್ ಬೊಮ್ಮಾಯ್ ಜೊತೆ ಅಕ್ರಮ ಸಂಬಂಧ, ಲಾಯರ್ ಜಗದೀಶ್ ಪ್ರಶ್ನೆಗೆ ರಚಿತಾ ರಾಮ್‌ ಸ್ಪಷ್ಟತೆ

 | 
Hh
ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅವರು ಸದ್ಯ ಕನ್ನಡದ ಟಾಪ್‌ ನಟಿಯರಲ್ಲಿ ಒಬ್ಬರು. ಅಲ್ಲದೆ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಕೂಡ. ಸದ್ಯ ರಚಿತಾ ರಾಮ್‌ ಅವರ ಸಂಭಾವನೆಯು ಕೋಟಿ ಕ್ಲಬ್‌ನಲ್ಲಿದೆ. ಅಷ್ಟಕ್ಕೂ ರಚಿತಾ ರಾಮ್‌ ಅವರು ಮೊದಲಿಗೆ ಕಿರುತೆರೆ ಮೂಲಕ ನಟನೆಗೆ ಬಣ್ಣ ಹಚ್ಚಿದವರು. ಇಂದು ಅದ್ಭುತ ನಟಿಯಾಗಿ ಹೊರಹೊಮ್ಮಿದ್ದಾರೆ.
ಸ್ನೇಹಿತರೇ... ಕೆಲ ದಿನಗಳ ಹಿಂದಷ್ಟೇ ನಟಿ ರಚಿತಾ ರಾಮ್ ಬಗ್ಗೆ ಲಾಯರ್ ಜಗದೀಶ್ ಗಂಭೀರ ಆರೋಪಗಳನ್ನ ಮಾಡಿದ್ರು. ನಟಿಯ ಬಗ್ಗೆ ಮಾತಾಡಿದ್ದ ಜಗದೀಶ್ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಎಲ್ಲಾ ಆರೋಪಗಳಿಗೂ ನಟಿ ರಚಿತಾ ರಾಮ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಲಾಯರ್ ಜಗದೀಶ್​ಗೆ ಸಖತ್ ಆಗಿಯೇ ತಿರುಗೇಟು ನೀಡಿದ್ದಾರೆ.​  
ಸ್ನೇಹಿತರೇ.. ಸಂದರ್ಶನ ಒಂದರಲ್ಲಿ ನಿಮ್ಮ ಮೇಲೆ ಲಾಯರ್ ಜಗದೀಶ್ ಮಾಡಿರುವ ಆರೋಪಗಳ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಪ್ರಶ್ನೆಗೆ ಖಡಕ್​ ಉತ್ತರ ಕೊಟ್ಟ ನಟಿ ರಚಿತಾ ರಾಮ್, ತಂದೆ-ತಾಯಿ, ಒಡಹುಟ್ಟಿದವರು ಬಿಟ್ರೇ ಸಂಬಂಧಿಕರು ಕೂಡ ಅದು-ಇದು ಅಂತ ಒಂದಷ್ಟು ಮಾತಾಡ್ತಾರೆ. ಇನ್ನು ಇವರ ಬಗ್ಗೆ ಏನ್​ ಹೇಳಲಿ ಎಂದಿದ್ದಾರೆ.
ಇನ್ನು ನಾನು 12 ವರ್ಷದಿಂದ ಇಂಡಸ್ಟ್ರಿಯಲ್ಲಿ ಕೆಲಸ ಮಾಡ್ತಿದ್ದೇನೆ. ನಾನು ಸಿನಿಮಾಗಳಲ್ಲಿ ಕೆಲಸ ಮಾಡಲು ಪಡೆಯಬೇಕಾದ ಸಂಭಾವನೆ ಕೂಡ ಪಡೆಯುತ್ತಿದ್ದೇನೆ. ಅವಶ್ಯಕತೆ ಇದ್ದ ಕಡೆ ಮಾತ್ರ ಮಾತಾಡುವೆ. ನಾನು ಶೂಟಿಂಗ್​ನಲ್ಲಿ ಬ್ಯುಸಿ ಇರ್ತೀನಿ. ಟೈಮ್ ಸಿಕ್ಕಾಗ ಫ್ಯಾಮಿಲಿ ಜೊತೆ ಕಾಲ ಕಳೆಯುವೆ ನೀವು ಹೇಳಿದ ಆ ವ್ಯಕ್ತಿ ವಯಸ್ಸಲ್ಲಿ ದೊಡ್ಡವರಿದ್ದಾರೆ. ಜೀವನದಲ್ಲಿ ತುಂಬಾ ಅನುಭವ ಇರುವ ವ್ಯಕ್ತಿ. ನನ್ನ ಬಗ್ಗೆ ಏನೇ ಮಾತಾಡಿರಲಿ, ಆ ವ್ಯಕ್ತಿ ಬಗ್ಗೆ ನಾನು ಅಗೌರವ ತೋರುವಂತೆ ಮಾತಾಡಲ್ಲ. ಅಂತೆ-ಕಂತೆಗಳ ಬಗ್ಗೆ ಪ್ರತಿಕ್ರಿಯಿಸೋದಿಲ್ಲ. ನಾನು ಅಂಥಹ ಕೆಲಸ ಮಾಡಿದ್ರೇ, ಹೌದು ನಾನು ಹಾಗೆ ಮಾಡಿದ್ದೇನೆ. ನನ್ನ ಲೈಫ್​ ನನ್ನ ಇಷ್ಟ ಅಂತಿದ್ದೆ. ಆದ್ರೆ ನಾನು ಅಂತಹ ಕೆಲಸ ಮಾಡಿಲ್ಲ. ತಪ್ಪು ಮಾಡಿದ್ರೆ ಒಪ್ಪಿಕೊಳ್ತೇನೆ. ನಾನು ಸರಿಯಾಗಿದ್ದಾಗ ಆ ದೇವರೇ ಬಂದು ತಪ್ಪು ಅಂದ್ರು ನಾನು ಒಪ್ಪೋದಿಲ್ಲ ಎಂದು ರಚಿತಾ ರಾಮ್ ಟಾಂಗ್ ನೀಡಿದ್ದಾರೆ.
ಸ್ನೇಹಿತರೇ..ಒಂದು ವೇಳೆ ಕಷ್ಟ ಬಂದು ಎಲ್ಲವನ್ನ ಕಳೆದುಕೊಂಡ್ರೂ, ನಾನು ದೇವಸ್ಥಾನದಲ್ಲಿ ಕೆಲಸ ಮಾಡಿ ಪ್ರಸಾದ ತಿಂದು ಬದುಕುತ್ತೇನೆ. ಯಾರ ಜೊತೆಗೂ ಹೋಗಿ ನಾನು ಇರುವುದಿಲ್ಲ. ಇದು ನನಗೆ ಅಪ್ಪ-ಅಮ್ಮ ಹೇಳಿಕೊಟ್ಟಿರೋದು ಅಂತ ನಟಿ ರಚಿತಾ ರಾಮ್ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಟಾಪ್​ ನಟಿಯಾಗಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ರಚಿತಾ ರಾಮ್​, ಟಿವಿ ರಿಯಾಲಿಟಿ ಶೋನಲ್ಲಿ ಜಡ್ಜ್​ ಆಗಿಯೂ ಕಾಣಿಸಿಕೊಳ್ಳುತ್ತಾ ಮನರಂಜನೆ ನೀಡಿದ್ದಾರೆ. ಮಜಾ ಭಾರತ್​, ಡ್ರಾಮಾ ಜೂನಿಯರ್ಸ್,  ಭರ್ಜರಿ ಬ್ಯಾಚುಲರ್ಸ್​ ಶೋನಲ್ಲಿ ರಚಿತಾ ರಾಮ್​ ಜಡ್ಜ್ ಆಗಿ ಕಾಣಿಸಿಕೊಂಡಿದ್ದು ಸಖತ್ ಮನರಂಜನೆ ನೀಡಿದ್ರು. ತನ್ನ ನಗುವಿನಿಂದಲೇ ಅಭಿಮಾನಿಗಳ ಮನಗೆದ್ದಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲೂ ನಟಿ ಬ್ಯುಸಿ ಆಗಿದ್ದಾರೆ.