ನನಗೆ ರಚಿತಾ ರಾಮ್ ಅಷ್ಟೋಂದು ಮುಖ್ಯ ಅಲ್ಲ, ಅವಳು ಬೇಡ ಬಿಡಿ ನಮ್ಗೆ ಸಿನಿಮಾ ರೀ ರಿಲೀಸ್ ಆಗಬೇಕು ಅಷ್ಟೇ; ಶ್ರೀನಗರ ಕಿಟ್ಟಿ
Jun 18, 2025, 15:23 IST
|

ಕನ್ನಡ ಚಿತ್ರಗಳನ್ನ ನೋಡುವ ವರ್ಗ ವರ್ಷದಿಂದ ವರ್ಷಕ್ಕೆ ಕುಸಿತ ಇದಿಯಾ? ಕಳೆದ ಹತ್ತು ವರ್ಷಗಳ ಡಾಟಾ ಗಮನಿಸಿದ್ರೆ ಇದು ನಿಜ ಅನಿಸುತ್ತೆ. ಅದರಲ್ಲೂ ಕಳೆದ ಎರಡು ವರ್ಷಗಳ ಲೆಕ್ಕಚಾರವನ್ನ ನೋಡ್ತಿದ್ರೆ? ಕನ್ನಡ ಸಿನಿಮಾಗಳನ್ನ ಥಿಯೇಟರ್ ನಲ್ಲಿ ನೋಡುವ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ ಅಂತಿದೆ ಚಿತ್ರರಂಗ
ಇತ್ತೀಚೆಗೆ ಬಿಡುಗಡೆ ಆದ ‘ಸಂಜು ವೆಡ್ಸ್ ಗೀತಾ 2 ಸಿನಿಮಾಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಮುಂದಿನ ದಿನಗಳಲ್ಲಿ ಈ ಚಿತ್ರಕ್ಕೆ ಥಿಯೇಟರ್ ಕೊರತೆ ಎದುರಾಗುವ ಸಾಧ್ಯತೆ ಇದೆ. ಆ ಬಗ್ಗೆ ಸಿನಿಮಾದ ನಾಯಕ ಶ್ರೀನಗರ ಕಿಟ್ಟಿ ಅವರು ಮಾತನಾಡಿದ್ದಾರೆ. ಇಲ್ಲಿಯ ತನಕ ಏನೂ ಸಮಸ್ಯೆ ಇಲ್ಲ. ನಾವು ಕೇಳಿದ ಸಮಯಕ್ಕೆ ಶೋ ಕೊಟ್ಟಿದ್ದಾರೆ. ಆದರೆ ನಾಡಿದ್ದು ಧನುಷ್, ಆಮಿರ್ ಖಾನ್ ಮುಂತಾದ ನಟರ ಸಿನಿಮಾಗಳು ಬಂದಾಗ ನಮ್ಮ ಸಿನಿಮಾಗೆ ಪ್ರೈಂ ಶೋಗಳನ್ನು ಬಿಟ್ಟು ಬೇರೆ ಸಮಯ ಕೊಡುತ್ತಾರೆ.
ನಮಗೆ ಮಾರ್ನಿಂಗ್ ಶೋ ಕೊಡುತ್ತಾರೆ. ಬೆಳಗ್ಗೆ 9.30ಕ್ಕೆ ಶೋ ಕೊಟ್ಟರೆ ಜನ ಇನ್ನೂ ಎದ್ದಿರುವುದಿಲ್ಲ. ಆಗ ಯಾರು ಚಿತ್ರಮಂದಿರಕ್ಕೆ ಬರುತ್ತಾರೆ? ಹಾಗಾಗಿ ನಮಗೆ ಮೇಜರ್ ಶೋಗಳನ್ನು ಕೊಡಿ ಎಂಬುದು ನಮ್ಮ ಡಿಮ್ಯಾಂಡ್’ ಎಂದು ಶ್ರೀನಗರ ಕಿಟ್ಟಿ ಹೇಳಿದ್ದಾರೆ. ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಅನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅನುವು ಮಾಡಿಕೊಡಬೇಕು ಎಂದು ಸುಪ್ರೀಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಮುಂದಿನ ವಾರ ‘ಥಗ್ ಲೈಫ್’ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.
ಈ ಬಗ್ಗೆ ಮಾತನಾಡಿರುವ ನಟ ಶ್ರೀನಗರ ಕಿಟ್ಟಿ, ‘ಥಗ್ ಲೈಫ್’ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗಲಿದೆಯಂತೆ ಆದರೆ ಯಾವ ಕನ್ನಡಿಗರೂ ಆ ಸಿನಿಮಾ ನೋಡಬೇಡಿ ಎಂದು ಕರೆ ನೀಡಿದ್ದಾರೆ. ಇನ್ನು ಕಳೆದ ವರ್ಷ 231 ಕನ್ನಡ ಸಿನಿಮಾಗಳು ಬಿಡುಗಡೆಯಾಗಿವೆ.
ಈ ಎಲ್ಲಾ ಸಿನಿಮಾಗಳ ಒಟ್ಟು ಟಿಕೆಟ್ ಸೇಲಾಗಿರೋದು ಕೇವಲ 2.6 ಕೋಟಿ ಅಷ್ಟೇ. ಕಳೆದ ಹತ್ತು ವರ್ಷಗಳಲ್ಲಿ ಇದು ಅತಿ ಕಳಪೆ ಸಾಧನೆ ಅಂತ್ಲೇ ಪರಿಗಣನೆಗೆ ಒಳಪಟ್ಟಿದೆ. ಇನ್ನು ಕನ್ನಡ ಚಿತ್ರಕ್ಕೆ ಥಿಯೇಟರ್ ನೀಡುವುದಿಲ್ಲ ಎಂದು ಶ್ರೀನಗರ್ ಕಿಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.