ಬೋಲ್ಡ್ ಆಗಿ ಎಂಟ್ರಿ ಕೊಟ್ಟ ರಚಿತಾ ರಾಮ್; ಪಕ್ಕದಲ್ಲೇ ಇದ್ದ ದರ್ಶನ್ ಮಾಡಿದ ಕೆಲಸಕ್ಕೆ ರಚ್ಚು ಕ.ಣ್ಣೀರು

 | 
Yuu

ಸತೀಶ್ ನೀನಾಸಂ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಮ್ಯಾಟ್ನಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮ್ಯಾಟಿ ಸಿನಿಮಾದ ಟ್ರೈಲರ್ ಲಾಂಚ್ ಮಾಡುವ ಮೂಲಕ ಸಿನಿಮಾಗೆ ಸಾಥ್ ನೀಡಿದರು. ಇಷ್ಟು ದಿನಗಳ ಕಾಲ ತೆರೆ ಮೇಲೆ ಕ್ಯೂಟ್ ಹಾಗೂ ರೋಮ್ಯಾಂಟಿಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ರಚಿತಾ ರಾಮ್ ಮೊದಲ ಬಾರಿಗೆ ಹಾರರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.

ಸತೀಶ್ ನಿನಾಸಂ ಕೂಡ ಇದೆ ಮೊದಲ ಬಾರಿಗೆ ಹಾರರ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಸಾಕಷ್ಟು ಕುತೂಹಲ ಮೂಡಿಸಿದ್ದು ಸಿನಿಮಾದಲ್ಲಿ ಯಾರು ಡೆವಿಲ್  ಎನ್ನುವುದು ಕುತೂಹಲ ಮೂಡಿಸಿದೆ. ನೀನಾಸಂ ಸತೀಶ್ ಅವರು ಮಾತನಾಡಿ, ಯಾಕೋ ಮ್ಯಾಟ್ನಿ ಸಿನಿಮಾ ಇನ್ನು ರಿಲೀಸ್ ಮಾಡಿಲ್ಲ ಮೊದಲು ರಿಲೀಸ್ ಮಾಡಿ ಎಂದು ದರ್ಶನ್ ಹೇಳಿದ್ದರು. 

ಆಗ ಟ್ರೈಲರ್ ಲಾಂಚ್ ಗೆ ಬರಲೇಬೇಕು ಅಂತ ಕೇಳಿಕೊಂಡಿದ್ದೆ. ಮೊದಲು ಸಿನಿಮಾ ಲಾಂಚ್ ಮಾಡಿ ಬರುತ್ತೇನೆ ಅಂದಿದ್ದರು. ರಚಿತಾ ಅವರು ಆಗಲೇ ಮಾತನಾಡಿದ್ದರು. ನಿಮಗಾಗಿ ಹಾಗೂ ರಚಿತಾ ಇದ್ದಾರೆ ಖಂಡಿತ ಬರುತ್ತೇನೆ ಅಂದಿದ್ದರು. ಹಾಗೂ ಗೆಳೆಯ ಡಾಲಿ ಕೂಡ ಇದ್ದಾರೆ. ಮ್ಯಾಟ್ನಿಗೆ ದೊಡ್ಡ ಶಕ್ತಿ ಸಿಕ್ಕಿದೆ, ದೊಡ್ಡ ಮಟ್ಟದಲ್ಲಿ ರೀಚ್ ಆಗಿದೆ ಎಂದರು. ಮ್ಯಾಟ್ನಿ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಡಾಲಿ ಧನಂಜಯ್ ಭಾಗಿಯಾಗಿದ್ದರು.

ಸಿನಿಮಾದಲ್ಲಿ ರಚಿತಾ ಡೆವಿಲ್ ಲುಕ್ ನೋಡಿ ಡಾಲಿ ಹಾಗೂ ದರ್ಶನ್ ಫಿದಾ ಆಗಿದ್ದಾರೆ.ವೇದಿಕೆ ಮೇಲೆ ಮಾತನಾಡಿದ ರಚಿತಾ, ನನ್ನ ಸಿನಿಮಾದ ಟ್ರೈಲರ್ ಅನ್ನು ಮೊದಲ ಬಾರಿಗೆ ದರ್ಶನ್ ಸರ್ ಲಾಂಚ್ ಮಾಡ್ತಾ ಇದ್ದಾರೆ. ತುಂಬಾ ಖುಷಿ ಹಾಗೂ ತುಂಬಾ ಹೆಮ್ಮೆಯಾಗುತ್ತೆ. ನಾನು ತೂಗುದೀಪ ಬ್ಯಾನರ್ ನಿಂದ ಲಾಂಚ್ ಆದವಳು. ಹತ್ತು ವರ್ಷದ ಬಳಿಕ ನನ್ನ ಸಿನಿಮಾದ ಟ್ರೈಲರ್ ಲಾಂಚ್ ಗೆ ಬಂದಿದ್ದು ತುಂಬಾ ಖುಷಿಯಾಗುತ್ತೆ. 

ವೇದಿಕೆ ಮೇಲೆ ಇರುವ ಡಾಲಿ, ಸತೀಶ್, ದರ್ಶನ್ ಸರ್ ಈ  ಮೂವರು ಕಲಾವಿದರ ಜೊತೆ ನಾನು ಕೆಲಸ ಮಾಡಿದ್ದೇನೆ. ತುಂಬಾ ಖುಷಿಯಾಗುತ್ತೆ. ಮ್ಯಾಟ್ನಿ ಸಿನಿಮಾ ನೋಡಿ ಎಂದು ಕೇಳಿಕೊಂಡರು. ದರ್ಶನ್ ಕಾಲಿಗೆ ಬೀಳಲು ಬಂದ ರಚಿತಾ ರಾಮ್ ಅವರನ್ನು ದರ್ಶನ್ ನಗುತ್ತಾ ತಡೆದು ನಗುವನ್ನು ಬೀರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.