ಮದುವೆ ಹನಿಮೂನ್ ಮುಗಿಸಿ ಮತ್ತೆ ಸೀರಿಯಲ್ ಲೋಕಕ್ಕೆ ಎಂಟ್ರಿ ಕೊಟ್ಟ ರಚಿತಾ ರಾಮ್ ತಂಗಿ

 | 
ಗಾ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಂದಿನಿ' ಧಾರಾವಾಹಿಯಲ್ಲಿ ನಂದಿನಿ ಹಾಗೂ ಜನನಿ ಎನ್ನುವ ದ್ವಿಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಬೆಡಗಿ ಹೆಸರು ನಿತ್ಯಾ ರಾಮ್. ತದ ನಂತರ ಕನ್ನಡ ಕಿರುತೆರೆಯಿಂದ ದೂರವಿದ್ದ ನಿತ್ಯಾ ರಾಮ್ ಪರಭಾಷೆಯ ಕಿರುತೆರೆಯಲ್ಲಿ ಅಭಿನಯಿಸಿದ್ದರು. ಬರೋಬ್ಬರಿ ಐದು ವರ್ಷಗಳ ನಂತರ ಕನ್ನಡ ಕಿರುತೆರೆಗೆ ಮರಳಿರುವ ನಿತ್ಯಾ ರಾಮ್ ಶಾಂತಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸಲಿದ್ದಾರೆ.

ಹೌದು, ಉದಯ ವಾಹಿನಿಯಲ್ಲಿ ಶುರುವಾಗಲಿರುವ ಹೊಚ್ಚ ಹೊಸ ಧಾರಾವಾಹಿ ಶಾಂತಿನಿವಾಸದಲ್ಲಿ ನಾಯಕಿ ಶಾಂತಿಯಾಗಿ ನಟಿ ನಿತ್ಯಾ ರಾಮ್ ನಟಿಸಲಿದ್ದಾರೆ. ಅಶಾಂತಿ ತುಂಬಿದ ಮನಸುಗಳ ಮಧ್ಯೆ ಪ್ರೀತಿಯ ಜ್ಯೋತಿ ಹಿಡಿದು ಪ್ರಜ್ವಲಿಸಲು ಬರುತ್ತಿದ್ದಾಳೆ ಶಾಂತಿ. ಶಾಂತಿ ನಿವಾಸ ಧಾರಾವಾಹಿ ಸದ್ಯದಲ್ಲಿಯೇ ಆರಂಭವಾಗಲಿದ್ದು, ಪ್ರೋಮೋ ಕೂಡಾ ಸಾಕಷ್ಟು ಸದ್ದು ಮಾಡಿದೆ. ಜೊತೆಗೆ ತಮ್ಮ ನೆಚ್ಚಿನ ನಟಿಯನ್ನು ಮಗದೊಮ್ಮೆ ತೆರೆ ಮೇಲೆ ನೋಡಲು ಕಿರುತೆರೆ ವೀಕ್ಷಕರು ಕೂಡಾ ಕಾತರದಿಂದ ಕಾಯುತ್ತಿದ್ದಾರೆ.

ಬಯೋ ಟೆಕ್ನಾಲಜಿ ಪದವಿ ಪಡೆದಿರುವ ನಿತ್ಯಾ ರಾಮ್‌ಗೆ ನಟಿಯಾಗುವ ಬಯಕೆಯಿತ್ತು. ಬೆಂಕಿಯಲ್ಲಿ ಅರಳಿದ ಹೂವು ಧಾರಾವಾಹಿಯ ಮಲ್ಲಿಯಾಗಿ ಕಿರುತೆರೆಗೆ ಕಾಲಿಟ್ಟ ನಿತ್ಯಾ ರಾಮ್ ಅಭಿನಯಿಸಿದ್ದು ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಆದರೂ ನಟನೆಯ ಮೂಲಕ ಮೋಡಿ ಮಾಡಿದ ಚೆಲುವೆ.ಮುಂದೆ ಕರ್ಪೂರದ ಗೊಂಬೆಯ ಶ್ರಾವಣಿ, ರಾಜಕುಮಾರಿ ಧಾರಾವಾಹಿಯ ರಾಜಕುಮಾರಿ, ಎರಡು ಕನಸು, ಹಾಗೂ ಪೌರಾಣಿಕ ಧಾರಾವಾಹಿ ಗಿರಿಜಾ ಕಲ್ಯಾಣ ಧಾರಾವಾಹಿಯ ಪಾರ್ವತಿಯಾಗಿ ಮೋಡಿ ಮಾಡಿದ ನಿತ್ಯಾ ರಾಮ್ ತಮಿಳಿನ ಅವಳ್ ಧಾರಾವಾಹಿಯಲ್ಲಿ ಶಾಲಿನಿ ಆಗಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಗೆ ಕಾಲಿಟ್ಟರು.

ಕಿಲಾಡಿ ಕಿಡ್ಸ್' ಶೋ ಜಡ್ಜ್ ಆಗಿದ್ದ ಈಕೆ ಅಸತ್ತಲ್ ಚುಟ್ಟೀಸ್ ಹಾಗೂ ಮಸಾಲ ಕೆಫೆಯ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಇನ್ನು ಮುದ್ದು ಮನಸೇ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಈಕೆ ನಟಸಿದ್ದು ಒಂದೇ ಸಿನಿಮಾದಲ್ಲಿ. ಮಲಯಾಳಂನ ಸಿನಿಮಾದಲ್ಲಿ ನಟಿಸಿರುವ ಈಕೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಶಾಂತಿಯಾಗಿ ಕಿರುತೆರೆಗೆ ಮರಳಲಿರುವ ನಿತ್ಯಾ ರಾಮ್ ವೀಕ್ಷಕರ ಮನ ಸೆಳೆಯುತ್ತಾರಾ ಎಂದು ನೋಡಬೇಕಾಗಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.