ರಚಿತಾ ರಾಮ್ ಮದುವೆ ಫಿಕ್ಸ್, ಕುಣಿದು ಕುಪ್ಪಳಿಸಿದ ಡಿಂಪಲ್‌ ಕ್ವಿನ್

 | 
Bhhu
ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ನಟಿ ರಚಿತಾ ರಾಮ್‌ ಅವರ ಮದುವೆ ವಿಚಾರದ ಬಗ್ಗೆ ಮಹತ್ವದ ಅಪ್ಡೇಟ್‌ ಸಿಕ್ಕಿದೆ. ಇಲ್ಲಿವರೆಗೆ ಮದುವೆ ವಿಚಾರದ ಬಗ್ಗೆ ನಟಿ ರಚಿತಾ ರಾಮ್‌ ಎಲ್ಲಿಯೂ ತುಟಿಬಿಚ್ಚದೆ, ನಾಚಿ ನೀರಾಗುತ್ತಿದ್ದರು. ಮದುವೆ ಬಗ್ಗೆ ಕೇಳುವ ಪ್ರಶ್ನೆಗಳಿಗೆ ನಗುವಿನಲ್ಲೇ ಉತ್ತರ ಕೊಟ್ಟು ಸೈಲೆಂಟ್‌ ಆಗುತ್ತಿದ್ದರು. ಈ ಹಿಂದೆ ನಾನು ಮದುವೆ ಆದ್ರೆ ಗೌಡರ ಹುಡುಗನ್ನೇ ಆಗೋದು ಎಂದಾಗಿನಿಂದಲೂ ರಚಿತಾ ಅವರಿಗೆ ಈಗಾಗಲೇ ಮದುವೆ ಫಿಕ್ಸ್‌ ಆಗಿದೆ ಎಂಬ ಗಾಸಿಪ್‌ ಶುರುವಾಗಿತ್ತು. ಆದರೆ ಹುಡುಗ ಯಾರು? ಮದುವೆ ಯಾವಾಗ? ಅನ್ನೋ ವಿಚಾರ ಗುಟ್ಟಾಗಿಯೇ ಇತ್ತು. ಇದೀಗ ಡಿಂಪಲ್‌ ಕ್ವೀನ್‌ ಮದುವೆ ಬಗ್ಗೆ ಅಧಿಕೃತ ಮಾಹಿತಿಯೊಂದು ಹೊರಬಿದ್ದಿದೆ.
ಈ ವೇಳೆ ಮಧ್ಯಪ್ರವೇಶಿಸಿದ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರು ಬ್ಯಾಚುಲರ್ ಜೀವನವೇ ಒಂದು ಚಾಪ್ಟರ್ ಆದರೆ, ಮದುವೆಯಾದ ನಂತರ ಜೀವನ ಇನ್ನೊಂದು ಚಾಪ್ಟರ್. ಇನ್ನು ಮಗು ಆದ ಮೇಲೆ ಅದು ಇನ್ನೊಂದು ಚಾಪ್ಟರ್ ಎಂದರು. ಆಗ ಡಾಲಿ ಧನಂಜಯ್‌ ಅವರು ರಚಿತಾ ರಾಮ್ ಅವರು ಇನ್ನೂ ಬ್ಯಾಚುಲರ್ ಆಗಿರೋದು ನೋಡಿ ನಮಗೆ ಹೊಟ್ಟೆ ಉರಿಯುತ್ತಿದೆ ಎಂದು ಕಾಲೆಳೆದರು. ಆಗ ರವಿಚಂದ್ರನ್‌ ಅವರು ರಚಿತಾ ರಾಮ್‌ ಈ ವರ್ಷ ಅವರು ಮದುವೆ ಆಗುತ್ತಿದ್ದಾರೆ ಎಂದು ಘೋಷಿಸಿದರು. ಇದನ್ನು ಕೇಳಿ ಕಾರ್ಯಕ್ರಮದಲ್ಲಿದ್ದ ಎಲ್ಲರೂ ಶಾಕ್‌ ಕೂಡ ಆದರು.
ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ರಚಿತಾ ರಾಮ್‌ ಅವರ ಮದುವೆ ಬಗ್ಗೆ ನಿಜಕ್ಕೂ ರವಿಚಂದ್ರನ್‌ ಅವರಿಗೆ ಮಾಹಿತಿ ಇದೆಯೇ? ಅಥವಾ ಸುಮ್ಮನೆ ಜೋಕ್‌ ಮಾಡಲು ಈ ರೀತಿ ಹೇಳಿದ್ದಾರಾ ಎಂಬುದು ಗೊತ್ತಾಗಿಲ್ಲ. ಈ ಬಗ್ಗೆ ಚರ್ಚೆಗಳು ಮಾತ್ರ ಜೋರಾಗಿ ನಡೆಯುತ್ತಿವೆ. ಆದರೆ ಮದುವೆಯಾಗಲಿರುವ ಹುಡುಗ ಯಾರು? ಎಂಬ ಮಾಹಿತಿ ಈವರೆಗೆ ರಿವೀಲ್‌ ಆಗಿಲ್ಲ.
ಈ ಹಿಂದೆ ಹಲವು ನಟರ ಜೊತೆ ರಚಿತಾ ರಾಮ್‌ ಅವರ ಮದುವೆ ವದಂತಿ ಹಬ್ಬಿತ್ತು. ಇನ್ನು ತಮ್ಮ ಮೇಲಿನ ಗಾಸಿಪ್‌ಗಳಿಗೆ ರಚಿತಾ ರಾಮ್‌ ಕೂಡ ಬೋಲ್ಡ್‌ ಉತ್ತರಗಳನ್ನೇ ನೀಡಿದ್ದರು. ನಾನು ಯಾವುದೇ ಗಾಸಿಪ್‌, ಟ್ರೋಲ್‌ಗಳಿಗೆ ತಲೆಕೆಡಿಸಿಕೊಳ್ಳಲ್ಲ ಎಂದು ಹೇಳಿದ್ದರು. ಆದರೂ ಅವರ ಮದುವೆ ವಿಚಾರದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರು ಹೇಳಿದಂತೆ ಇದೇ ವರ್ಷದೊಳಗೆ ರಚಿತಾ ಅವರ ಮದುವೆ ಆಗುತ್ತಾ ಎನ್ನುವುದು ಕಾದು ನೋಡಬೇಕಿದೆ. ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.