ಕಂಬಿ ಹಿಂದೆ ದ ರ್ಶನ್ ನೋಡಿ ಬಿಕ್ಕಿಬಿಕ್ಕಿ ಅತ್ತ ರಚ್ಚು
Aug 23, 2024, 08:57 IST
|
ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿ 2 ತಿಂಗಳುಗಳೇ ಕಳೆದು ಹೋಗಿದೆ. ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ ಬಳಿಕ ಕನ್ನಡ ಚಿತ್ರರಂಗ ನಿರ್ಮಾಪಕರು, ನಿರ್ದೇಶಕರು, ನಟ-ನಟಿಯರು ಹಾಗೂ ಸ್ನೇಹಿತರು ಸೇರಿದಂತೆ ಅನೇಕರು ಜೈಲಿಗೆ ಬಂದು ದರ್ಶನ್ ಭೇಟಿ ಆಗಿದ್ದಾರೆ.
ಇದೀಗ ಕನ್ನಡದ ಸ್ಟಾರ್ ನಟಿ ರಚಿತಾ ರಾಮ್ ಕೂಡ ಸೆಂಟ್ರಲ್ ಜೈಲಿಗೆ ಆಗಮಿಸಿದ್ರು.ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿಗೆ ಬಂದ ರಚಿತಾ ರಾಮ್ ಸ್ಪೆಷಲ್ ಎಂಟ್ರಿ ಮೂಲಕ ಒಳಗೆ ಹೋಗಿದ್ದಾರೆ. ನಟಿ ರಚಿತಾ ರಾಮ್ ಜೊತೆ ಬಿಜೆಪಿ ಮುಖಂಡ ಸಚ್ಚಿದಾನಂದ ಕೂಡ ಆಗಮಿಸಿದ್ರು. ದರ್ಶನ್ ಜೈಲು ಸೇರಿ 2 ತಿಂಗಳಾದ ಬಳಿಕ ಮೊದಲ ಬಾರಿಗೆ ರಚಿತಾ ರಾಮ್ ನಟನನ್ನು ನೋಡಲು ಜೈಲಿಗೆ ಭೇಟಿ ನೀಡಿದ್ರು.
ಜೈಲಿನಲ್ಲಿ ನಟ ದರ್ಶನ್ ಕಂಡು ರಚಿತಾ ರಾಮ್ ಕಣ್ಣೀರು ಹಾಕಿದ್ದು, ಇದೇ ವೇಳೆ ನಟ ದರ್ಶನ್ ಅವರೇ ರಚಿತಾಗೆ ಧೈರ್ಯ ಹೇಳಿದ್ದರಂತೆ. ಬಳಿಕ ನಟಿ ರಚಿತಾ ರಾಮ್ ನಟ ದರ್ಶನ್ ಅವರ ಯೋಗಕ್ಷೇಮ ವಿಚಾರಿಸಿದ್ರಂತೆ. ನಟ ದರ್ಶನ್ ಜೊತೆ ಕೆಲ ಹೊತ್ತು ಸಿನಿಮಾ ರಂಗದ ಬಗ್ಗೆ ಚರ್ಚೆ ನಡೆಸಿದ್ರು ಎನ್ನಲಾಗ್ತಿದೆ.
ನಟ ದರ್ಶನ್ ಅವರನ್ನು ಭೇಟಿಯಾಗಿ ಹೊರಗೆ ಬಂದು ಮಾಧ್ಯಮಗಳ ಜೊತೆ ಮಾತಾಡಿದ ರಚಿತಾ ರಾಮ್, ದರ್ಶನ್ ನೋಡಲು ಬರೋದಕ್ಕೆ ಇಷ್ಟು ದಿನ ಮಾಡಿದ್ರಾ ಎಂದು ಕೆಲವರು ಪ್ರಶ್ನೆ ಮಾಡ್ತಾರೆ. ನಾನು ರಾಜನನ್ನು ರಾಜನ ಥರಾ ನೋಡೋಕೆ ಇಷ್ಟಪಡುತ್ತಿದ್ದೆ. ಈ ಥರಾ ನೋಡೋಕೆ ನನಗೆ ಇಷ್ಟ ಇರಲಿಲ್ಲ. ಅವ್ರ ಬ್ಯಾನರ್ನಿಂದಲೇ ನಾನು ಇಂಟ್ರಡ್ಯೂಸ್ ಆಗಿದ್ದು ಅವ್ರು ನೋ ಅಂದಿದ್ರೆ.
ಬಿಂದ್ಯಾ ರಾಮ್, ರಚಿತಾ ರಾಮ್ ಆಗುತ್ತಿರಲಿಲ್ಲ ಅವರ ಋಣ ನನ್ನ ಹಾಗೂ ನನ್ನ ಫ್ಯಾಮಿಲಿ ಮೇಲಿದೆ ಎಂದು ರಚಿತಾ ರಾಮ್ ಹೇಳಿದ್ರು.ನಾನು ಕೂಡ ದರ್ಶನ್ ಫ್ಯಾನ್, ತುಂಬಾ ಮಿಸ್ ಮಾಡಿಕೊಳ್ತಿದ್ದೇವೆ. ಈಗ ಜೈಲಿನಲ್ಲಿ ದರ್ಶನ್ ನೋಡುತ್ತಿದ್ದಂತೆ ನಾನು ಭಾವುಕಳಾದೆ. ಅವ್ರೇ ನನಗೆ ಧೈರ್ಯ ಹೇಳಿದ್ರು, ಸಮಾಧಾನ ಮಾಡಿದ್ರು. ದರ್ಶನ್ ಆರೋಗ್ಯ ವಿಚಾರಿಸಿದೆ.
ಅವರು ತುಂಬಾ ಆರೋಗ್ಯವಾಗಿದ್ದಾರೆ. ನಾನು ಚೆನ್ನಾಗಿದ್ದೇನೆ ಎಂದು ಹೇಳಿದ್ರು. ಆದಷ್ಟು ಬೇಗ ಅವರು ಹೊರಗೆ ಬರ್ತಾರೆ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ ಎಂದು ರಚಿತಾ ರಾಮ್ ಹೇಳಿದ್ರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.