'ಯಾರೆಲೆ ನಿನ್ನ ಮುದ್ದಿನ ಗಂಡ' ಹಾಡಿಗೆ ರಾಧಿಕಾ ಕುಮಾರಸ್ವಾಮಿ ಸಕ್ಕತ್ ಡ್ಯಾನ್ಸ್, ಮೂಕವಿಸ್ಮಿರಾದ ಜನ

 | 
ರ

ಸ್ಯಾಂಡಲ್‌ವುಡ್‌ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಆಕ್ಟಿವ್ ಆಗಿದ್ದಾರೆ. ಹಲವು ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಫ್ಯಾನ್ಸ್‌ಗೆ ಮನರಂಜನೆ ನೀಡುತ್ತಾರೆ. ಕ್ರಿಸ್ಮಸ್ ಹಬ್ಬದಲ್ಲಿಯೂ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದರು. ಆ ವಿಡಿಯೋ ಕೂಡ ವೈರಲ್ ಆಗಿತ್ತು.

ಇನ್ನು, ಇತ್ತೀಚೆಗೆ ನಟಿ ರಾಧಿಕಾ ಕುಮಾರಸ್ವಾಮಿ, ಸಿಪಾಯಿ ಸಿನಿಮಾದ ಹಾಡಿಗೆ ರೀಲ್ಸ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈಗಾಗಲೇ ಎಂಟೂವರೆ ಲಕ್ಷಕ್ಕೂ ಅಧಿಕ ವೀವ್ಸ್ ಪಡೆದಿರುವ ಈ ರೀಲ್ಸ್‌ಗೆ ನೆಟ್ಟಿಗರು ತರಾವರಿ ಕಾಮೆಂಟ್‌ಗಳನ್ನು ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಸಿಪಾಯಿ ಸಿನಿಮಾದ ಯಾರಲೇ ನಿನ್ನ ಮೆಚ್ಚಿದವನು ಹಾಡಿಗೆ ನಟಿ ರಾಧಿಕಾ ಕುಮಾರಸ್ವಾಮಿ ಸೊಂಟ ಬಳುಕಿಸಿದ್ದಾರೆ.

ಸೀರೆಯುಟ್ಟು ನವಿಲಿನಂತೆ ನುಲಿದಿದ್ದು, ನೆಟ್ಟಿಗರು ಕಾಮೆಂಟ್ ಮೂಲಕ ಯಾರಲೇ ನಿನ್ನ ಮುದ್ದು ಗಂಡ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ತಾವೇ ಉತ್ತರವನ್ನು ನೀಡಿದ್ದಾರೆ.ರಾಧಿಕಾ ಕುಮಾರಸ್ವಾಮಿಯ ಈ ಹಾಟ್ ಡ್ಯಾನ್ಸ್ ಈಗ ಸೋಷಿಯಲ್ ಮೀಡಿಯಾ ಹಾಟ್ ಟಾಪಿಕ್ ಆಗ್ತಿದೆ. ಯಾಕಂದ್ರೆ ರಾಧಿಕಾ ಮತ್ತಷ್ಟು ಸ್ಲಿಮ್ ಆಗಿ ಕಾಣಿಸುತ್ತಿದ್ದು, ಈಗಿನ ಹೀರೋಯಿನ್ಸ್‌ಗೆ ಕಾಂಪೀಟ್ ಮಾಡೋ ಹಾಗೆ ಮಿಂಚಿದ್ದಾರೆ.https://www.instagram.com/reel/C1wiMR5PUo8/?igsh=MTc4MmM1YmI2Ng==

ನಟಿ ರಾಧಿಕಾ ಕುಮಾರಸ್ವಾಮಿ ಇಲ್ಲಿಯವರೆಗೂ ತಮ್ಮ ಗಂಡನ ಹೆಸರನ್ನು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಕಡು ನೀಲಿ ಮತ್ತು ಗುಲಾಬಿ ಬಣ್ಣದ ಸೀರೆಯುಟ್ಟು, ಕೈ ತುಂಬಾ ಬಲೆಗಳು, ಮೂಗಿಗೆ ಮೂಗುತಿ, ಕೊರಳಿಗೆ ಚಮದನೆಯ ಚೋಕರ್ ಹಾಕಿ ಸೊಂಟ ಬಳುಕಿಸಿದ್ದಾರೆ. ಯಾರಲೇ ನಿನ್ನ ಮುದ್ದು ಗಂಡ ಎಂದಾಗ ನಾಚಿ ನಲಿದಿದ್ದಾರೆ.

ಈ ವಿಡಿಯೋದಲ್ಲಿ ನಟಿ ಮತ್ತಷ್ಟು ಸ್ಲಿಮ್ ಮತ್ತು ಸುಂದರವಾಗಿ ಕಾಣಿಸುತ್ತಿದ್ದಾರೆ. ಅದಕ್ಕೆ ಯಾರಲೇ ನಿನ್ನ ಮುದ್ದು ಗಂಡ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.ಜೊತೆಗೆ ಸ್ವೀಟಿ, ರಾಧಿಕಾ ಮೇಡಂ ಬ್ಯೂಟಿ ಕ್ವೀನ್ ಆಫ್ ಕರ್ನಾಟಕ, ಓಲ್ಡ್ ಐಸ್ ಗೋಲ್ಡ್ ಕನ್ನಡ ಸಾಂಗ್, ನಿಮ್ಮ ಸೊಂಟ ಸೂಪರ್ ಆಗಿದೆ, ಹೀಗೆ ನಿಮ್ಮ ಅಂದವನ್ನು ಮೆಂಟೈನ್ ಮಾಡಿ, ಸೂಪರ್ ಮೇಡಂ ನಿಮ್ಮ ಭೈರಾದೇವಿ ಸಿನಿಮಾ ಯಶಸ್ಸು ಗಳಿಸಲಿ ಎಂದು ಹಲವು ಮಂದಿ ಕಾಮೆಂಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.